ವಿಜಯಪುರ: ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಭಾನುವಾರ ಭೂಮಿಪೂಜೆ ನೆರವೇರಿಸಿದರು.
ಅಲ್ಪಸಂಖ್ಯಾತರ ಇಲಾಖೆಯಿಂದ ಮಂಜೂರಿಸಿದ ರೂ.೬ ಕೋಟಿ ಅನುದಾನಲ್ಲಿ, ಕೇಂದ್ರ ಬಸ್ ನಿಲ್ದಾಣದಿಂದ ಸರ್ದಾರ ವಲ್ಲಭ ಬಾಯಿ ಪಟೇಲ್ ರಸ್ತೆವರೆಗಿನ ರಸ್ತೆ ಕಾಮಗಾರಿಗೆ, ರೂ.೨ ಕೋಟಿ ಅನುದಾನದಲ್ಲಿ ವಾ.ನಂ.೩೦ರ ವಿಶ್ವೇಶ್ವರಯ್ಯ ರಸ್ತೆಯ ನೀರಿನ ಗಂಜ ಮೂಲಕ ದರ್ಬಾರ್ ಗಲ್ಲಿಯ ಖಾದಿ ಗ್ರಾಮೋದ್ಯೋಗ ವರೆಗೆ ಆಂತರಿಕ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಮಹಾನಗರ ಪಾಲಿಕೆಯಿಂದ ಮಂಜೂರಿಸಿದ ರೂ.೨ ಕೋಟಿ ಅನುದಾನದಲ್ಲಿ ವಾ.ನಂ.೪ರ ಸೇವಾಲಾಲ ನಗರ ಮತ್ತು ಚಂದು ನಗರದ ಆಂತರಿಕ ರಸ್ತೆ ಕಾಮಗಾರಿಗೆ, ಮಹಾನಗರ ಪಾಲಿಕೆಯಿಂದ ಮಂಜೂರಿಸಿದ ರೂ.೩೦ ಲಕ್ಷ ಅನುದಾನದಲ್ಲಿ ಭೂತನಾಳದಲ್ಲಿ ಮಳೆ ನೀರು ಚರಂಡಿ ಕಾಮಗಾರಿಗೆ, ರೂ.೫೬ ಲಕ್ಷ ಅನುದಾನದಲ್ಲಿ ಸೊಲ್ಲಾಪುರ ಮುಖ್ಯ ರಸ್ತೆಯಿಂದ ಭೂತನಾಳ ತಾಂಡಾ ಮೂಲಕ ಅರಕೇರಿ ಕೂಡುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಾಗೂ ರೂ.೧.೯೪ ಕೋಟಿ ಅನುದಾನದಲ್ಲಿ ಸುಕುನ್ ಕಾಲೊನಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ವೆಟ್ ವೆಲ್) ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಜಿಲ್ಲಾ ಪಂಚಾಯಿತಿಯಿAದ ಮಂಜೂರಿಸಿದ ರೂ.೧.೧೪ ಕೋಟಿ ಅನುದಾನದಲ್ಲಿ ಭೂತನಾಳ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆ ನಂ.೫೧ರ ಏಳು ಕೊಠಡಿಗಳ ನಿರ್ಮಾಣ ಕಾಮಗಾರಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಂಜೂರಿಸಿದ ರೂ.೨೦ ಲಕ್ಷ ಅನುದಾನದಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ, ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಿಸಿದ ರೂ.೧.೧೧ ಕೋಟಿ ಅನುದಾನದಲ್ಲಿ ಭೂತನಾಳ ಗ್ರಾಮದ ಹತ್ತಿರ (ಎನ್.ಎಚ್) ಹಳ್ಳಕ್ಕೆ ಬಾಂದಾರ ನಿರ್ಮಾಣ ಕಾಮಗಾರಿ ಭೂಮಿಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯಿಂದ ಮಂಜೂರಿಸಿದ ರೂ.೧ ಕೋಟಿ ಅನುದಾನದಲ್ಲಿ ವಾ.ನಂ.೨೯ರ ಸೃಷ್ಟಿ ಕಾಲೊನಿ ಹಾಗೂ ನವರಸಪುರ ಕಾಲೊನಿಯ ಆಂತರಿಕ ರಸ್ತೆ ಕಾಮಗಾರಿಗೆ, ರೂ.೯೦ ಲಕ್ಷ ಅನುದಾನದಲ್ಲಿ ರಾಘವೇಂದ್ರ ಕಾಲೊನಿಯ ಆಂತರಿಕ ರಸ್ತೆಗಳ ಕಾಮಗಾರಿಗೆ, ರೂ.೨ ಕೋಟಿ ಅನುದಾನದಲ್ಲಿ ಭೂತನಾಳದಿಂದ ದೇವಾನಂದ ತೋಟದ ವರೆಗೆ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಮಹಾನಗರ ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಕಾಲೊನಿ ನಿವಾಸಿಗಳು ಇದ್ದರು.
Related Posts
Add A Comment