ಕೊಲ್ಹಾರ: ನಾವುಗಳು ಬರೆಯುವ ಸಾಹಿತ್ಯ ಜಾನಪದವಾಗಿರಲಿ, ಭಾವಗೀತೆಯಾಗಿರಲಿ, ಕವನಗಳೇ ಆಗಿರಲಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಕೊಡುವ ರಚನೆಗಳಾಗಿರಬೇಕು. ಅಂದಾಗ ಮಾತ್ರ ಓದಲು, ಕೇಳಲು ಜನರು ಆಸಕ್ತರಾಗಿರುತ್ತಾರೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ೩ನೇ ವಾರ್ಡಿನ ಶಿವಾಜಿ ಬಡಾವಣೆಯಲ್ಲಿ ಹೆಬ್ಬಾಳೆಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಹಳ್ಳಿ ಹುಡಗಿ ಮಸರ ಗಡಿಗಿ ಎಂಬ ಸಾಮಾಜಿಕ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಹಿತ್ಯದಲ್ಲಿ ಅಶ್ಲೀಲ, ಅಸಹ್ಯಕರವಾದ ಶಬ್ದಗಳನ್ನು ಕವಿಗಳು ಬಳಸುವುದನ್ನು ತಮ್ಮಷ್ಟಕ್ಕೆ ತಾವೇ ಕಡಿವಾಣ ಹಾಕಿಕೊಳ್ಳಬೇಕು. ಭಾರತೀಯರಾದ ನಾವು ಹೆಣ್ಣನ್ನು ಪೂಜ್ಯತಾ ಭಾವದಲ್ಲಿ ಕಾಣುವ ಸ್ವಭಾವದವರು. ಆದಿಶಕ್ತಿ ಅವತಾರದಲ್ಲಿ ಗೌರವಿಸುತ್ತೇವೆ. ಒಬ್ಬ ಮಹಿಳೆ ಮಡದಿಯಾಗಿ, ತಂಗಿಯಾಗಿ, ಅಕ್ಕಳಾಗಿ, ತಾಯಿಯಾಗಿ ಒಂದಿಲ್ಲ ಒಂದು ರೀತಿಯಲ್ಲಿ ಪುರುಷರಿಗೆ ಸಹಕಾರಿಯಾಗಿರುತ್ತಾಳೆ ಅಂತಹ ನಾರಿಯರಿಗೆ ನಾವುಗಳು ಗೌರವ ಕೊಡುವದನ್ನು ಕಲಿಯುವದರ ಜೊತೆಗೆ ಬರವಣಿಗೆಯೂ ಕೂಡ ಗೌರವ ಪೂರ್ವಕವಾಗಿ ಇರಬೇಕೆಂದು ಸಲಹೆ ಕೊಟ್ಟರು.
ಗ್ರಾ ಪಂ ಮಾಜಿ ಉಪಾಧ್ಯಕ್ಷ ಈರಯ್ಯ ಮಠಪತಿ ಮಾತನಾಡಿದರು.
ಮಾಜಿ ಸಚಿವ ಬೆಳ್ಳುಬ್ಬಿಯವರು ಸರ್ವಜನರನ್ನು ಸಮಾನ ಭಾವದಿಂದ ಗೌರವಿಸುವ ವ್ಯಕ್ತಿಗಳಾಗಿದ್ದಾರೆ ಎಂದರು.
ಕಟಬರ ಸಮಾಜದ ಆರಾಧ್ಯದೇವತೆ ಹೆಬ್ಬಾಳೆಮ್ಮ ಜಾತ್ರಾ ಮಹೋತ್ಸವ ಬಹು ವಿಜ್ರಂಭನೆಯಿAದ ಜರುಗಿತು. ದೇವಿಯ ಮೂರ್ತಿಯ ಮೆರವಣಿಗೆಯು ಪಲ್ಲಕ್ಕಿ ಉತ್ಸವದ ಮೂಲಕ ಕೃಷ್ಣಾ ನದಿಗೆ ತೆರಳಿ ಜಲಾಭಿಷೇಕವನ್ನು ಮುಗಿಸಿಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾಧ್ಯ ವೈಭವಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ವೈಭವದಿಂದ ನಡೆಯಿತು.
ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು, ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ಸಾನಿಧ್ಯವನ್ನು ವಹಿಸಿದ್ದರು.
ದೇವಸ್ಥಾನ ಸಮೀತಿಯ ಅಧ್ಯಕ್ಷ ಡಿ.ಡಿ.ಕಟಬರ್, ಉಪಾದ್ಯಕ್ಷ ಬಸಪ್ಪ ಕಟಬರ, ಅರ್ಚಕರಾದ ಪರಶುರಾಮ ಕಟಬರ, ಪಟ್ಟಣ ಪಂಚಾಯತ ಸದಸ್ಯರಾದ ಅಪ್ಪಶಿ ಮಟ್ಯಾಳ, ಬಾಬು ಭಜಂತ್ರಿ, ಶ್ರೀಶೈಲ ಅಥಣಿ, ವಿರುಪಾಕ್ಷಿ ಕೋಲಕಾರ ಭಾಗವಹಿಸಿದ್ದರು.
Related Posts
Add A Comment