ವಿಜಯಪುರ: ಸುಮಾರು ೧೦೦ ವರ್ಷಗಳ ಹಿಂದಿನ ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇರು ಬಿಟ್ಟು ಸಮಾಜದಲ್ಲಿ ಒಂದು ಬಹುದೊಡ್ಡ ಕಂದಕವನ್ನೆ ನಿರ್ಮಿಸಿ ಶಿಕ್ಷಣ ಎನ್ನುವುದು ಕೆಲವರಿಗೆ ಮಾತ್ರ ಸಿಮಿತವಾಗಿರುವ ಕಾಲಘಟ್ಟದಲ್ಲಿ ದಲಿತ, ಶೋಷಿತ, ನಿರ್ಗತಿಕ, ಹಿಂದುಳಿದ ಪುರುಷ ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಸಮಾಜದಲ್ಲಿರುವ ತಾರತಮ್ಯಗಳನ್ನು ಎದುರಿಸಿ ಅನೇಕ ರೀತಿಯ ಸವಾಲುಗಳ ಮಧ್ಯ ಅಕ್ಷರ ಬೀಜ ಬಿತ್ತುವುದರೊಂದಿಗೆ ಬಹುದೊಡ್ಡ ಹೋರಾಟ ಮಾಡಿದ ಮಹಾನ ಮಹಾತ್ಮ ಜ್ಯೋತಿಬಾ ಫುಲೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ಮುಖಂಡ ಪ್ರಜ್ವಲ ಅಫಜಲಪುರ ಹೇಳಿದರು.
ಜಿಲ್ಲೆಯ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಮಹಾತ್ಮಾ ಜ್ಯೋತಿಬಾ ಫುಲೆ ಅವರ ಜಯಂತ್ಯುತ್ಸವನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಆಚರಿಸಲಾಯಿತು.
ತನ್ನ ಧರ್ಮಪತ್ನಿಯಾದ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಜೊತೆಗೂಡಿ ಶಿಕ್ಷಣದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿ ನೆರೆಯ ಮಹಾರಾಷ್ಟ್ರದಲ್ಲಿ ಪ್ರಾರಂಭವಾದ ಈ ಶಿಕ್ಷಣ ಕ್ರಾಂತಿ ದೇಶದ ಎಲ್ಲಕಡೆಗೂ ಪಸರಿಸಿ ಈ ನಾಡಿನಲ್ಲಿ ಎಲ್ಲರನ್ನು ಶಿಕ್ಷಣವಂತರಾಗಲು ಈ ದಂಪತಿಗಳ ಪಾತ್ರ ಎಂದಿಗೂ ಅಜರಾಮರವಾಗಿದೆ, ಆದ್ದರಿಂದ ಪ್ರತಿದಿನ ಇಂತಹ ಮಹಾನ ಸಾಧಕರ ಸಾಧನೆಯನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ ಎಂದರು
ಈ ವೇಳೆ ಸಂತೋಷ ಪೂಜಾರಿ, ರಮೇಶ ಚಲವಾದಿ, ಮಹಾಂತೇಶ ಚಲವಾದಿ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

