ಚಡಚಣ: ಪರೋಪಕಾರವನ್ನೇ ಜೀವನವನ್ನಾಗಿಟ್ಟುಕೊಂಡು ಬದುಕುವ ಆದರ್ಶ ಪುರುಷರಲ್ಲಿ ಜೇಡರ ದಾಸಿಮಯ್ಯ ಪ್ರಮುಖರಾಗಿದ್ದಾರೆ. ಮಹಿಳಾ ಸಮಾನತೆ, ಅಸ್ಮಿತೆಯ ಬಗ್ಗೆ ತನ್ನ ವಚನದ ಮೂಲಕವೇ ತಿಳಿಸಿದ ಶ್ರೇಷ್ಠ ವಚನಕಾರರಾಗಿದ್ದು, ಆತ್ಮಕ್ಕೆ ಯಾವುದೇ ಜಾತಿ, ಲಿಂಗ ಭೇದವಿಲ್ಲವೆಂದು ಅಂದಿನ ಕಾಲದಲ್ಲಿಯೇ ತಿಳಿಸಿದ ವಚನಕಾರ ಎಂದು ಮೈಂದರಗಿ ಗುರು ಹಿರೇಮಠದ ರೇವಣಸಿದ್ಧ ಪಟ್ಟದದೇವರು ಹೇಳಿದರು.
ಪಟ್ಟಣದಲ್ಲಿ ಆಯೋಜಿಸಲಾದ ದೇವರದಾಸೀಮಯ್ಯ ಜಯಂತಿಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಾಹಿತಿ ಹಾಗೂ ಸಮುದಾಯದ ಹಿರಿಯ ಮುಖಂಡ ಬಸವರಾಜ ಯಂಕಂಚಿ ಮಾತನಾಡಿ, ಬಸವಣ್ಣ, ದೇವರದಾಸಿಮಯ್ಯ ಹೀಗೆ ಅನೇಕ ವಚನಕಾರರು ತಮ್ಮ ಕಾಲದಲ್ಲಿಯೇ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡಿದರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು. ದೇವರ ದಾಸಿಮಯ್ಯ ಅವರ ವಚನಗಳು ಮನುಷ್ಯನ ದಿಕ್ಕನ್ನೇ ಬದಲಿಸುತ್ತವೆ. ಜೀವನದ ಅನುಭವ ಅವರ ವಚನಗಳಲ್ಲಿವೆ. ಜಯಂತಿ ಆಚರಿಸುವ ಮೂಲಕ ಅವರ ಬದುಕಿನ ಅನೇಕ ಮಜಲುಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದರು.
ಮೈoದರಗಿ ವಿರಕ್ತ ಮಠದ ಮೃತ್ಯುಂಜಯ ಮಹಾಸ್ವಾಮೀಜಿ ಮಾತನಾಡಿ,
ಮಾನವ ಕುಲಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ತೋರಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಸರ್ವ ಸಮುದಾಯಗಳಿಗೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಮುಂಚೆ ಹೂವಿನಿಂದ ಅಲಂಕಾರಗೊಂಡ ದೇವರದಾಸೀಮಯ್ಯ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಗುರುಪಾದಪ್ಪಾ ಜೀರಂಕಲಗಿ, ಗಂಗಾಧರ ಭಂಡಾರಕವಟೆ, ಮಲ್ಲಿಕಾರ್ಜುನ ಭಂಡಾರಕವಟೆ, ಮಹದೇವ ಯಂಕಂಚಿ, ದಯಾನಂದ ಕಟಗೇರಿ, ಮಚಣ್ಣ ಮೇತ್ರಿ, ಮಲ್ಲಪ್ಪ ಭಂಡಾರಕವಟೆ, ರಾಮ ಮಲಾಪುರ, ಮಲ್ಲು ಉಮರಾಣಿ, ಮಲ್ಲು ಹಿಟ್ನಳ್ಳಿ, ಬಸವರಾಜ ಭಂಡರಕವಟೆ, ಸಂತೋಷ ದಟ್ಟಿ, ಬಸವರಾಜ ಉಮರಾಣಿ, ಜಗದೀಶ ಭಂಡಾರಕವಟೆ, ಬಸವರಾಜ ಬಿರಾದಾರ, ವಿವೇಕಾನಂದ ಹಿಟ್ನಳ್ಳಿ, ಶ್ರೀಶೈಲ ಉಮರಾಣಿ, ರಾಜಶೇಖರ ಡೊಣಗಂವ, ದುಂಡಪ್ಪ ಬರಗಾಲಿ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.
ಶಿಕ್ಷಕ ಬಸವರಾಜ ಅಂಕದ ನಿರೂಪಿಸಿದರು. ಶ್ರೀಶೈಲ ಉಮರಾಣಿ ಸ್ವಾಗತಿಸಿದರು.
Related Posts
Add A Comment