ಸಂಭ್ರಮದ ರಮಜಾನ್ ಈದ್ ಆಚರಣೆ
ಚಿಮ್ಮಡ: ಶಾಂತಿ, ಸಮಾನತೆಯ ಸಂಕೇತವಾಗಿರುವ ಪವಿತ್ರ ರಂಜಾನ್ ಹಬ್ಬವನ್ನು ಗ್ರಾಮದ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದೊಂದಿಗೆ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಳ್ಳುವ ಮೂಲಕ ಆಚರಿಸಿದರು.
ಗ್ರಾಮದ ಈದ್ಗಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ ೯-೧೫ ಘಂ,ಗೆ ಸೇರಿದ ಬಾಂಧವರು ದುಆ ಮೂಲಕ ದೇಶಾದ್ಯಂತ ಶಾಂತಿ ಸೌಹಾರ್ದತೆ ಬೆಳಗಲಿ, ಪ್ರತಿಯೊಬ್ಬರು ಸನ್ಮಾರ್ಗದತ್ತ ಬರಲಿ, ಪ್ರತಿಯೊಬ್ಬರ ವಯಕ್ತಿಕ ತೊಂದರೆಗಳು ದೂರವಾಗಿ ನೆಮ್ಮದಿಯಿಂದ ಜೀವನ ನಡೆಸಲು ಅನುಗ್ರಹಿಸುವಂತೆ ಅಂಜುಮನ್ ಸಮೀತಿಯ ಅಧ್ಯಕ್ಷ ಹಾಫಿಜ ಸಲೀಮ ಜಮಖಂಡಿ, ಹಾಫಿಜ್ ಲಾಲ್ ಮೊಹಮ್ಮದ, ಹಾಫಿಜ ಆದಮ್ ಸರಕಾವಸ, ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಹಾಫಿಜ ಆಶಿಫ ಕೌಜಲಗಿಯವರು ಕಳೆದ ಒಂದು ತಿಂಗಳ ಕಾಲ ಸಾಮೂಹಿಕ ಕುರಾನ ಪಠನವನ್ನು (ತರಾವಿಹ ನಮಾಜ) ನೆರವೇರಿಸಿದರು
ಇದರ ಮೂಲಕ ಕಳೆದ ಒಂದು ತಿಂಗಳಿನಿಂದ ಆಚರಿಸಲಾಗುತಿದ್ದ ರೋಜಾ ( ಉಪವಾಸ ವೃತ ) ಆಚರಣೆಗೆ ವಿಧಾಯ ಹೇಳಲಾಯಿತು.
ಸೌಹಾರ್ದತೆಯ ಅನಾವರಣ: ಕಳೆದ ಒಂದು ತಿಂಗಳಿನಿಂದ ಆಚರಿಸಲಾಗುತಿದ್ದ ರೋಜಾ ವ್ರತಧಾರಿಗಳಿಗೆ ರಾಜಕೀಯ ಮುಖಂಡರು ಸೇರಿದಂತೆ ಹಲವಾರು ಜನ ಹಿಂದೂ ಬಾಂಧವರು ಈಫ್ತಾರ ಕೂಟ ಏರ್ಪಡಿಸುವ ಮೂಲಕ, ಹಾಗೂ ರೋಜಾ ವೃತ ಆಚರಿಸುವ ಮೂಲಕ ಸೌಹಾರ್ದತೆ ಮೆರೆದರು. ಮುಸ್ಲಿಂ ಬಾಂಧವರು ಕೂಡ ಹಬ್ಬದಂದು ತಮ್ಮ ಹಿಂದೂ ಮಿತ್ರರನ್ನು ಮನೆಗೆ ಆವ್ಹಾನಿಸಿ ವಿಶೇಷ ಸಿಹಿ ಖಾದ್ಯ ಸುರಕುರಮಾ ತಿನ್ನಿಸುವ ಮೂಲಕ ಖುಷಿ ಪಟ್ಟರು. ಐದು ವರ್ಷದ ಮಕ್ಕಳಿಂದ ಹಿಡಿದು ೯೦ ವರ್ಷದ ವಯೋವೃದ್ದರ ವರೆಗೆ ಬೆಳಿಗ್ಗೆ ೪.೫೦ ಗಂ.ಯಿಂದ ಸಂಜೆ ೬.೫೦ ರವರೆಗೆ ಬಾಯಲ್ಲಿ ಹನಿ ನೀರು ಹಾಕದೆ ಒಂದು ತಿಂಗಳ ಕಾಲ ರೋಜಾ ಆಚರಣೆ ಮಾಡುವ ಮೂಲಕ ಹಬ್ಬದ ಸಾರ್ಥಕತೆ ಮೆರೆದರು ಮುಸ್ಲಿಂ ಸಮಾಜದ ಪ್ರಮುಖರಾದ ರುಸ್ತುಂ ಮಾಲದಾರ ಹನಿಫ ಚಿಕ್ಕೋಡಿ, ಅಮೀರಲಿ ಸರಕಾವಸ, ಮೀರಾಸಾಬ ಯಾದವಾಡ, ಹಾಜಿಲಾಲ ಜಮಾದಾರ, ಅಲ್ಲಾವುದ್ದೀನ ಮೋಪಗಾರ ಉಪಸ್ಥಿತರಿದ್ದರು.

