ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದಾಬಾಗಳಲ್ಲಿ ಮತ್ತು ಹಳ್ಳಿಗಳಲ್ಲಿ ತಾಂಡಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನಯ ಜಿಲ್ಲಾಧ್ಯಕ್ಷ ಕೃಷ್ಣಾ ಭೋಸಲೆ ಮಾತನಾಡಿ, ಸಿಂದಗಿ ರಸ್ತೆ, ಇಂಡಿ ರಸ್ತೆ, ಅಥಣಿ ರಸ್ತೆ, ಬೆಂಗಳೂರು ರಸ್ತೆ ಹಾಗೂ ಕೋಲಾರ ರಸ್ತೆ ಅಕ್ಕ ಪಕ್ಕದಲ್ಲಿ ಇರುವ ದಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದಲೇ ರಸ್ತೆ ಅಪಘಾತ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಇದರಿಂದ ಕುಡಿದ ಅಮಲಿನಲ್ಲಿ ಗಲಭೆಗಳು ತುಂಬಾನೆ ನಡೆಯುತ್ತಾ ಇರುತ್ತವೆ. ಸಾಮಾನ್ಯ ಜನರಿಗೆ ತುಂಬಾ ತೊಂದರೆ ಆಗುತ್ತಿದೆ. ಹಾಗೂ ವಿಜಯಪುರ ತಾಲ್ಲೂಕಿನಲ್ಲಿ ಸುತ್ತಲಿನ ಗ್ರಾಮದಲ್ಲಿ ಸರ್ಕಾರಿ ಶಾಲೆಗಳ ಪಕ್ಕ ಹಾಗೂ ದೇವಾಲಯಗಳ ಹತ್ತಿರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾರುತಿದ್ದಾರೆ. ಸಣ್ಣ ವಯಸ್ಸಿನ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಲ್ಲಿ ಅಬಕಾರಿ ಇಲಾಖೆಯವರೂ ಶಾಮೀಲಾಗಿದ್ದಾರೆ. ಇದನ್ನು ಗಂಭೀರ ಪರಿಗಣಿಸಿ ಕೂಡಲೇ ಇದರ ಕಡಿವಾಣಕ್ಕೆ ವಿಶೇಷ ತಂಡ ರಚಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷೆ ಮಂಜುಳಾ ವಾಲಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಗಳವೆ, ಜಿಲ್ಲಾ ಅಧ್ಯಕ್ಷ ಸುಮಿತ್ರಾ ಪಟ್ಟಣಶೆಟ್ಟಿ, ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಯಮನಪ್ಪ ಬೂದಿಹಾಳ, ಬಸವನ ಬಾಗೇವಾಡಿ ತಾಲೂಕಾ ಅಧ್ಯಕ್ಷ ಸಿದ್ದಮ್ಮ ಹಿರೂರ, ತಾ ಉಪಾಧ್ಯಕ್ಷರಾದ ಶಶಿಕಲಾ ಹಡಪದ, ಅಟೋ ಘಟಕದ ಜಿಲ್ಲಾ ಅಧ್ಯಕ್ಷ ಉಮೇಶ ರುದ್ರಮಣಿ, ಯುವ ಘಟಕ ಜಿಲ್ಲಾಧ್ಯಕ್ಷ ರಾಜು ಬಿಸೆ, ಜಿಲ್ಲಾ ಮುಖಂಡರಾದ ಮಾದೇವ ಢಗೆ, ಜಿಲ್ಲಾ ಮುಖಂಡರಾದ ರಾಜು ಕೋಟ್ಯಾಳ, ತಾಲೂಕಾ ಅಧ್ಯಕ್ಷರಾದ ವಿಠ್ಠಲ ತಳವಾರ, ಜಿಲ್ಲಾ ಮುಖಂಡರಾದ ಸಕಾರಾಮ ಪವಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.