ಆರೋಪಿತರಿಂದ ಕೃತ್ಯಕ್ಕೆ ಬಳಸಲಾದ 01 ಕಂಟ್ರಿ ಪಿಸ್ತೂಲ್, 04 ಜೀವಂತ ಗುಂಡುಗಳು ಹಾಗೂ 03 ಮೋಟಾರ್ ಸೈಕಲ್‌ಗಳ ಜಪ್ತಿ | ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಳೆದ ಜು.14 ರಂದು ನಗರದ ಎಸ್.ಎಸ್. ಕಾಂಪ್ಲೇಕ್ಸ್ ದಲ್ಲಿ ನಡೆದ ಸುಶೀಲಕುಮಾರ ಕಾಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ
ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ ಅವರು, ಸುಶೀಲ ಕಾಳೆ ಕೊಲೆ ಕುರಿತು ಮೃತನ ತಾಯಿ ಸುಚಿತ್ರಾ ಗಂಡ ತುಳಜಾರಾಮ ಕಾಳೆ, ಇವರು ಕೊಟ್ಟ ದೂರಿನ ಮೇರೆಗೆ ಗಾಂಧಿಚೌಕ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣದ ತನಿಖಾಧಿಕಾರಿ ಪ್ರದೀಪ ತಳಕೇರಿ, ಪಿಐ ಗಾಂಧಿಚೌಕ ಪೊಲೀಸ್ ಠಾಣಿ ಹಾಗೂ ತಂಡದವರು ಕಾರ್ಯಪ್ರವೃತ್ತರಾಗಿ ಆರೋಪಿತರಾದ 1) ಆಕಾಶ ತಂದೆ ವಿಠೋಬಾ ಕಲ್ಲವ್ವಗೋಳ, 29 ವರ್ಷ, ಸಾ: ಹಿಟ್ನಳ್ಳಿ ಹಾ:ವ: ಸಾಯಿ ಪಾರ್ಕ, ವಿಜಯಪುರ. 2) ಸುದೀಪ @ ಸುಭಾಸ ತಂದೆ ರಮೇಶ ಬಗಲಿ, ಸಾ: ನಾಗರದಿನ್ನಿ, ತಾ: ಕೋಲ್ದಾರ ಜಿ: ವಿಜಯಪುರ. (ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ) ಇವರುಗಳನ್ನು ಈಗಾಗಲೆ (ಜು. 15 ರಂದು) ಬಂಧಿಸಲಾಗಿರುತ್ತದೆ.
ಮುಂದುವರೆದು ಜು.೧೬ ರಂದು ಸದರಿ ಪ್ರಕರಣದಲ್ಲಿ ಇನ್ನುಳಿದ ಆರೋಪಿತರಾದ 3) ಗೌತಮ ತಂದೆ ಹಣಮಂತ ಆಲಮೇಲ್‌ಕರ, 25 ವರ್ಷ, ಸಾ: ಭರತ ನಗರ, ವಿಜಯಪುರ 4) ನಾರಾಯಣ ತಂದೆ ಗಣಪತಿ ಜಾಧವ, 20 ವರ್ಷ, ಸಾ: ದೇಗಿನಾಳ 5) ಬಸವರಾಜ ತಂದೆ ಸಿದ್ದಪ್ಪ ಮುನ್ನಾಳ, 20 ವರ್ಷ, ಸಾ: ಹಣಮಾಪೂರ, ತಾ: ಕೋಲ್ದಾರ 6) ಪ್ರಜ್ವಲ ತಂದೆ ಶರಣಪ್ಪ ಹಳಿಮನಿ, ಸಾ: ನವನಗರ ಬಾಗಲಕೋಟ (ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ) ಇವರನ್ನು ಬಂಧಿಸಲಾಗಿರುತ್ತದೆ. ಆರೋಪಿತರಿಂದ ಕೃತ್ಯಕ್ಕೆ ಬಳಸಲಾದ 01 ಕಂಟ್ರಿ ಪಿಸ್ತೂಲ್, 04 ಜೀವಂತ ಗುಂಡುಗಳು ಹಾಗೂ 03 ಮೋಟಾರ್ ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿರುತ್ತದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.