ಕೊಲ್ಹಾರ: ಧಾರ್ಮಿಕ ಸಮನ್ವತೆ ಸಾಮಾಜಿಕ ಸಮಾನತೆಯ ಸಂದೇಶವನ್ನು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸರಳ ಭಾಷೆಯ ವಚನಗಳ ಮೂಲಕ ನಾಗರಿಕ ಬಂಧುಗಳಿಗೆ ಮನಮುಟ್ಟುವಂತಹ ಕಾರ್ಯವನ್ನು ೧೨ನೇ ಶತಮಾನದಲ್ಲಿ ಶರಣರು ಮಾಡಿರುವದು ದೇಶಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಯಾಗಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ದೇವಾಂಗ ಸಮಾಜದ ಸಮುದಾಯಭವನದಲ್ಲಿ ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಿಗAಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ಮಾತನಾಡಿದರು.
ಹಿರೇಮಠದ ವೇದಮೂರ್ತಿ ಮುರುಗಯ್ಯ ಹಿರೇಮಠ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಸಾನಿಧ್ಯ ವಹಿಸಿದ್ದರು.
ಸಮಾಜದ ಅಧ್ಯಕ್ಷ ಸಂಗಪ್ಪ ಚೌಡಪ್ಪಗೋಳ, ಉಪಾದ್ಯಕ್ಷ ಸಂಗಪ್ಪ ಗೋಕಾಂವಿ, ಪಟ್ಟಣ ಪಂಚಾಯತ ಸದಸ್ಯ ಅಪ್ಪಸಿ ಮಟ್ಯಾಳ, ವಿಶೇಷ ಉಪನ್ಯಾಸಕರಾಗಿ ಶ್ರೀನಿವಾಸ ಐಹೊಳ್ಳಿ, ಈರಣ್ಣ ಔರಸಂಗ, ದೇವಾಂಗ ಸಮಾಜದ ಪ್ರಮುಖರು ಭಾಗವಹಿಸಿದ್ದರು.
Related Posts
Add A Comment