ಸಿಂದಗಿ: ಮುಸ್ಲಿಮರು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರೆಯಲು ಚಿನ್ನಪ್ಪ ರೆಡ್ಡಿ ಆಯೋಗ ಶೇ ೪ರಷ್ಟು ಮೀಸಲಾತಿ ನೀಡಿ ಈ ಸಮುದಾಯದ ಬಲವರ್ಧನೆಗೆ ಅನುಕೂಲ ಮಾಡಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ ಶೇಕಡ ನಾಲ್ಕು ಮೀಸಲಾತಿಯನ್ನು ಕಿತ್ತು ಹಾಕಿರುವುದರ ಮೂಲಕ ಈ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಮನಗೂಳಿ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಸ್ಲಿಂ ಸಮಾಜದಲ್ಲಿ ಅನೇಕ ಜನ ಬಡವರಿದ್ದಾರೆ ಇದನ್ನು ಅರಿಯದೆ ಕೇವಲ ರಾಜಕಾರಣಕ್ಕಾಗಿ ದ್ವೇಷದ ಬೀಜ ಬಿತ್ತಲು ಮೀಸಲಾತಿ ಕಸಿದು ಈ ಸಮುದಾಯದ ಬಡ ಮಕ್ಕಳ ಶಿಕ್ಷಣ ಆರ್ಥಿಕತೆಗೆ, ಸ್ವಾವಲಂಬನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಇದು ಒಂದು ವರ್ಗಕ್ಕೆ ಮಾಡಿದ ಅಪಮಾನ ಎಂದರು.
ಪಂಚಮಸಾಲಿ ಸಮುದಾಯ ತನ್ನ ಮೀಸಲಾತಿ ಹಕ್ಕಿಗಾಗಿ, ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ನಿರಂತರ ಹೋರಾಟ ಮಾಡುತ್ತಲೇ ಬಂದಿದೆ. ಆದರೆ ರಾಜ್ಯ ಸರ್ಕಾರ ಈ ಸಮುದಾಯಕ್ಕೂ ಮೀಸಲಾತಿ ವಿಚಾರದಲ್ಲಿ ನಿರಂತರ ಅನ್ಯಾಯ ಮಾಡುತ್ತಿರುವುದು ಖಂಡನೀಯವಾಗಿದೆ. ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡಿ ಇಲ್ಲಿವರೆಗೂ ಪೂರ್ಣ ಪ್ರಮಾಣದ ಮೀಸಲಾತಿ ನೀಡಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತ್ತಿದೆ. ಮುಂದಿನ ದಿನಮಾನಗಳಲ್ಲಿ ಈ ಸಮುದಾಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
Related Posts
Add A Comment