ಬಸವನಬಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದಲ್ಲಿ ಪ್ರತ್ಯೇಕವಾಗಿ ಇಬ್ಬರು ವ್ಯಕ್ತಿಗಳು ತಮ್ಮ ಅನಾರೋಗ್ಯದಿಂದ ಮನನೊಂದು ನೇಣಿಗೆ ಶರಣಾದ ಘಟನೆ ಜರುಗಿದೆ.
ಗ್ರಾಮದ ಸಿದ್ದಪ್ಪ ಪಕೀರಪ್ಪ ಅಂಬಿಗೇರ(೪೩) ಅವರು ಮೂಲವ್ಯಾದಿಯಿಂದ ಬಳಲುತ್ತಿರುವದರಿಂದಾಗಿ ಅವರು ಮನನೊಂದು ತಮ್ಮ ಮನೆಯಲ್ಲಿ ಏ.೨, ಮಂಗಳವಾರದಂದು ಸಂಜೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುಣಶ್ಯಾಳ ಪಿಬಿ ಗ್ರಾಮದ ಭೀಮಪ್ಪ ಗಿರಿಯಪ್ಪ ಡೋಣೂರ(ಹಳ್ಳಿ) (೮೪) ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವದರಿಂದಾಗಿ ಹೂವಿನಹಿಪ್ಪರಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಏ.೨ ಮತ್ತು ೩ ರ ಬೆಳಗಿನ ಜಾವದ ಮಧ್ಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ಘಟನಾ ಸ್ಥಳಕ್ಕೆ ಪಿಐ ವಿಜಯ ಮರಗುಂಡಿ, ಪಿಎಸ್ಐ ರವಿ ಪವಾರ, ಎಎಸ್ಐ ಎಂ.ಐ.ತಳವಾರ, ಎ.ಎಚ್.ರೆಡ್ಡೇರ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
