ರಚನೆ
– ಸಿರಿ ಕಿರಣ
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ನೀ ಬರುವ ಗಳಿಗೆಯ ಎದುರು ನೋಡುತಾ
ನಿನ ನೋಡುವ ಕಾತುರತೆಯಿಂದ
ಬೆರಗಾಗಿಸೋ ನಿನ್ನ ಮಾತಿನ ಮೋಡಿಗೆ
ಪುಲಕಗೊಳ್ಳುವುದು ನನ್ನೀ ಹೃದಯ
ಸವೆಸಿದ ಪಯಣದ ದಾರಿಯಲಿ..
ವಿನಿಮಯಿಸಿದ ಮಾತಿನ ಧಾಟಿಯಲಿ
ಸಾಂತ್ವನ ನೀಡಿದ ನಿನ್ನ ಮೃದು ಸ್ಪರ್ಶದಲ್ಲಿ
ಹಾತೊರೆಯುತ್ತಿದೆ ಮನವು ನಿನ್ನ ಬಳಿ ಸೇರಲು.
ನಾವಾಡಿದ ಮಾತಿನ ಮಣಿಗಳ ಪೋಣಿಸುವೆ
ನಾವು ನಡೆದ ದಾರಿಯ ಜಾಡ ಹಿಡಿದು
ಪ್ರೀತಿಯ ಸ್ಪರ್ಶದ ತಂತಿಯ ಬೆಸುಗೆಯಲಿ
ನಮ್ಮ ಅನುಬಂಧವ ಗಟ್ಟಿ ಮಾಡಲು
ನೀಡು ಬಾ ನಿನ್ನ ಪ್ರೇಮ ಪಾರಿಜಾತವ
ಶಿರದಲ್ಲಿ ಧರಿಸಿ ನಾ ನಿನ್ನ ಮೆರೆಸುವೆ
ನೆನಪಲ್ಲೇ ನೆಪವಾಗದೇ ಈ ನಮ್ಮ ಪ್ರೀತಿಯ
ಇಡೀ ಜಗತ್ತಿಗೇ ಸಾರಿ ಹೇಳುವೆ.
