Author: editor.udayarashmi@gmail.com

ಮೋರಟಗಿ: ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸೇವಾ ಸಮೀತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ೧೦೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ೧೦೩ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.೧) ರಕ್ಷಿತಾ ಗೋಗಿ ೫೭೯(೯೬.೫೦%) ೨) ಆಕಾಶ ಮದರಿ ೫೭೮ (೯೬.೩೩%) ೩) ಮಹೇಶ್ ತಳವಾರ ೫೭೫(೯೫.೮೩%)ಮೂರು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.ಉತ್ತಮ ಸಾಧನೆ ಮಾಡಿ ಕಾಲೇಜಿನ ಕೀರ್ತಿ ಹೆಚ್ಚಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಶ್ರೀಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಚೇರಮೇನ್ ರು ಕಾರ್ಯದರ್ಶಿಗಳು ನಿರ್ದೇಶಕರುಗಳು ಮತ್ತು ಆಡಳಿತ ಮಂಡಳಿ ಶಿಕ್ಷಕರ ವರ್ಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read More

ಮೋರಟಗಿಯಲ್ಲಿ ಸಂಭ್ರಮದ ರಂಜಾನ್ ಆಚರಣೆ | ಸಾಮೂಹಿಕ ಪ್ರಾರ್ಥನೆ ಮೋರಟಗಿ: ಹುಟ್ಟು ಆಕಸ್ಮಿಕ, ಸಾವು ಅಂತೂ ನಿಶ್ಚಿತ. ಹುಟ್ಟು ಸಾವಿನ ಮದ್ಯದಲ್ಲಿ ದಾನ, ಧರ್ಮ, ಪರೋಪಕಾರ, ಮಾಡಿ ಪರ ಧರ್ಮದ ವ್ಯಕ್ತಿಯನ್ನು ಪ್ರೀತಿಯಿಂದ ಕಂಡು ಜೀವನ ಕಳೆಯಬೇಕು ಎಂದು ಅಂಜುಮನ್ ಸಮೀತಿ ಅಧ್ಯಕ್ಷ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮೈಬೂಬಸಾಬ ಕಣ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು.ರಮಜಾನ್ ಹಬ್ಬದ ಪ್ರಯುಕ್ತ ಗುರುವಾರ ಗ್ರಾಮದ ಇದಗಾ ಮೈದಾನದ ಅವರಣದಲ್ಲಿ ಹಮ್ಮಿಕೊಂಡ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬಲಗೈಯಿಂದ ಕೊಟ್ಟ ದಾನ ಎಡಗೈಗೆ ಗೊತ್ತಾಗಬಾರದು ಅದು ಶ್ರೇಷ್ಠ ದಾನ, ಅನಾಥರು, ಅಂಗವಿಕಲರು, ನಿರ್ಗತಿಕರು ವೃದ್ಧರು ಕಂಡಲ್ಲಿ ಕೈಲಾದಷ್ಟು ಸಹಾಯ ಮಾಡಿ, ಇನ್ನೊಬ್ಬರಿಗೆ ಅನ್ಯ ಬಗೆಯಬೇಡಿ, ಇರುವಷ್ಟು ದಿನ ಶಾಂತಿ ಸಹಬಾಳ್ವೆಯಿಂದ ಜೀವನ ಕಳೆಯಬೇಕು. ಪರಮಾತ್ಮ ದೇಶದ ಎಲ್ಲ ಸಮುದಾಯದ ಬಾಂಧವರಿಗೆ ಅರೋಗ್ಯ ಕರುಣಿಸಲಿ ನಮ್ಮ ದೇಶಕ್ಕೆ ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಆಗಲಿ ಎಂದು ಹಾರೈಸಿದರು.ನಂತರ ಸಾಮೂಹಿಕ ಪ್ರಾರ್ಥನೆ ಜರುಗಿತು. ಮೈಲಾನ ಮಂತ್ರವನ್ನು ಪಟಿಸಿದರು, ನಮಾಜ ನಂತರ…

Read More

ಸಂಭ್ರಮದ ರಮಜಾನ್ ಈದ್ ಆಚರಣೆ ಚಿಮ್ಮಡ: ಶಾಂತಿ, ಸಮಾನತೆಯ ಸಂಕೇತವಾಗಿರುವ ಪವಿತ್ರ ರಂಜಾನ್ ಹಬ್ಬವನ್ನು ಗ್ರಾಮದ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದೊಂದಿಗೆ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಳ್ಳುವ ಮೂಲಕ ಆಚರಿಸಿದರು.ಗ್ರಾಮದ ಈದ್ಗಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ ೯-೧೫ ಘಂ,ಗೆ ಸೇರಿದ ಬಾಂಧವರು ದುಆ ಮೂಲಕ ದೇಶಾದ್ಯಂತ ಶಾಂತಿ ಸೌಹಾರ್ದತೆ ಬೆಳಗಲಿ, ಪ್ರತಿಯೊಬ್ಬರು ಸನ್ಮಾರ್ಗದತ್ತ ಬರಲಿ, ಪ್ರತಿಯೊಬ್ಬರ ವಯಕ್ತಿಕ ತೊಂದರೆಗಳು ದೂರವಾಗಿ ನೆಮ್ಮದಿಯಿಂದ ಜೀವನ ನಡೆಸಲು ಅನುಗ್ರಹಿಸುವಂತೆ ಅಂಜುಮನ್ ಸಮೀತಿಯ ಅಧ್ಯಕ್ಷ ಹಾಫಿಜ ಸಲೀಮ ಜಮಖಂಡಿ, ಹಾಫಿಜ್ ಲಾಲ್ ಮೊಹಮ್ಮದ, ಹಾಫಿಜ ಆದಮ್ ಸರಕಾವಸ, ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಹಾಫಿಜ ಆಶಿಫ ಕೌಜಲಗಿಯವರು ಕಳೆದ ಒಂದು ತಿಂಗಳ ಕಾಲ ಸಾಮೂಹಿಕ ಕುರಾನ ಪಠನವನ್ನು (ತರಾವಿಹ ನಮಾಜ) ನೆರವೇರಿಸಿದರುಇದರ ಮೂಲಕ ಕಳೆದ ಒಂದು ತಿಂಗಳಿನಿಂದ ಆಚರಿಸಲಾಗುತಿದ್ದ ರೋಜಾ ( ಉಪವಾಸ ವೃತ ) ಆಚರಣೆಗೆ ವಿಧಾಯ ಹೇಳಲಾಯಿತು.ಸೌಹಾರ್ದತೆಯ ಅನಾವರಣ: ಕಳೆದ ಒಂದು ತಿಂಗಳಿನಿಂದ ಆಚರಿಸಲಾಗುತಿದ್ದ ರೋಜಾ ವ್ರತಧಾರಿಗಳಿಗೆ ರಾಜಕೀಯ ಮುಖಂಡರು ಸೇರಿದಂತೆ…

Read More

ವಿಜಯಪುರ: ತೊರವಿ ಭಾಗಕ್ಕೂ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ತವರೂರಿನ ಋಣ ತೀರಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ತೊರವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರ ಬುಧವಾರ ರಾತ್ರಿ ಪ್ರಚಾರ ಕೈಗೊಂಡು ಅವರು ಮಾತನಾಡಿದರು.ರಾಜ್ಯ ಸರಕಾರ ಪ್ರತಿಯೊಬ್ಬರ ಮನೆಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿದೆ. ಆದರೆ, ಕೇಂದ್ರ ಸರಕಾರ ಜನರ ಜೀವನವನ್ನು ಬೆಲೆ ಏರಿಕೆಯಿಂದ ದುರ್ಭರಗೊಳಿಸಿದೆ. ಪೆಟ್ರೋಲ್, ಅಡುಗೆ ಅನಿಲ ಬೆಲೆ ಹೆಚ್ಚಳವಾದಾಗ ಗದ್ದಲ ಉಂಟು ಮಾಡುತ್ತಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಂಥವರು ಈಗ ಮೌನ ವಹಿಸಿದ್ದಾರೆ. ಚುನಾವಣೆ ಬಾಂಡ್ ಇವರ ನಿಜವಾದ ಮುಖವಾಡವನ್ನು ಬಯಲು ಮಾಡಿದೆ ಎಂದು ಅವರು ಹೇಳಿದರು.ನಾವು ಕೊಟ್ಟ ಭರವಸೆ ಈಡೇರಿಸಿ ಮತ ಕೇಳಲು ಬಂದಿದ್ದೇವೆ. ಸಬ್ ಕಾ ಸಾಥ್ ಎಂದವರು ಈಗ ದೇಶದಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ಈ ಸಲ ಅವರಿಗೆ ಪ್ರಸ್ತಾಪಿಸಲು ಯಾವುದೇ ವಿಷಯಗಳಿಲ್ಲ. ಯಾವ ಗಾಳಿಯೂ ಇಲ್ಲ. ನಿಮ್ಮೂರಿನ…

Read More

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕ ಗ್ರಾಮ ಚವಡಿಹಾಳ ಗ್ರಾಮದಲ್ಲಿರುವ ಶ್ರೀ ಭಾಗ್ಯವಂತಿ ವಿದ್ಯಾವರ್ಧಕ ಸಂಘದ ಶ್ರೀ ಭಾಗ್ಯವಂತಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವ್ಯಾಸಂಗಮಾಡಿದ ಬಡವಮತ್ತು ರೈತರ ಮಕ್ಕಳಾದ ಬಾಲಕಿಯರು ಕಲಾ, ವಿಜ್ಞಾನ & ವಾಣಿಜ್ಯ ವಿಭಾಗದಲ್ಲಿ ೯೯%, ೯೮%, ಮತ್ತು ೯೬% ಅಂಕಗಳನ್ನು ಪಡೆದು ತಾಲೂಕಾ ಮಟ್ಟದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿ ಜಿಲ್ಲೆಯ ಶೈಕ್ಷಣಿಕಸಾಧನೆಗೆ ಗರಿ ಮೂಡಿಸಿದ್ದಾರೆ.ಇಂಡಿ ತಾಲೂಕಿನ ಗಡಿಭಾಗದಹಳ್ಳಿ ಚವಡಿಹಾಳ ಒಂದ ಚಿಕ್ಕ ಗ್ರಾಮ. ರೈತರು, ಬಡವರ ಮದ್ಯಮ ವರ್ಗದಮತ್ತು ಹಿಂದುಳಿದ ಶ್ರಮಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಜನಸಮುದಾಯದ ಈ ಹಳ್ಳಿಯಲ್ಲಿಹಿಂದುಳಿದ ವರ್ಗದ ಆಡಳಿತದಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆ ಶ್ರೀ ಭಾಗ್ಯವಂತಿ ವಿದ್ಯಾವರ್ಧಕ ಸಂಘ. ಇದು ಅಪ್ಪಟ ಗ್ರಾಮಿಣ ಪ್ರದೇಶವಾಗಿದ್ದು ಭಿಮಾತೀರದ ಸೆರಗಿನಲ್ಲಿದ್ದ ಈ ಗ್ರಾಮದ ಶಾಂತಪ್ಪ. ಪಂಚಪ್ಪ ದಶವಂತ ಎಂಬುವರುಈ ಭಾಗದ ಬಡಮಕ್ಕಳಿಗೆ ಶಿಕ್ಷಣ ದೊರೆತರೆ, ಬಡವ ಬದುಕು ಹಸನಾಗುವುದೆಂಬ ಯೋಚನೆಯಿಂದ ೧೯೯೧ರಲ್ಲಿಪ್ರಾಥಮಿಕ ಶಾಲೆಯಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ, ೨೦೨೧ರಲ್ಲಿ ಪದವಿ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಇಡೀ ಜಗತ್ತಿನ ವಿವಿಧ ಭಾಷೆಗಳ ಸಾಹಿತ್ಯವನ್ನು ಗಮನಿಸಿದರೆ ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ ಬಹುಶಹ ಕನ್ನಡ ಸಾಹಿತ್ಯದಲ್ಲಿರುವ ಕಥೆ, ಕವನ, ಕಾವ್ಯ, ವಚನಗಳು, ಕೀರ್ತನೆಗಳು ಚಿಂತನಗಳು, ಸಿದ್ದಾಂತಗಳು, ಜನಪದ ಸಾಹಿತ್ಯ, ಪುರಾಣಗಳು ಪುಣ್ಯ ಕಥೆಗಳು,ಹನಿಗವನಗಳು ಮಿಡಿಗವನಗಳು, ಚುಟುಕಗಳು, ಸಾಂಗತ್ಯಗಳು,ದ್ವಿಪದಿಗಳು, ತ್ರಿಪದಿಗಳು, ಸುನೀತಗಳು ನಾಟಕಗಳು ಹೀಗೆ ಹತ್ತು ಹಲವು ಪ್ರಕಾರಗಳನ್ನು ನಾವು ಕಾಣಬಹುದು. ತಾವು ಬದುಕುತ್ತಿರುವ ರೀತಿ ಸಮಾಜದ ನೀತಿ ಹೆಣ್ಣು ಮಕ್ಕಳಿಗೆ ಇದ್ದ ಸೂಕ್ಷ್ಮವಾದ ಸಂವೇದನೆಗಳು ಆಕೆಯ ಆಸೆಯ ಆಕಾಂಕ್ಷೆಗಳು ತಲ್ಲಣಗಳು ಪ್ರೀತಿ ಪ್ರೇಮ ಕರುಣೆ ಮುಂತಾದ ನವರಸಗಳನ್ನು ಸುರಿಸುವ ಕೆಲವೊಮ್ಮೆ ಸಮಾಜವನ್ನು ಬಡಿದೆಚ್ಚರಿಸುವ ಸಾಹಿತ್ಯ ಹೆಣ್ಣು ಮಕ್ಕಳಿಂದ ಸೃಷ್ಟಿಯಾಯಿತು. ಈ ರೀತಿ ಸಾಹಿತ್ಯ ಸೃಷ್ಟಿಯಾಗುವ ಮುನ್ನ ಕಂತಿ ಎಂಬ ಮಹಿಳೆ ಮೊಟ್ಟಮೊದಲ ಬಾರಿ ಕವನಗಳನ್ನು ರಚಿಸಿದಳು ಎಂಬುದು ನಮ್ಮ ಗಮನಕ್ಕೆ ಬರುತ್ತದೆ, ಆದರೂ ಆಕೆಯ ಯಾವುದೆ ಕೃತಿಗಳು ಇಂದಿನವರೆಗೂ ಲಭ್ಯವಾಗಿಲ್ಲ. ಆದ್ದರಿಂದ ವಚನಕಾರ್ತಿ, ಕದಳಿಯ ಕರ್ಪೂರ…

Read More

ಸಿಂದಗಿ: ತಾಲೂಕಿನ ಕನ್ನೊಳ್ಳಿ ಗ್ರಾಮದ ಶ್ರೀ.ಡಿ. ಎಸ್.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಣೆಗೊಂಡಿದ್ದು ಕಾಲೇಜಿನ ಫಲಿತಾಂಶ 98.43% ರಷ್ಟು ದಾಖಲಾಗಿದೆ.ಕುಮಾರಿ – ಸೌಮ್ಯ ಗೌರ 569/600 ಪ್ರಥಮ ಸ್ಥಾನ, ಕುಮಾರಿ – ಶಶಿಕಲಾ ಮಂಗೊಂಡಿ -568/600 ದ್ವಿತೀಯ ಸ್ಥಾನ, ಕುಮಾರಿ – ಪ್ರೀಯಾ ಸುಂಟ್ಯಾಣ 557/600 ತೃತೀಯ ಸ್ಥಾನ ಪಡೆದಿದ್ದಾರೆ. ಕಾಲೇಜಿನಲ್ಲಿ ಒಟ್ಟು 64 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು ಅದರಲ್ಲಿ 63 ವಿದ್ಯಾರ್ಥಿಗಳು ತೇರ್ಗಡೆ ಹೊಂದ್ದಿದ್ದಾರೆ. ಅದರಲ್ಲಿ 32 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್), ಮತ್ತು 31 ವಿದ್ಯಾರ್ಥಿಗಳು ಉತ್ತಮ ಶ್ರೇಣಿ (ಪ್ರಥಮ ಶ್ರೇಣಿ)ಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಈ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿದ್ದನಗೌಡ ಪಾಟೀಲ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು, ಕಾಲೇಜಿನ ಪ್ರಚಾರ್ಯರಾದ ಶ್ರೀ ಐ.ಡಿ.ಪಡಶೆಟ್ಟಿ ಹಾಗೂ ಉಪನ್ಯಾಸಕ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ

Read More

ವಿಜಯಪುರ: ಸುಮಾರು ೧೦೦ ವರ್ಷಗಳ ಹಿಂದಿನ ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇರು ಬಿಟ್ಟು ಸಮಾಜದಲ್ಲಿ ಒಂದು ಬಹುದೊಡ್ಡ ಕಂದಕವನ್ನೆ ನಿರ್ಮಿಸಿ ಶಿಕ್ಷಣ ಎನ್ನುವುದು ಕೆಲವರಿಗೆ ಮಾತ್ರ ಸಿಮಿತವಾಗಿರುವ ಕಾಲಘಟ್ಟದಲ್ಲಿ ದಲಿತ, ಶೋಷಿತ, ನಿರ್ಗತಿಕ, ಹಿಂದುಳಿದ ಪುರುಷ ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಸಮಾಜದಲ್ಲಿರುವ ತಾರತಮ್ಯಗಳನ್ನು ಎದುರಿಸಿ ಅನೇಕ ರೀತಿಯ ಸವಾಲುಗಳ ಮಧ್ಯ ಅಕ್ಷರ ಬೀಜ ಬಿತ್ತುವುದರೊಂದಿಗೆ ಬಹುದೊಡ್ಡ ಹೋರಾಟ ಮಾಡಿದ ಮಹಾನ ಮಹಾತ್ಮ ಜ್ಯೋತಿಬಾ ಫುಲೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ಮುಖಂಡ ಪ್ರಜ್ವಲ ಅಫಜಲಪುರ ಹೇಳಿದರು.ಜಿಲ್ಲೆಯ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಮಹಾತ್ಮಾ ಜ್ಯೋತಿಬಾ ಫುಲೆ ಅವರ ಜಯಂತ್ಯುತ್ಸವನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಆಚರಿಸಲಾಯಿತು.ತನ್ನ ಧರ್ಮಪತ್ನಿಯಾದ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಜೊತೆಗೂಡಿ ಶಿಕ್ಷಣದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿ ನೆರೆಯ ಮಹಾರಾಷ್ಟ್ರದಲ್ಲಿ ಪ್ರಾರಂಭವಾದ ಈ ಶಿಕ್ಷಣ ಕ್ರಾಂತಿ ದೇಶದ ಎಲ್ಲಕಡೆಗೂ ಪಸರಿಸಿ ಈ ನಾಡಿನಲ್ಲಿ ಎಲ್ಲರನ್ನು ಶಿಕ್ಷಣವಂತರಾಗಲು ಈ ದಂಪತಿಗಳ ಪಾತ್ರ ಎಂದಿಗೂ ಅಜರಾಮರವಾಗಿದೆ, ಆದ್ದರಿಂದ ಪ್ರತಿದಿನ…

Read More

ಜಾನಪದ ಸಂಭ್ರಮ | ಕಜಾಪ ವಡವಡಗಿ ವಲಯ ಘಟಕ ಉದ್ಘಾಟನೆ | ಗೋನಾಳ ಅಭಿಮತ ಬಸವನಬಾಗೇವಾಡಿ: ಜಾನಪದ ಸಂಸ್ಕೃತಿಯು ಆಚಾರ-ವಿಚಾರ, ನೀತಿ-ನಿಯಮ, ನಂಬಿಕೆ – ಸಂಪ್ರದಾಯ, ಮಾತು -ಹರಟೆ, ಮತ್ತು ಆಚರಣೆಗಳ ಮೂಲಕ ಮೌಖಿಕ ಪರಂಪರೆಯ ಮೂಲಕ ಜನರ ಒಳಿತಿಗಾಗಿ ಉಳಿದುಕೊಂಡಿವೆ. ಸಾರ್ವತ್ರಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತ ಇಡಿ ಜಗತ್ತಿಗೆ ಮಾದರಿಯಾಗಿವೆ ಎಂದು ಕನ್ನಡ ಜಾನಪದ ಪರಿಷತ್ ಮುದ್ದೇಬಿಹಾಳ ತಾಲೂಕಾಧ್ಯಕ್ಷ ಎ ಆರ್ ಮುಲ್ಲಾ ಹೇಳಿದರು.ಬಸವನಬಾಗೇವಾಡಿ ತಾಲೂಕಿನ ಜಾಯವಾಡಗಿಯಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ತಾಲೂಕು ಘಟಕ ಬಸವನಬಾಗೇವಾಡಿ ಹಾಗೂ ಸೋಮನಾಥ ವ ಶಿವಪ್ಪ ಮುತ್ಯಾನ ಜಾತ್ರಾ ಸಮಿತಿ ಸಹಯೋಗದಲ್ಲಿ “ಜಾನಪದ ಸಂಭ್ರಮ” ಹಾಗೂ ” ಕ ಜಾ ಪ ವಡವಡಗಿ ವಲಯ ಘಟಕ” ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಡಾ ಎಸ್ ಬಾಲಾಜಿ ಮತ್ತು ಜಿಲ್ಲೆಯಲ್ಲಿ ಬಾಳನಗೌಡ ಪಾಟೀಲರ ನೇತೃತ್ವದಲ್ಲಿ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಭರದಿಂದ ಸಾಗುತ್ತಿದೆ. ಸಂಘ ಸಂಸ್ಥೆಗಳು ಸಹಕಾರ ನೀಡಬೇಕೆಂದು ಮನವಿ…

Read More

ವಿಜಯಪುರ: ಸುಳ್ಳು ಹೇಳುವವರನ್ನು ನಂಬದೇ ಸತ್ಯದ ಪರ ಇರುವವರಿಗೆ ಮತಹಾಕಿ ಗೆಲ್ಲಿಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮತದಾರರಿಗೆ ಕರೆ ನೀಡಿದ್ದಾರೆ.ವಿಜಯಪುರ ನಗರದಲ್ಲಿ ಇಂದು ಬುಧವಾರ ಮುಸ್ಸಂಜೆ ನಡೆದ ನಾಗಠಾಣ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ಚುನಾವಣೆ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರೊ.ರಾಜು ಆಲಗೂರ ಎರಡು ಬಾರಿ ಶಾಸಕರಾಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಟ್ಟಾ ಕಾಂಗ್ರೆಸ್ಸಿಗರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಕಳೆದ ಸಲ ಜೆಡಿಎಸ್ ಗೆ ಟಿಕೇಟ್ ನೀಡಿದ ಹಿನ್ನೆಲೆ ಆಲಗೂರ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿರಲಿಲ್ಲ. ಈ ಬಾರಿ ಒಮ್ಮತದ ಅಭ್ಯರ್ಥಿಯಾಗಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಶಾಸಕರಾಗಿ ವಿಧಾನಸಭೆಯಲ್ಲಿ ಮಾಡಿದಂತೆ ಲೋಕಸಭೆಯಲ್ಲಿ ವಿಜಯಪುರದ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದರು.ಸಂಸದ ರಮೇಶ ಜಿಗಜಿಣಗಿ ಅವರು ಯಾವುದೇ ಕೆಲಸ ಮಾಡಿಲ್ಲ. ರೇಲ್ವೆ ಮೇಲ್ಸೇತುವೆ ಕುರಿತು ಅವರು ಪ್ರಸ್ತಾಪಿಸುತ್ತಾರೆ. ಆದರೆ, ಈ ರೇಲ್ವೆ ಮೇಲ್ಸೇತುವೆಯಲ್ಲಿ ರಾಜ್ಯ…

Read More