ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಹುಟ್ಟುಹಬ್ಬದ ನಿಜವಾದ ಸಂಭ್ರಮ ಎಂದರೆ ಇನ್ನೊಬ್ಬರ ಮುಖದಲ್ಲಿ ನಗು ಮೂಡಿಸುವುದು. ಇಂದು ಆ ನಗುವನ್ನು ನಮ್ಮ ಸರ್ಕಾರಿ ಶಾಲೆಯ ಮಕ್ಕಳ ಮುಖದಲ್ಲಿ ಕಾಣುತ್ತಿದ್ದೇವೆ ಎಂದು ಸರ್ಕಾರಿ ನೌಕರರ ಸಂಘಧ ತಾಲ್ಲೂಕ ಘಟಕದ ಅಧ್ಯಕ್ಷ ಚನ್ನಯ್ಯ ಮಠಪತಿ ಹೇಳಿದರು.
ತಾಲ್ಲೂಕಿನ ಅರಕೇರಿಯ ಶಿವಾಜಿನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ಕಲಾವಿದ ಗೋಪಾಲ ಇಂಚಗೇರಿ ಅವರಿಂದ ಅವರ ಮಗಳು ಶೀತಲಳ ಜನ್ಮ ದಿನದ ಪ್ರಯುಕ್ತ ಶಾಲೆಯ ಎಲ್ಲ ಮಕ್ಕಳಿಗೆ ಪರೀಕ್ಷೆ ಬರೆಯಲು ಸಹಾಯವಾಗುವ ಕ್ಲೀಪ್ಯಾಡ್ ಹಾಗೂ ಪೆನ್ನು ಸ್ವೀಕರಿಸಿ ಅವರು ಮಾತನಾಡಿದರು.
ಇಂದು ನೀವು ನೀಡಿರುವ ಪೆನ್, ಕ್ಲೀಪ್ಯಾಡ ಕಲಿಕೋಪಕರಣಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೇರಣೆಯಾಗಲಿವೆ. ಕಲಿಕೋಪಕರಣಗಳು ಕೇವಲ ವಸ್ತುಗಳಲ್ಲ, ಅವು ಮಕ್ಕಳ ಕನಸುಗಳಿಗೆ ರೆಕ್ಕೆಗಳನ್ನು ನೀಡುವ ಸಾಧನಗಳು. ಇಂದು ನೀಡಿರುವ ಈ ಸಣ್ಣ ಕೊಡುಗೆ ನಾಳೆಯ ದೊಡ್ಡ ಸಾಧನೆಗೆ ಅಡಿಪಾಯವಾಗಬಹುದು.
ತಮ್ಮ ಮಗಳ ಜನ್ಮದಿನವನ್ನು ಕೇವಲ ಕುಟುಂಬದ ಸಂಭ್ರಮವಾಗಿಸದೆ, ಶಾಲೆಯ ಮಕ್ಕಳಿಗೆ ಕಲಿಕೋಪಕರಣಗಳನ್ನು ನೀಡುವ ಮೂಲಕ ಸಮಾಜಮುಖಿ ಕಾರ್ಯವಾಗಿ ಆಚರಿಸಿರುವ ದಾನಿ ಕುಟುಂಬಕ್ಕೆ ನಮ್ಮ ಶಾಲೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಕೃತಜ್ಞತೆಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕಲಾ ಸಿಂಚನ ಕಲಾವಿದ ಗೋಪಾಲ ಹೂಗಾರ್ , ಗಾಯಕ ಕೃಷ್ಣ, ಜಿಲ್ಲಾ ಶಿಕ್ಷಕ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಬೋಳಸೂರ, ಗೋಪಾಲ್ ಇಂಚಿಗೇರಿ ಅವರ ಕುಟುಂಬ ಸದಸ್ಯರು, ದೀಪಾ ಪಲ್ಯದ ಉಪಸ್ಥಿತರಿದ್ದರು.

