ವಿಜಯಪುರ: ಪರಿಶಿಷ್ಟ ಜಾತಿಯಲ್ಲಿರುವ ಸಮಾನ ಅವಕಾಶ ವಂಚಿತ ಶೋಷಿತ ತಳ ಸಮುದಾಯಗಳನ್ನು ಮರು
ವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇರುವುದಿಲ್ಲ. ಆದರೂ ಸಹ ಮುಖ್ಯಮಂತ್ರಿ ಬೊಮ್ಮಾಯಿಯವರು ಒಳ ಮೀಸಲಾತಿ ಘೋಷಿಸಿ ಲಂಬಾಣಿ, ಭೋವಿ ಮೊದಲಾದ ಸಮುದಾಯಗಳಿಗೆ ಅನ್ಯಾಯವೆಸಗಿದ್ದಾರೆಂದು ವಿರೋಧ ಪಕ್ಷದ ಮುಖ್ಯ ಸಚೇತಕ ಮತ್ತು ಕೆಪಿಸಿಸಿ ವಕ್ತಾರ ಪ್ರಕಾಶ್ ಕೆ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸರ್ಕಾರವು ಮೀಸಲಾತಿಯ ಮೂಲ ಪರಿಕಲ್ಪನೆಯಾದ ಸಾಮಾಜಿಕ, ಶೈಕ್ಷಣಿಕ, ಹಿಂದುಳಿದಿರುವಿಕೆಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಯಾವ ಪ್ರಮಾಣದಲ್ಲಿ ಯಾವ ಯಾವ ಜಾತಿಗಳು ಹಿಂದುಳಿದಿವೆ ಎಂಬುದನ್ನು ವೈಜ್ಞಾನಿಕ ಮಾನದಂಡಗಳ ಮೂಲಕ ಅಧ್ಯಾಯನ ಮಾಡಿ, ವಸ್ತುನಿಷ್ಠ, ವರದಿ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ಪರಿಗಣಿಸದೇ “ಕೇವಲ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಪಟ್ಟಿಯನ್ನು ತಿದ್ದಿ, ಪಹಚ್ಚಿ, ಮರು ವರ್ಗೀಕರಿಸಿ ಮೇಲ್ನೋಟಕ್ಕೆ 5 ಗುಂಪುಗಳನ್ನಾಗಿ ಮಾಡುತ್ತಿರುವುದು ಕಾರ್ಯಸಾಧುವಲ್ಲ. ಕಾರಣ ಮೀಸಲಾತಿಗೆ ಹಿಂದುಳಿದಿರುವಿಕೆ ಮಾನದಂಡವಾದ ಮೇಲೆ ಒಳಮೀಸಲಾತಿ ಹಿಂದುಳಿದಿರುವಿಕೆಯೇ ಮಾನದಂಡವಾಗಬೇಕೆ ಹೊರತು ಜನಸಂಖ್ಯೆಯಲ್ಲ” ಆದ್ದರಿಂದ ಈ ವರ್ಗೀಕರಣ ಅಸಂವಿಧಾನಿಕವಾಗಿದೆ. ಹಾಗೆಯೇ ಸದಾಶಿವ ಆಯೋಗದ ವರದಿ ಆಧಾರಿತವಾದ ಆಸಂವಿಧಾನಿಕ ಒಳಮಿಸಲಾತಿ ಶಿಫಾರಸನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಪ್ರಸ್ತುತ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ಸಮೇತ ಸಂವಿಧಾನ ವಿರೋಧಿ ನಿರ್ಣಯ ತೆಗೆದುಕೊಂಡಿದ್ದಾರೆ.
ಹಿಂಬಾಗಿಲಿನಿಂದ ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಇಂದಿನ ರಾಜ್ಯ ಸಚಿವ ಸಂಪುಟ ನಿರ್ಧಾರ ಮಾಡಿದೆ. ಬಂಜಾರ, ಬೋವಿ, ಕೊರಮ, ಕೊರಚ, ಕೊರವ ಸಮಾಜಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗೆ ತೆಗೆಯುವ ಹುನ್ನಾರವಾಗಿರುತ್ತದೆ. ಇದು ಬಿಜೆಪಿ ಮತ್ತು ಆರ್.ಎಸ್.ಎಸ್ ನ ಗುಪ್ತ ಕಾರ್ಯವಾಗಿರುತ್ತದೆ.
ಕಾರಣ ಬಿಜೆಪಿ ಯ ಲಂಬಾಣಿ, ಬೋವಿ ಸಮಾಜದ ಮಂತ್ರಿಗಳು ಹಾಗೂ ಶಾಸಕರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರಲ್ಲದೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದು ರಾಠೋಡ ಕರೆ ನೀಡಿದರು.
ಮುಖಂಡರಾದ ಅರ್ಜುನ ರಾಠೋಡ, ಕಾಂತಾ ನಾಯಕ ಸೇರಿದಂತೆ ಹಲವರಿದ್ದರು.
Related Posts
Add A Comment