ದೇವರಹಿಪ್ಪರಗಿ: ಕಾಂಗ್ರೆಸ್ ಪಕ್ಷದ ವರಿಷ್ಠರು ಟಿಕೇಟ್ ನೀಡಿದಲ್ಲಿ ಮಾತ್ರ ಅವರು ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ಮಾಜಿನಾಯಕ ಎಸ್.ಆರ್.ಪಾಟೀಲ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಭಾನುವಾರ ಜರುಗಿದ ಕಾಂಗ್ರೆಸ್ ಪಕ್ಷ ಸೇರ್ಪಡೆ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ೩೦ ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಮೇಲ್ಮನೆಯ ಸದಸ್ಯನಾಗಿ, ವಿರೋಧ ಪಕ್ಷದ ನಾಯಕನಾಗಿ, ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ನಾನು ಅವಿಭಜಿತ ವಿಜಯಪುರ ಜಿಲ್ಲೆಯ ೧೫ ಕ್ಷೇತ್ರಗಳ ಮತದಾರರ ನಾಡಿಮಿಡಿತ ಅರಿತವನು ಯಾವುದೇ ಕಾರಣಕ್ಕೂ ನಾನು ಕುರ್ಚಿಗೆ ಅಂಟಿಕೊAಡಿಲ್ಲ. ನಮ್ಮಿಂದ ಕುರ್ಚಿಗೆ ಬೆಲೆ ಬರಬೇಕು ವಿನಹ ಕುರ್ಚಿಯಿಂದ ನಮಗೆ ಬೆಲೆ ದೊರೆಯಬಾರದು. ಈಗ ಪಕ್ಷ ಅಧಿಕೃತ ಅಭ್ಯರ್ಥಿಯಾಗಿ ಯಾರನ್ನಾದರೂ ಘೋಷಣೆ ಮಾಡಲಿ ಆಕಾಂಕ್ಷಿಗಳು ಎಲ್ಲರೂ ಒಮ್ಮತದಿಂದ ಚುನಾವಣೆ ಎದುರಿಸಿ ಪಕ್ಷದ ಗೆಲುವಿಗಾಗಿ ಶ್ರಮಿಸೋಣ ಎಂದು ಹೇಳುತ್ತಾ ಪಕ್ಷದ ನಿರ್ದೇಶನದಂತೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ದ ಎಂದು ಮನದಿಂಗಿತ ವ್ಯಕ್ತಪಡಿಸಿದರು. ಜೊತೆಗೆ ಮಾಜಿಶಾಸಕ ಶಿವಪುತ್ರಪ್ಪ ದೇಸಾಯಿಯವರ ಜೀವನ, ಸಾಧನೆಗಳನ್ನು ಕೊಂಡಾಡಿದರು.
ಗಡಿನಾಡು ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಸ ಛಾಯಾಗೋಳ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ ಯಾಳಗಿ, ಕೆಪಿಸಿಸಿ ವಕ್ತಾರ ಎಸ್.ಎಮ್.ಪಾಟೀಲ(ಗಣಿಹಾರ) ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಮಾತನಾಡಿದರು.
ನಂತರ ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ, ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಮಹಾಂತೇಶ ತಾಳಿಕೋಟಿ ಹಾಗೂ ಮಾಜಿಅಧ್ಯಕ್ಷ ರಾಜಶೇಖರ ಛಾಯಾಗೋಳರನ್ನು ಪಕ್ಷದಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮದ ಶ್ರೀನಾಥಗೌಡ ಪಾಟೀಲ ತಮ್ಮ ಬೆಂಬಲಿಗರೊAದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ನಂತರ ಕಾಂಗ್ರೆಸ್ ಯುವಧುರೀಣ ಸಂಗಮೇಶ ಛಾಯಾಗೋಳ ಜನ್ಮದಿನವನ್ನು ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಳನಗೌಡ ಪಾಟೀಲ(ಸಾತಿಹಾಳ), ಬಶೀರ್ ಅಹ್ಮದ್ ಬೇಪಾರಿ, ಮಾಜಿ ಬ್ಲಾಕ್ ಅಧ್ಯಕ್ಷ ನಿಂಗನಗೌಡ ಪಾಟೀಲ(ಯರನಾಳ), ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ, ಮಹಿಳಾ ಬ್ಲಾಕ್ ಅಧ್ಯಕ್ಷೆಯರಾದ ಸರಿತಾ ನಾಯಿಕ್, ರಮೀಜಾ ನದಾಫ್, ಲಲಿತಾಬಾಯಿ ದೊಡಮನಿ, ಅಶೋಕ ಪಾಟೀಲ(ಕುದರಿಸಾಲವಾಡಗಿ), ಸಂತೋಷ ದೊಡ್ಡಮನಿ, ಮುನೀರ್ ಬಿಜಾಪೂರ, ಶ್ರೀಕಾಂತ ಛಾಯಾಗೋಳ, ಆನಂದ ಚಟ್ಟರಕಿ ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
Related Posts
Add A Comment