ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ ಶಾಸಕ ಕಟಕದೊಂಡ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಜಿಲ್ಲಾಡಳಿತ ವಿಜಯಪುರ ಮತ್ತು ತಾಲೂಕಾಡಳಿತ ಚಡಚಣ ವತಿಯಿಂದ ಹಮ್ಮಿಕೊಳ್ಳಲಾದ ಭೂ ಸುರಕ್ಷಾ ಯೋಜನೆ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರು ಬುಧುವಾರ ತಹಶೀಲ್ದಾರ ಕಾರ್ಯಾಲಯದಲ್ಲಿ ಉಧ್ಘಾಟಿಸಿದರು.
ಈ ವೇಳೆ ಮಾತನಾಡಿದ ವಿಠ್ಠಲ ಕಟಕಧೋಂಡ ಅವರು, ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಜನಸಾಮಾನ್ಯರಿಗೆ ಸುಲಭವಾಗಿ ತಲುಪುವಂತಹ ಕಂದಾಯ ಇಲಾಖೆಯ ಎಲ್ಲ ದಾಖಲಾತಿಗಳನ್ನು ಪಡೆಯಬಹುದಾಗಿದೆ. ಅದಕ್ಕಾಗಿ ಯಶಸ್ವಿಯಾದ ಪಂಚ ಗ್ಯಾರಂಟಿ ಯೋಜನೆಯ ಜೊತಗೆ ಆರನೆ ಗ್ಯಾರಂಟಿ ಯೋಜನೆಯನ್ನು ಸಚಿವ ಕೃಷ್ಣ ಭೈರೆಗೌಡರು ಕೊಟ್ಟಿದ್ದಾರೆ ಎಂದರು.
ಮೊದಲು ಭೂದಾಖಲೆಗಳನ್ನು ಪಡೆಯುವುದು ಅಷ್ಟು ಸುಲಭದಕೆಲಸ ಆಗಿತ್ತಿರಲಿಲ್ಲ ಸುಮಾರು ದಿನಗಳು ಬೇಕಾಗುತ್ತಿತ್ತು ಈಗ ಸರಕಾರದ ಮಹತ್ವಾಕಾಂಕ್ಷಿ ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದೆ ಇದರಿಂದ ರೈತರ ತೊಂದರೆ ಹಾಗೂ ವಿಳಂಬಕ್ಕೆ ತಿಲಾಂಜನಿ ಕೊಟ್ಟಂತಾಗಿದೆ, ನಿಮ್ಮ ಜಮೀನಿನ ದಾಖಲಾತಿಗಳನ್ನು ಇನ್ನುಮುಂದೆ ನೀವು ಮನೆಯಲ್ಲಿ, ಕರ್ನಾಟಕದ, ಜಗತ್ತಿನ ಯಾವ ಮೂಲೆಯಲ್ಲಿ ಕುಳಿತು ತಮ್ಮ ಜಮೀನಿನ ದಾಖಲಾತಿಗಳನ್ನು ಪಡೆಯಬಹುದಾಗಿದೆ ಎಂದರು.
ಈ ಕೆಲಸಕ್ಕೆ ಸುಮಾರು ಆರು ತಿಂಗಳಿಂದ ನಮ್ಮ ಗ್ರಾಮ ಲೆಕ್ಕಾಧಿಕಾರಿಗಳು ಒಂಬತ್ತು ಲಕ್ಷ ಎಪತ್ತು ಸಾವೀರ ಪುಟಗಳಷ್ಟು ಡಿಜಿಟಲ್ ಸ್ಕ್ಯಾನಿಂಗ್ ಮಾಡಿದ್ದಾರೆ ಎಂದರು ಇನ್ನು ೨೦% ಸ್ಕ್ಯಾನಿಂಗ್ ಕೆಲಸ ಬಾಕಿ ಇದ್ದು ಅದನ್ನು ಕೆಲವೆ ದಿನಗಳಲ್ಲಿ ಪೂರ್ಣ ಮಾಡುತ್ತಾರೆ. ಅವರ ಈ ಕೆಲಸ ಅಭಿನಂದನಾರ್ಹ ಎಂದರು.
ಚಡಚಣ ತಾಲೂಕ ಅಭಿವೃದ್ದಿ ಕಡೆಗೆ ಸಾಗುತ್ತಿದೆ ಮಿನಿವಿಧಾನಸೌಧ, ಬಸ್ ಡಿಪೋ, ಚಡಚಣ ಕ್ಕೆ ಬ್ರಿಜ್ ಕೆಲಸ ಪ್ರಾರಂಭವಾಗಲಿದೆ ಹಾಗಾಗಿ ಅಭಿವೃದ್ದಿಯಲ್ಲಿ ಮುಂದಿನ ಮೂರು ವರ್ಷದಲ್ಲಿ ಇಂಡಿ ತಾಲೂಕಿಗೆ ಸೈಡ್ ಹೊಡಿಯುತ್ತೆವೆ ಎಂದರು.
ಅತ್ಯುತ್ತಮ ಪ್ರಗತಿ ಸಾಧಿಸುವ ಸಲುವಾಗಿ ಚಡಚಣ ತಾಲೂಕಿನ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕ್ರೋಮಬುಕ್ ಲ್ಯಾಪ ಟಾಪ್ ಗಳನ್ನು ಕಂದಾಯ ಇಲಾಖೆಯಿಂದ ಹಂಚಿಕೆ ಮಾಡಲಾಗಿದ್ದು ಅವುಗಳ ಪೈಕಿ ೦೮ ಕ್ರೋಮಬುಕ್ ಲ್ಯಾಪ್ ಟಾಪ್‌ಗಳನ್ನು ಶಾಸಕರು ವಿತರಿಸಿದರು.
ಭೂ ಸುರಕ್ಷಾ ಯೋಜನೆ ಅಡಿಯಲ್ಲಿ ಸಾಂಕೇತಿಕವಾಗಿ ಇಬ್ಬರು ರೈತರಿಗೆ ಡಿಜಿಟಲ್ ದಾಖಲಾತಿಗಳನ್ನು ಧೂಳಖೇಡ ಗ್ರಾಮದ ರಾಯಗೋಂಡ ರಗಟೆ, ಗೋಟ್ಯಾಳ ಗ್ರಾಮದ ಚಂದ್ರಶೇಖರ ಮೇತ್ರಿ ಅವರಿಗೆ ಶಾಸಕರು ವಿತರಿಸಿದರು.
ತಹಶೀಲದಾರ ಸಂಜಯ ಇಂಗಳೆ ಮಾತನಾಡಿ, ಕಂದಾಯ ಯೋಜನೆ ಅನುಷ್ಠಾನಗೊಳಿಸುವ ಉದ್ದೇಶದಿಂದ ಕಂದಾಯ ಇಲಾಖೆಯಲ್ಲಿ ಪ್ರಸ್ತುತ ನಿರ್ವಹಿಸುತ್ತಿರುವ ವಿವಿಧ ಐಟಿ ವ್ಯವಸ್ಥೆಗಳನ್ನು ಬಗರ್ ಹುಕುಂ ತಂತ್ರಾಂಶ, ಫೋಡಿ ಪ್ರಕರಣ (೧-೫ ಮತ್ತು ೬-೧೦) ತಂತ್ರಾಂಶ, ಪಹಣಿ ದಾಖಲೆಗಳೊಂದಿಗೆ ಆಧಾರ ಜೋಡಣೆ, ಸರ್ಕಾರಿ ಜಮೀನುಗಳ ಸಂರಕ್ಷಣೆ, ಲ್ಯಾಂಡ್ ಬಿಟ್ ಯೋಜನೆ ಒಳಗೊಂಡಿದೆ.
ಇ ಪಾವತಿ ಆಂದೋಲನ ಕೂಡಾ ಜಾರಿ ಮಾಡುತ್ತಿದ್ದೆವೆ ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಮನೆಗೆ ಬಂದು ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದು ಅಲ್ಲಿಯೆ ವಾರಸಾ ಕೆಲಸ ಮಾಡಿಕೊಡುತ್ತೆವೆ.ಅಂದಾಜು ೩೭೦೦ ವಾರಸಾ ಬಾಕಿ ಉಳಿದಿವೆ ಅವುಗಳನ್ನು ಬೇಗನೆ ಮಾಡಿಮುಗಿಸುವ ಗುರಿ ಹೊಂದಿದ್ದೆವೆ ಎಂದು ತಹಶೀಲದಾರ ಸಂಜಯ ಇಂಗಳೆ ಹೇಳಿದರು.
ಈ ವೇಳೆಯಲ್ಲಿ ತಹಶೀಲ್ದಾರ ಸಂಜಯ ಇಂಗಳೆ, ಪ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ,ಪ.ಪಂ.ಉಪಾಧ್ಯಕ್ಷ ಇಲಾಯಿ ನದಾಫ, ಪ.ಪಂ ನಾ.ನಿ.ಸದಸ್ಯ ವಾಸಿಮ್ ಮುಲ್ಲಾ ಸೇರಿದಂತೆ ಪ.ಪಂ.ಎಲ್ಲ ಸದಸ್ಯರು, ಗ್ರೇಡ್ ೨ ತಹಶೀಲ್ದಾರ ಆರ್.ಎಸ್.ಚವ್ಹಾಣ, ಶಿರಸ್ತೇದಾರ ರವಿ ಹಡಪದ, ಕಂದಾಯ ನೀರೀಕ್ಷಕ ವಿಠ್ಠಲ ಕೋಳಿ, ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು, ಸಿಬ್ಬಂದಿಯವರು, ರೈತರು ಉಪಸ್ಥಿತರಿದ್ದರು.