Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರೇವತಗಾಂವ ಗ್ರಾಮದಲ್ಲಿ ದುರ್ಗಾದೇವಿ ದೇವರುಗಳ ಭವ್ಯ ಭೇಟಿ ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮದ ದುರ್ಗಾದೇವಿ ಜಾತ್ರೆಯ ಅಂಗವಾಗಿ ಮಂಗಳವಾರದಂದು ದುರ್ಗಾದೇವಿ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು.ಗ್ರಾಮದ ಮಾತಂಗ ಓಣೆಯಲ್ಲಿರುವ ದುರ್ಗಾದೇವಿ ಜಾತ್ರೆಯ ನಿಮಿತ್ತ ನಸುಕಿನ ಜಾವ ದುರ್ಗಾದೇವಿಯ ಪುಣ್ಯಸ್ಥಾನವು ಬೀಮಾ ನದಿಯ ನೀರಿನಿಂದ ನೇರವೇರಿಸಿ ವಾಸುದೇವ, ಮುದಕಪ್ಪ ಹಾಗೂ ದುರ್ಗಪ್ಪ ಪೂಜಾರಿಗಳಿಂದ ರುದ್ರಾಬಿಷೇಕ ಪೂಜೆಯು ಜರುಗಿತು. ಭಕ್ತರಿಂದ ದೀರ್ಘದಂಡ ನಮಸ್ಕಾರವನ್ನು ಸಲ್ಲಿಸುವ ಮೂಲಕ ತಮ್ಮ ಹರಿಕೆಗಳನ್ನು ತೀರಿಸಿದರು. ನಂತರ ಜಾತ್ರೆಯಲ್ಲಿ ಸೇರಿದ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವು ಜರುಗಿತು. ನಂತರ ಗ್ರಾಮದ ಕಲಾವಿದರಿಂದ ಚೌಡಕಿ ಪದಗಳು ಜರುಗಿದವು.ಸಾಯಂಕಾಲ ೫ ಗಂಟೆ ಗ್ರಾಮದ ದುರ್ಗಾದೇವಿ ಹಾಗೂ ತಿಕೋಟದ ದುರ್ಗಾದೇವಿ ಪಲ್ಲಕ್ಕಿಗಳ ಮೆರವಣಿಗೆಯು ವಿವಿಧ ವಾದ್ಯ ವೈಭವಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ನೆರದ ಭಕ್ತ ಸಮೂಹ ಮುಂದೆ ದೇವರುಗಳ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮವು ಸಡಗರದಿಂದ ಜರುಗಿತು. ಈ ವೇಳೆಯಲ್ಲಿ ಭಕ್ತರು ಭಂಡಾರ, ಬದಾಮ,…
ವಿಜಯಪುರ: ಬಿಸಿಲಿನ ತಾಪಕ್ಕೆ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗದಿರಲೆಂದು ಆಯ್ದ ಮತಗಟ್ಟೆ ಕೇಂದ್ರಗಳಲ್ಲಿ ಶೆಡ್ ಅಥವಾ ಪರದೆಯ ನೆರಳಿನ ವ್ಯವಸ್ಥೆ ಹಾಗೂ ನಿರೀಕ್ಷಣಾ ಕೊಠಡಿ (ವೇಟಿಂಗ್ ರೂಮ್) ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿರುವ ಟಿ. ಭೂಬಾಲನ್ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ವಿಷಯಗಳಾದ ಮಸ್ಟರಿಂಗ, ಡಿ ಮಸ್ಟರಿಂಗ್ ಹಾಗೂ ಮತದಾನ ದಿನದ ಪೂರ್ವಭಾವಿ ಸಿಧ್ಧತೆ ಕುರಿತು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗವು ನೀಡಿರುವ ಮಾರ್ಗಸೂಚಿಗಳ ಅನ್ವಯ ಮತಗಟ್ಟೆ ಕೇಂದ್ರಗಳಲ್ಲಿ ಫ್ಯಾನ್, ನೀರು, ನೇರಳು, ಕೂಡಲು ಆಸನಗಳ ವ್ಯವಸ್ಥೆ ಆದ್ಯತೆ ಮೇರೆಗೆ ಕಲ್ಪಿಸುವ ಕಾರ್ಯವಾಗಬೇಕು ಎಂದರು.ಪ್ರತಿ ಮತಗಟ್ಟೆಯಲ್ಲಿ ಕೂಡಾ ಪ್ರಥಮ ಚಿಕಿತ್ಸೆಯ ಪೆಟ್ಟಿಗೆ, ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ಮತ್ತು ಒಆರ್‌ಎಸ್ ಪಟ್ಟಣ ಇರುವ ವ್ಯವಸ್ಥೆ ಆಗಬೇಕು. ತುರ್ತು ಸನ್ನಿವೇಶದ ಕರೆ ಬಂದ ತಕ್ಷಣ ಅ್ಯಂಬುಲೆನ್ಸ್ ತಲುಪುವಂತಾಗಬೇಕು. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನ ಮತದಾರರಿಗೆ ಗಾಲಿ ಕುರ್ಚಿ ನೀಡುವ…
ವಿಜಯಪುರ: ವಿದ್ಯುತ್ ದುರಸ್ತಿ ಕಾಮಗಾರಿ ನಿಮಿತ್ಯ ಮೇ ೨ರಂದು ಬೆಳಗ್ಗೆ ೮.೩೦ ರಿಂದ ಮಧ್ಯಾಹ್ನ ೧೧.೩೦ ರ ವರೆಗೂ ೧೧೦ ಕೆವಿ ಸಿಟಿ ವಿಜಯಪುರ ಹಾಗೂ ಜುಮನಾಳ ವಿದ್ಯುತ್ ವಿತರಣ ಕೇಂದ್ರದಿಂದ ಹೊರಡುವ ಎಲ್ಲಾ ೧೧ ಕೆವಿ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಆದ ಕಾರಣ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ವಿಜಯಪುರ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಜಿಲ್ಲೆಯಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯಗೆ ಸೂಕ್ತ ಮಾರ್ಗೊಪಾಯಗಳನ್ನು ಕಂಡುಕೊಂಡು, ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಕುಡಿಯುವ ನೀರಿನ ಪರಿಸ್ಥಿತಿ ನಿರ್ವಹಣೆ ಕುರಿತು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿರೃದ್ಧಿ ಕೋಶ, ವಿಜಯಪುರ ನಗರ ನೀರು ಸರಬರಾಜು ಮಂಡಳಿ, ಸಣ್ಣ ನೀರಾವರಿ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಭೂತನಾಳ್ ಕೆರೆಯಿಂದ ಪ್ರತಿದಿನ ೧೯.೦೮ಎಂ ಎಲ್ ನೀರು ಸರಬರಾಜು ಮಾಡುವ ಯೋಜನೆ ಇರುವುದು, ಆದರೆ ಭೂತನಾಳ ಕೆರೆಯಲ್ಲಿ ಈ ಸದ್ಯ ನೀರಿನ ಲಭ್ಯತೆ ಕಡಿಮೆ ಇರುವದರಿಂದ ಲಭ್ಯ ಇರುವ ನೀರನ್ನು ವಿಜಯಪುರ ನಗರದಲ್ಲಿ ಬರುವ ಸ್ಥಳಿಯ ಸಂಸ್ಥೆಯ ೧೪ ವಾರ್ಡ್ಗಳಿಗೆ ವಾರಕ್ಕೊಮ್ಮೆ , ೮ ವಾರ್ಡ್ಗಳಿಗೆ ೩ ಅಥವಾ ೪ದಿನಕ್ಕೊಮ್ಮೆ, ಇನ್ನುಳಿದ ೧೩ ವಾಡ್‌ಗಳಿಗೆ ೫-೬ ದಿನಗಳಿಗೊಮ್ಮೆ ನೀರು ಪೂರೈಸುವ ಕಾರ್ಯ ವಾಗಬೇಕು ಎಂದರು.ಪರ್ಯಾಯವಾಗಿ ವಿಜಯಪುರ ನಗರದ ೩೫ ವಾರ್ಡಗಳಲ್ಲಿ…
ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷಗೋಪಾಲ ಘಟಕಾಂಬಳೆ ಡಾ.ಬಾಬುರಾಜೇಂದ್ರ ನಾಯಕ ವಿರುದ್ಧ ಕಿಡಿ ವಿಜಯಪುರ:ಡಾ.ಬಾಬುರಾಜೇಂದ್ರ ನಾಯಕ ಅವರು ಬಿಜೆಪಿ ಲೋಕಸಭೆ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಮಾಜಿ ಸಚಿವ ಅಪ್ಪುಪಟ್ಟಣಶೆಟ್ಟಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.ವೈದ್ಯರಾಗಿ ಯಾವರೀತಿ ಮಾತನಾಡಬೇಕು ಎಂಬ ಸೌಜನ್ಯ ಅವರಲ್ಲಿ ಇಲ್ಲ ಎಂದು ರಾಜ್ಯ ಎಸ್ಸಿ ಕೋರ್ಚಾ ಉಪಾಧ್ಯಕ್ಷ, ಗೋಪಾಲ ಘಟಕಾಂಬಳೆ ಕಿಡಿಕಾರಿದರು.ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಎಲ್ಲಿ ಬೇಕಾದರೂ ನಿಲ್ಲಲು ಅವಕಾಶ ಇದೆ. ಸಂಸದ ಜಿಗಜಿಣಗಿ ಅವತಿಗೆ ಪ್ರಜ್ಞೆ ಇಲ್ಲ ಎಂದಿದ್ದಾರೆ. ಅವರಿಗೆ ತಿಳುವಳಿಕೆಯ ಕೊರತೆ ಇದೆ.ಅವರು ನಿಲ್ಲಬಾರದು ಎಂದು ಎಲ್ಲೂ ಹೇಳಿಲ್ಲ, ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿ ಸ್ಪರ್ಧೆ ಮಾಡಿದರೂ, ನಮ್ಮ ನಾಯಕರಾಗಲಿ, ಕಾರ್ಯಕರ್ತರು ಏನೂ ಹೇಳಿಲ್ಲ. ನಮ್ಮ ನಾಯಕರಿಗೆ ಆ ಧ್ಯಾನ ಇದೆ. ನಿಮಗೆ ಬೆನ್ನು ಹತ್ತಿ ಸ್ಪರ್ದೆ ಮಾಡಬೇಡಿ ಎಂದು ಕಾಂಗ್ರೆಸ್ ನವರು ಹಿಂದೆ ತೆಗೆಸಿದ್ದಾರೆ, ಅದರ ಪರಿಜ್ಞಾನ ಇಲ್ಲದ ಕಾಂಗ್ರೆಸ್ ನವರಿಗೆ ಹೇಳಲಿ ಎಂದು ಟಾಂಗ್ ನೀಡಿದರು.ಬಿಜೆಪಿ ಪಕ್ಷಕ್ಕೆ…
ವಿಜಯಪುರ: 10 ವರ್ಷಗಳ ಕಾಲ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಕೆಲಸಗಳು ಅಲ್ಪಸಂಖ್ಯಾತರಿಗೆ ತೃಪ್ತಿ ತಂದಿವೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಅನೀಲ ಥಾಮಸ್ ಹೇಳಿದರು.ಬುಧವಾರ ನಗರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಭಾರತದ ಆರ್ಥಿಕತೆಯನ್ನು 5 ನೇ ಸ್ಥಾನಕ್ಕೆ ತಂದಿದ್ದಾರೆ. ಈಗ ಮುಂದಿನ 5 ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು 3ನೇ ಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.2047 ರ ವೇಳೆಗೆ ಭಾರತದ 100ನೇ ಸ್ವಾತಂತ್ರೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಭಾರತ ವಿಶ್ವಗುರು ಆಗಲಿದೆ. ಅದರಲ್ಲಿ ಮುಸ್ಲಿಂಮರು ಕ್ರೈಸ್ತರು ಸೇರಿದಂತೆ ಎಲ್ಲ ಅಲ್ಪಸಂಖ್ಯಾತರ ಕೊಡುಗೆ ಇರಲಿದೆ ಎಂದು ತಿಳಿಸಿದರು.ಬಿಜೆಪಿ ಕೇವಲ ಹಿಂದುಗಳ ಪಕ್ಷವಲ್ಲ. ಅಲ್ಪಸಂಖ್ಯಾತರು ಕೂಡಾ ಪ್ರಧಾನಿ ಮೋದಿ ಜಾರಿಗೊಳಿಸಿದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಎಲ್ಲ ಅಲ್ಪಸಂಖ್ಯಾತರು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿದ್ದಾರೆ. ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗಲಿದೆ. ನಾವು ಕೂಡಾ ಪ್ರಧಾನಿಯಾಗಿ ಮೋದಿ ಅವರನ್ನೇ ನೋಡಬಯಸುತ್ತಿದ್ದೇವೆಂದು ತಿಳಿಸಿದರುಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ…
ವಿಜನ್ ವಿಜಯಪುರ-10 ಅಂಶಗಳಿಗೆ ಒತ್ತು” ವಿಜಯಪುರ ಕ್ಷೇತ್ರದ ಚುನಾವಣೆ ಪ್ರನಾಳಿಕೆ ಬಿಡುಗಡೆ ವಿಜಯಪುರ: ಇಲ್ಲಿಯ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ನಾನು ತಮ್ಮ ಆಶೀರ್ವಾದದಿಂದ ಲೋಕಸಭಾ ಸದಸ್ಯನಾಗಿ ಆಯ್ಕೆಯಾದರೆ ನನ್ನ ಅವಧಿಯಲ್ಲಿ ಜಿಲ್ಲೆಯ ಪ್ರಮುಖ ವಿಷಯಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸತತ ಪ್ರಯತ್ನ ಮಾಡಿ, ಜಾರಿಗೆ ತರುವಲ್ಲಿ ಶ್ರಮಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಭರವಸೆ ನೀಡಿದರು.ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಜಿಲ್ಲೆಯ ಅಭಿವೃದ್ಧಿಗಾಗಿ “ವಿಜನ್ ವಿಜಯಪುರ-10 ಅಂಶಗಳಿಗೆ ಒತ್ತು” ಎಂಬ ತಮ್ಮ ಕ್ಷೇತ್ರದ ಚುನಾವಣೆ ಪ್ರನಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.೧. ನೀರಾವರಿ: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ವಿಜಯಪುರ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಲು ಅಗತ್ಯವಿರುವ ಕೇಂದ್ರ ಸರ್ಕಾರದಲ್ಲಿ 2010 ರಿಂದ ನೆನೆಗುದಿಗೆ ಬಿದ್ದಿರುವ ಬ್ರಿಜೇಶಕುಮಾರ ತೀರ್ಪು ಗೆಜೆಟ್ ನೋಟಿಫಿಕೇಶನಗೊಳಿಸಿ, ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ಪೂರ್ಣಗೊಳಿಸುವುದು.2.ಕೃಷ್ಣಾ ನ್ಯಾಯಾದೀಕರಣ:* ಬ್ರಜೇಶ ಕುಮಾರ ಆಯೋಗ ತೀರ್ಪು 2010 ರಲ್ಲಿ ನೀಡಿ,15 ವರ್ಷಗಳು ಕಳೆದರೂ ಇನ್ನೂ…
ವಿಜಯಪುರ: ಕೇಂದ್ರದ ಮೋದಿಯವರ ಬಿಜೆಪಿ ಸರಕಾರ ದೇಶದ ಆರ್ಥಿಕ ಸ್ಥಿತಿ ಹದಗೆಡಿಸಿದ್ದಲ್ಲದೇ ಬೆಲೆ ಏರಿಕೆಯಿಂದ ಜನರ ಜೀವನವನ್ನು ದುರ್ಭರಗೊಳಿಸಿದೆ. ಈ ಸಲ ಇವರಿಗೆ ಮತ ನೀಡಬೇಡಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ನಗರದಲ್ಲಿ ನಡೆದ ಲಿಂಗಾಯತ ರೆಡ್ಡಿ ಸಮುದಾಯದ ಬೃಹತ್ ಸಭೆಯಲ್ಲಿ ಅವರು ಮಾತನಾಡಿ, ಈ ಭಾಗದಲ್ಲಿ ಸಚಿವ ಎಂ.ಬಿ.ಪಾಟೀಲರಿಂದ ಹದಿನೈದು ಲಕ್ಷ ಎಕರೆಯಷ್ಟು ಜಮೀನಿಗೆ ನೀರಾವರಿಯಾಗಿದೆ. ಇಷ್ಟೆಲ್ಲ ಮಾಡಿದರೂ ಏನೂ ಮಾಡದ ಬಿಜೆಪಿ ಬರೀ ಸುಳ್ಳು ಹೇಳಿಕೊಂಡು ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಹೆಣ್ಣುಮಕ್ಕಳ ಉಚಿತ ಪ್ರಯಾಣದ ಮೊತ್ತ ಇನ್ನೂರು ಕೋಟಿ ರೂ. ತಲುಪಿದೆ. ಇದರಿಂದ ಮಹಿಳೆಯರಿಗೆ ಬಹಳ ಅನುಕೂಲವಾಗಿದೆ. ಇದೇ ರೀತಿ ಗೃಹ ಜ್ಯೋತಿ, ಅನ್ನ ಭಾಗ್ಯ, ಮಹಿಳೆಯರಿಗೆ ಎರಡು ಸಾವಿರ ರೂ. ನೀಡಿದ್ದು ನಮ್ಮ ಜನಾನುರಾಗಿ ನಡೆಯ ಉದ್ದೇಶ. ಮೋದಿಯವರ ಬೆಲೆ ಏರಿಕೆಯ ಸಂಕಟದಿಂದ ಜನರನ್ನು ಪಾರು ಮಾಡಲು ಈ ಗ್ಯಾರಂಟಿಗಳನ್ನು ನೀಡಲಾಗಿದೆ. ಆದರೆ ಇದರ ಪರಿವೇ ಇಲ್ಲದೆ ಇದನ್ನು ಬಿಟ್ಟಿ ಭಾಗ್ಯ ಎಂದು ಹೇಳುತ್ತಾರೆ. ಬಿಜೆಪಿಯ ಯಾವೊಂದು…
ವಿಜಯಪುರ: ಸಂಸದ ರಮೇಶ ಜಿಗಜಿಣಗಿ ದೆಹಲಿಯಲ್ಲಿ ಸರಕಾರಿ ಬಂಗಲೆಯಲ್ಲಿ ವಾಸಿಸುತ್ತ ಕೇವಲ ಟಿಎ, ಡಿಎ ಪಡೆಯಲು ಮಾತ್ರ ಸೀಮಿತರಾಗಿದ್ದು, ಜಿಲ್ಲೆಯಲ್ಲಿ ಎಸ್ಸಿ, ಎಸ್ಸಿ ಸಮುದಾಯಕ್ಕೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ನಿವರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ವಿಜಯಪುರ ಸಂಸದರ ಬಗ್ಗೆ ಹೇಳಿ ಹೇಳಿ ಸಾಕಾಗಿದೆ. ಜಿಲ್ಲೆಯಲ್ಲೂ ಅಭಿವೃದ್ಧಿ ಮಾಡಿಲ್ಲ. ಎಸ್.ಸಿ. ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದರೂ ಎಸ್ಸಿ, ಎಸ್ಟಿ ಸಮುದಾಯಕ್ಕೂ ನ್ಯಾಯ ಒದಗಿಸಿಲ್ಲ. ವಿಮಾನದಲ್ಲಿ ಉಚಿತವಾಗಿ ತಿರುಗಾಡುತ್ತ, ಟಿಎ, ಡಿಎ ಪಡೆದು ದೆಹಲಿಯಲ್ಲಿ ಸರಕಾರಿ ಬಂಗಲೆಯಲ್ಲಿ ಹಾಯಾಗಿ ವಾಸಿಸುವುದಕ್ಕೆ ಮಾತ್ರ ಅವರು ಸೀಮಿತರಾಗಿದ್ದಾರೆ. ಇದಷ್ಟೇ ಅವರು ಕೆಲಸ ಎಂದುಕೊಂಡಿದ್ದಾರೆ. ಮತ ಹಾಕು ಎಂದರೂ ಜನತೆ ಯೋಚನೆ ಮಾಡುತ್ತಾರೆ. ಇನ್ನು ನಿಮ್ಮ ಮತವೇ ಬೇಡ ಎಂದು ಹೇಳಿರುವ ರಮೇಶ ಜಿಗಜಿಣಗಿ ಅವರಿಗೆ ಯಾರಾದರೂ ವೋಟು ಹಾಕುತ್ತಾರಾ ಎಂದು…
