ಮೋರಟಗಿಯಲ್ಲಿ ಸಂಭ್ರಮದ ರಂಜಾನ್ ಆಚರಣೆ | ಸಾಮೂಹಿಕ ಪ್ರಾರ್ಥನೆ
ಮೋರಟಗಿ: ಹುಟ್ಟು ಆಕಸ್ಮಿಕ, ಸಾವು ಅಂತೂ ನಿಶ್ಚಿತ. ಹುಟ್ಟು ಸಾವಿನ ಮದ್ಯದಲ್ಲಿ ದಾನ, ಧರ್ಮ, ಪರೋಪಕಾರ, ಮಾಡಿ ಪರ ಧರ್ಮದ ವ್ಯಕ್ತಿಯನ್ನು ಪ್ರೀತಿಯಿಂದ ಕಂಡು ಜೀವನ ಕಳೆಯಬೇಕು ಎಂದು ಅಂಜುಮನ್ ಸಮೀತಿ ಅಧ್ಯಕ್ಷ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮೈಬೂಬಸಾಬ ಕಣ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ರಮಜಾನ್ ಹಬ್ಬದ ಪ್ರಯುಕ್ತ ಗುರುವಾರ ಗ್ರಾಮದ ಇದಗಾ ಮೈದಾನದ ಅವರಣದಲ್ಲಿ ಹಮ್ಮಿಕೊಂಡ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಲಗೈಯಿಂದ ಕೊಟ್ಟ ದಾನ ಎಡಗೈಗೆ ಗೊತ್ತಾಗಬಾರದು ಅದು ಶ್ರೇಷ್ಠ ದಾನ, ಅನಾಥರು, ಅಂಗವಿಕಲರು, ನಿರ್ಗತಿಕರು ವೃದ್ಧರು ಕಂಡಲ್ಲಿ ಕೈಲಾದಷ್ಟು ಸಹಾಯ ಮಾಡಿ, ಇನ್ನೊಬ್ಬರಿಗೆ ಅನ್ಯ ಬಗೆಯಬೇಡಿ, ಇರುವಷ್ಟು ದಿನ ಶಾಂತಿ ಸಹಬಾಳ್ವೆಯಿಂದ ಜೀವನ ಕಳೆಯಬೇಕು. ಪರಮಾತ್ಮ ದೇಶದ ಎಲ್ಲ ಸಮುದಾಯದ ಬಾಂಧವರಿಗೆ ಅರೋಗ್ಯ ಕರುಣಿಸಲಿ ನಮ್ಮ ದೇಶಕ್ಕೆ ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಆಗಲಿ ಎಂದು ಹಾರೈಸಿದರು.
ನಂತರ ಸಾಮೂಹಿಕ ಪ್ರಾರ್ಥನೆ ಜರುಗಿತು. ಮೈಲಾನ ಮಂತ್ರವನ್ನು ಪಟಿಸಿದರು, ನಮಾಜ ನಂತರ ಬಡವರಿಗೆ ಕಿಟ್ ಬಟ್ಟೆ ವಿತರಿಸಿ ಮುಸ್ಲಿಂ ಸಮುದಾಯದ ಎಲ್ಲ ಬಾಂದವರು ಗ್ರಾಮದ ಪ್ರಮುಖ ರಸ್ತೆಯ ಮೂಲಕ ಸಂಚರಿಸಿ ಪರಧರ್ಮದ ಹಿರಿಯರಿಗೆ ಯುವಕರಿಗೆ ಅಪ್ಪುಗೆ ಮಾಡಿ ಮನೆ ಮನೆಗೆ ಕರೆಸಿ ಸುರಕುಂ ಕುಡಿಸಿ ಸಂಭ್ರಮಿಸಿ ರಮಜಾನ್ ಹಬ್ಬವನ್ನು ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಿದರು.
ಪ್ರಾರ್ಥನಾ ಸಮಾರಂಭದಲ್ಲಿ ಅಬ್ಬಾಸಲಿ ಬಳೂರಗಿ, ಮೈಬುಬ ಕಕ್ಕಳಮೆಲಿ, ಸೈಯದಸಾಬ ಗೊರಗುಂಡಗಿ, ಸಲೀಮ್ ಕಣ್ಣಿ, ಹಸನಸಾಬ ಶಿರಷ್ಯಾಡ್, ಎಂ ಕೆ ಮುಲ್ಲಾ, ರಜಾಕ್ ಬಾಗವಾನ, ಅಬ್ಬಾಸಲಿ ಬಂಟನೂರ, ಸೇರಿದಂತೆ ಅನೇಕರು ಇದ್ದರು.

