ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಳವಾರ ಸಮಾಜದ ಪ್ರತಿಭಾ ಪುರಸ್ಕಾರ ಸಮೀತಿ ವತಿಯಿಂದ 2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವೀತಿಯ ಪಿ.ಯು.ಸಿಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆಗಸ್ಟ್ 17ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದ್ದು ಅರ್ಹ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ, ಅಂಕಪಟ್ಟಿ, ಆಧಾರ್ ಕಾರ್ಡ್ಗಳ ನಕಲು ಪ್ರತಿ ಹಾಗೂ ಇತ್ತೀಚಿನ ಎರಡು ಫೊಟೋಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಅಂಚೆ ಮೂಲಕ ಇಲ್ಲವೆ ಖುದ್ದಾಗಿ ನಗರದ ಬಸ್ ನಿಲ್ಧಾಣ ಹತ್ತಿರ ಲಲಿತ ಮಹಲ್ ಹೊಟೆಲ್ ಆವರಣದಲ್ಲಿರುವ ಜ್ಞಾನಗಂಗಾ ವಿವಿದೊದ್ದೇಶ ಸಹಕಾರ ಸಂಘದಲ್ಲಿರುವ ರವಿ ಮೈಲಿಕರ್ ಮೋ.ಸಂ 9986486452, ಗಾಂಧಿ ಚೌಕ್ ಹತ್ತಿರ ವಿರುವ ಹಳೆಯ ಪುಸ್ತಕ ಅಂಗಡಿಯ ಶಿವಾನಂದ ಅಂಬಿಗೇರ ಮೋ.ಸಂ9448342873 ಹಾಗೂ ಮೀನಾಕ್ಷೀ ಚೌಕ ಆವರಣದಲ್ಲಿರುವ ಮಧುರಾ ಬಟ್ಟೆ ಅಂಗಡಿಯ ಪರಶುರಾಮ ಅಳಗುಂಡಗಿ ಇವರಲ್ಲಿ ಅರ್ಜಿಗಳನ್ನು ದಿನಾಂಕ 31ನೇ ಜುಲೈ2025ರ ರೊಳಗಾಗಿ ಸಲ್ಲಿಸುವಂತೆ ಪ್ರತಿಭಾ ಪುರಸ್ಕಾರ ಸಮೀತಿ ಅಧ್ಯಕ್ಷರಾದ ಎಸ್.ಎಮ್ ಕಣಬೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.