ಆಲಮಟ್ಟಿ: ಸುಪ್ರಸಿದ್ಧ ಹನುಮಾನ ದೇವಸ್ಥಾನದಿಂದ ಇಡೀ ರಾಜ್ಯಾದ್ಯಂತ ಪ್ರಸಿದ್ಧವಾಗಿರುವ ಸುಕ್ಷೇತ್ರ ಯಲಗೂರ ಬಳಿ ಆರಂಭಗೊAಡಿರುವ ಜೂಜಾಟ ಕೇಂದ್ರವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ವಾಸುದೇವ ಮೇಟಿ ಬಣ) ಪದಾಧಿಕಾರಿಗಳು ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಪವಿತ್ರ ಸ್ಥಳದಲ್ಲಿ ಎಂಎಸ್ ಐಎಲ್ ಮದ್ಯದ ಮಾರಾಟ ಮಳಿಗೆಯನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಶೀಘ್ರವೇ ಮದ್ಯದ ಮಾರಾಟ ಮಳಿಗೆ ಆರಂಭವಾಗಲಿದೆ. ಅದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಜೂಜಾಟ ಕೇಂದ್ರದಿAದ ಸುತ್ತಮುತ್ತಲಿನ ಸಾಂಸ್ಕೃತಿಕ ವಾತಾವರಣವೂ ಕಲುಷಿತಗೊಂಡಿದೆ. ಜೂಜಾಟ ಕೇಂದ್ರಕ್ಕೆ ನೀಡಿದ ಅನುಮತಿ ರದ್ದುಗೊಳಿಸಬೇಕು ಎಂದರು.
ಶಾAತಿ, ಸಾಂಸ್ಕೃತಿಕ ಹಾಗೂ ಧಾರ್ಮಿಕತೆಯಿಂದ ಯಲಗೂರ ಪ್ರಸಿದ್ದವಾಗಿದೆ, ಮಂತ್ರಾಲಯ ಮಾದರಿಯಲ್ಲಿ ಧಾರ್ಮಿಕ ನೆಲೆಯಾಗಿ ಅಭಿವೃದ್ಧಿಯಾಗುತ್ತಿದೆ. ಇಂತಹ ವಾತಾವರಣವನ್ನು ಈ ಜೂಜಾಟ ಕೇಂದ್ರ ಹಾಗೂ ಮದ್ಯ ಮಾರಾಟ ಕೇಂದ್ರ ಕೆಡಿಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಿರುಪತಿ ಬಂಡಿವಡ್ಡರ, ಕೆ.ಎಂ. ಬಿರಾದಾರ ಗುಡ್ನಾಳ, ಎ.ಎಂ. ಲಷ್ಕರಿ, ಬುಡ್ಡೇಸಾಬ್ ಡವಳಗಿ, ವಿಠ್ಠಲ ಬಂಡಿವಡ್ಡರ, ರಾಮಣ್ಣ ಕೂಚಬಾಳ ಇನ್ನೀತರರು ಇದ್ದರು.
Related Posts
Add A Comment