Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಬೇಡವೇ? ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸ್ಥಗಿತಗೊಳ್ಳಲು ಮೈಮುಲ್ ಮಾಜಿ ಅಧ್ಯಕ್ಷ ಈರೇಗೌಡ ಕಾರಣ ಎಂದು ಸಂಘದ ಮಾಜಿ ಕಾರ್ಯದರ್ಶಿ ಜಯಲಕ್ಷ್ಮಿ ಆರೋಪ ಮಾಡಿದ್ದಾರೆ.ಸ್ಥಗಿತಗೊಂಡಿರುವ ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಮುಂದುವರಿಯಬೇಕಾ, ಬೇಡವಾ ಎಂಬುದರ ಕುರಿತು ಚರ್ಚಿಸಲು ಬುಧವಾರ ತಾಲೂಕಿನ ಹೆಬ್ಬಲಗುಪ್ಪೆಯಲ್ಲಿ ಸಭೆ ಕರೆಯಲಾಗಿತ್ತು. ಸಿಡಿಒ ರೇಣುಕಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರ, ವಿರೋಧ ಚರ್ಚೆಯಾಯಿತು. ಒಮ್ಮತ ಅಭಿಪ್ರಾಯ ವ್ಯಕ್ತವಾಗದ ಹಿನ್ನೆಲೆ ಸಹಿ ಸಂಗ್ರಹಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲು ಸಭೆಯಲ್ಲಿ ರೇಣುಕಾ ಅವರು ನಿರ್ಧಾರ ಕೈಗೊಂಡರು.ಈ ವೇಳೆ ಮಾತನಾಡಿದ ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ಜಯಲಕ್ಷ್ಮಿ ಅವರು, 3-11-2008 ರಂದು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನೋಂದಣಿಯಾಗಿದ್ದು, ಸುಮಾರು 16 ವರ್ಷಗಳ ಕಾಲ ಕಾನೂನುತ್ಮಾಕವಾಗಿ ನಡೆಸಿಕೊಂಡು ಬಂದೆ. ಯಾವುದೇ ತೊಂದರೆಯಿಲ್ಲದೆ ರೈತರ ಮೆಚ್ಚುಗೆ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲ್ಲೂಕಿನ ರೋಣಿಹಾಳ 110/11ಕೆ.ವಿಉಪಕೇಂದ್ರದ ಮೊದಲನೆ ತ್ರೈಮಾಸಿಕ ನಿರ್ವಹಣಾ ಕಾರ್ಯನಿಮಿತ್ತ ಉಪಕೇಂದ್ರ ವ್ಯಾಪ್ತಿಯ ಕೊಲ್ಹಾರ, ಕುಬಕಡ್ಡಿ, ರೋಣಿಹಾಳ, ಹಳ್ಳದಗೆಣ್ಣೂರ, ಚಿಕ್ಕ ಗರಸಂಗಿ, ಹಿರೇ ಗರಸಂಗಿ, ಮುಳವಾಡ ಇಂಡಸ್ಟ್ರಿಯಲ್ ಏರಿಯಾ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಜೂನ್ 25 ರ ಗುರುವಾರ ಮುಂಜಾನೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಕಾರಣ ಗ್ರಾಹಕರಿಗೆ ಸಹಕರಿಸಲು ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದಲ್ಲಿ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ತಾಲ್ಲೂಕು ಘಟಕ ಕೊಲ್ಹಾರದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳವಾರ ನಡೆಯಿತು.ಕೊಲ್ಹಾರ ತಾಲ್ಲೂಕಿನ ನೂತನ ಪದಾಧಿಕಾರಿಗಳಪದಗ್ರಹಣ ಸಮಾರಂಭ ಜೂನ್ 23 ಮಂಗಳವಾರಸಿದ್ದು ಭಾವಿಕಟ್ಟಿ ಸಂಸ್ಥಾಪಕ ಅಧ್ಯಕ್ಷರ ನೇತೃತ್ವದಲ್ಲಿ ಹಾಗೂ ಸರ್ವ ಪದಾಧಿಕಾರಿಗಳ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.ಅಧ್ಯಕ್ಷರಾಗಿ ಮಹಾಂತೇಶ ಸರೂರ,ಉಪಾಧ್ಯಕ್ಷರಾಗಿ ನಿಂಗಪ್ಪ ಪೂಜಾರಿ, ಕಾರ್ಯದರ್ಶಿಯಾಗಿ ದರಿಯಪ್ಪ ಕೊಂತಿಕಲ್ ಯುವ ಘಟಕದ ಅಧ್ಯಕ್ಷರಾಗಿ ರಾಘವೇಂದ್ರ ಕಲಗುರ್ಕಿ ಹಾಗೂ ಪದಾಧಿಕಾರಿಗಳಾಗಿ ಮುತ್ತು ಮಸೂತಿ,ಅಂಬರೀಶ್ ಸಲಗರ ಇವರಿಗೆ ಆದೇಶ ಪತ್ರವನ್ನು ಸಂಸ್ಥಾಪಕ ಅಧ್ಯಕ್ಷರಾದ ಸಿದ್ದು ಭಾವಿಕಟ್ಟಿ ಹಾಗೂ ತಾಲೂಕು ಅಧ್ಯಕ್ಷರಾದ ಮಹಾಂತೇಶ ಸರೂರ ಅವರು ವಿತರಿಸಿದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ೨೦೨೬-೨೭ನೇ ಸಾಲಿನ ನೇಕಾರ ಸಮ್ಮಾನ್ ಯೋಜನೆ ಅಡಿಯಲ್ಲಿ ಜಿಲ್ಲೆಯ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕ ರೂ.೫,೦೦೦ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.೨೦೨೫-೨೬ನೇ ಸಾಲಿನಲ್ಲಿ ಯೋಜನೆಯ ಸೌಲಭ್ಯ ಪಡೆದ ನೇಕಾರರಲ್ಲಿ ಪ್ರಸ್ತುತ ನೇಕಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ ಪಿಎಂಜೆಜೆಬಿವೈ ಅಥವಾ ಪಿಎಂಎಸ್‌ಬಿವೈ ಯೋಜನೆಯಡಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರುವ ಅರ್ಹ ನೇಕಾರರು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಕಳೆದ ಸಾಲಿನಲ್ಲಿ ನೋಂದಣಿ ಮಾಡಿಸದ ಅರ್ಹ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರೂ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ ೨೨ ಕೊನೆಯ ದಿನವಾಗಿದೆ.ಹೊಸ ಅರ್ಜಿದಾರರು ನಿಗದಿತ ಅರ್ಜಿ ನಮೂನೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ನೇಕಾರ ಸಮ್ಮಾನ್ ಐಡಿ ಅಥವಾ ಪೆಹಚಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ನೇಕಾರರ ಗುರುತಿನ ಚೀಟಿ, ನೇಕಾರಿಕೆ ವೃತ್ತಿಯಲ್ಲಿ ತೊಡಗಿರುವುದಕ್ಕೆ ಸಮರ್ಥನೆಯಾಗಿ ಭಾವಚಿತ್ರ ಹಾಗೂ ಪಿಎಂಜೆಜೆಬಿವೈ-ಪಿಎಂಎಸ್‌ಬಿವೈ ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು.ಅರ್ಹ ನೇಕಾರರು ತಮ್ಮ ವಿವರಗಳನ್ನು ಸ್ಥಳೀಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿನ ಬೀಜ ಮಾರಾಟ ಮಳಿಗೆಗಳು, ಕೃಷಿ ಸೇವಾ ಕೇಂದ್ರಗಳು ಹಾಗೂ ಕೃಷಿ ಸಂಬಂಧಿತ ವಹಿವಾಟು ನಡೆಸುತ್ತಿರುವ ಅರ್ಹ ವ್ಯಾಪಾರಿಗಳು ಬಿತ್ತನೆ ಬೀಜ ಮಾರಾಟಕ್ಕೆ ಅಗತ್ಯವಾದ ಬೀಜ ಮಾರಾಟ ಪರವಾನಗಿ (ಸೀಡ್ ಲೈಸೆನ್ಸ್) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಬೀಜ ಕಾಯ್ದೆ-೧೯೬೬ ಹಾಗೂ ಬೀಜ ನಿಯಮ-೧೯೬೮ರ ಅನ್ವಯ ರೈತರಿಗೆ ಗುಣಮಟ್ಟದ ಮತ್ತು ಪ್ರಮಾಣಿತ ಬೀಜಗಳನ್ನು ಮಾತ್ರ ಮಾರಾಟ ಮಾಡಬೇಕು.ಅದರಂತೆ ತರಕಾರಿ ಮತ್ತು ಹೂವಿನ ಬೀಜಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಬೀಜಗಳ ನಿಯಂತ್ರಣ ಆದೇಶ-೧೯೮೩ರ ಪ್ರಕಾರ ತೋಟಗಾರಿಕೆ ಇಲಾಖೆಯಿಂದ ಬೀಜ ಮಾರಾಟ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.ಆದ್ದರಿಂದ ಜಿಲ್ಲೆಯಲ್ಲಿನ ಎಲ್ಲಾ ಬೀಜ ಮಾರಾಟ ವ್ಯಾಪಾರಿಗಳು ಜುಲೈ ೧೫ರೊಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಬೀಜ ಮಾರಾಟ ಪರವಾನಗಿ ಪತ್ರವನ್ನು ಪಡೆಯಬೇಕು. ಪರವಾನಗಿ ಪಡೆಯದೇ ಬೀಜ ಮಾರಾಟ ನಡೆಸುತ್ತಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.ಪರವಾನಗಿ ಪಡೆಯಲು ಅರ್ಜಿ ನಮೂನೆ ಜೊತೆಗೆ ಆಧಾರ್ ಕಾರ್ಡ್,…
ವಿಜಯಪುರ ದಲ್ಲಿ ನಡೆದ ವಿಶೇಷ ಚೇತನರ ಕುಂದು-ಕೊರತೆಗಳ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳಲ್ಲಿ ವಿಶೇಷ ಚೇತನರಿಗೆ ಯಾವುದೇ ರೀತಿಯ ಅಡೆತಡೆ ಉಂಟಾಗದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ವಿಶೇಷ ಚೇತನರಿಗಾಗಿ ಮೀಸಲಿರುವ ಶೇ.೫ರಷ್ಟು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶೇಷ ಚೇತನರ ಕುಂದು-ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿಶೇಷ ಚೇತನರಿಗೆ ವಿವಿಧ ಇಲಾಖೆಗಳ ಮೂಲಕ ದೊರೆಯುವ ಸೌಲಭ್ಯಗಳು ಮತ್ತು ಯೋಜನೆಗಳ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿದ ಅವರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ನೀಡಲಾಗುವ ವಿಶೇಷ ಚೇತನರ ಬಸ್‌ಪಾಸ್ ವಿತರಣೆಯನ್ನು ಮತ್ತಷ್ಟು ಸರಳೀಕರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಎಲ್ಲಾ ಇಲಾಖೆಗಳ ಕಚೇರಿಗಳ ಸೂಚನಾ ಫಲಕಗಳಲ್ಲಿ ವಿಶೇಷ ಚೇತನರಿಗಾಗಿ ಮೀಸಲಿರುವ ಶೇ.೫ರ ಅನುದಾನ ಹಾಗೂ ಸೌಲಭ್ಯಗಳ…
೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಸಿಂದಗಿ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ ಭರವಸೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದಲ್ಲಿ ಜುಲೈ ೨೧ ಮತ್ತು ೨೨ ರಂದು ಜರುಗುವ ೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಾಡಳಿತದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ ಭರವಸೆ ವ್ಯಕ್ತಪಡಿಸಿದರು.ಸಿಂದಗಿ ನಗರದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಡೆದ ೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಆಡಳಿತಾವಧಿಯಲ್ಲಿ ತಾಲೂಕಿನಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಸಂತೋಷಕರ ಸಂಗತಿ. ಕನ್ನಡಮ್ಮನ ನುಡಿ ತೇರನೆಳೆದು ಸೇವೆ ಮಾಡುವ ಸೌಭಾಗ್ಯ ನಮಗೆ ದೊರಕಿರುವದು ನಮ್ಮೆಲ್ಲರ ಅದೃಷ್ಟ. ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ, ಮಾದರಿಯಾಗಿ ಆಚರಿಸೋಣ ಎಂದರು.ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಸಿಂದಗಿಯಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿAದ ಸಮ್ಮೇಳನದ ತಯಾರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಅಕ್ಷರ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಚಾಂದಕವಠೆ ಗ್ರಾಮದ ಐಪಿಎಸ್ ಅಧಿಕಾರಿ ಚೆನ್ನಬಸವಣ್ಣ ಲಂಗೋಟಿ ಅವರು ೨೦೨೬ನೇ ಸಾಲಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಪ್ರಶಂಸಾ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಪ್ರಸ್ತುತ ಮೈಸೂರಿನ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿರುವ ಇವರು ಬೆಳಗಾವಿ, ಬೆಂಗಳೂರು, ಬೀದರ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಮಹಿಳಾ ಸಮುದಾಯದ ಸುರಕ್ಷತೆಗಾಗಿ ಇವರು ಬೀದರ ಜಿಲ್ಲೆಯಲ್ಲಿ ಸ್ಥಾಪಿಸಿದ ಅಕ್ಕ ಪಡೆ ಅತ್ಯಂತ ಜನಪ್ರಿಯಗೊಂಡು ರಾಜ್ಯವ್ಯಾಪ್ತಿ ಬಳಸಲಾಗುತ್ತಿದೆ. ಅಲ್ಲದೇ ದಕ್ಷಿಣ ಸುಡಾನ್‌ನಲ್ಲಿ ವಿಶ್ವ ಸಂಸ್ಥೆಯ ಪೊಲೀಸ್ ಸಲಹೆಗಾರರಾಗಿ ಹಾಗೂ ಕಾರ್ಯಾಚರಣೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಅಂತರ್‌ರಾಷ್ಟ್ರೀಯ ಅನುಭವ ತಮ್ಮದಾಗಿಸಿಕೊಂಡಿದ್ದಾರೆ. ಕವಿ, ಸಾಹಿತಿ, ಬರಹಗಾರರಾಗಿ ಗುರುತಿಸಿಕೊಂಡಿರುವ ಚೆನ್ನಬಸಪ್ಪ ಲಂಗೋಟಿ ಇವರ ಸೇವಾ ದಕ್ಷತೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಜಾನಪದ ಸಾಹಿತಿ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ, ಆರಕ್ಷಕ ಬರಹಗಾರ ಮೌಲಾಲಿ ಆಲಗೂರ, ಶಿಕ್ಷಕ ಶರಣು ಲಂಗೋಟಿ ಸೇರಿದಂತೆ ತಾಲೂಕಿನ ಜನತೆ ಹರ್ಷವ್ಯಕ್ತಪಡಿಸಿದೆ
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶಿಕ್ಷಣ ಸಂಸ್ಥೆಗಳನು ಕಟ್ಟಿ ಬೆಳೆಸುವ ಕಾರ್ಯ ಸಾಧಾರಣವಲ್ಲ. ಇಂಥ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಲ್.ಆರ್.ಅಂಗಡಿ ಹೇಳಿದರು.ಪಟ್ಟಣದ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜು ಆವರಣದಲ್ಲಿ ಬುಧವಾರ ಜರುಗಿದ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ರೂಪದಲ್ಲಿ ಪಾರಿತೋಷಕ ವಿತರಣೆ ಮಾಡಿ ಮಾತನಾಡಿದರು.ಕೇವಲ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಆರಂಭದಿಂದ ಏಳಿಗೆ ಅಸಾಧ್ಯ. ಸಂಸ್ಥೆಗಳನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಿದಲ್ಲಿ ಮಾತ್ರ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಸಾರ್ಥಕತೆ ದೊರಕಿದಂತಾಗುತ್ತದೆ. ಅದಕ್ಕಾಗಿ ಶಿಕ್ಷಕ ಸಮೂಹದ ಜೊತೆಗೆ ಪಾಲಕ ಬಂಧುಗಳು ಕೈಜೋಡಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಿಸಲಾಯಿತು. ನಂತರ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. ನಂತರ ಬ್ಯಾಂಕಾಕ್‌ನಲ್ಲಿ ಜರುಗಿದ ೧೦ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಗೌರವಯುತ ಸುಸ್ಥಿರ ಶಿಕ್ಷಣ ಅಭಿವೃದ್ಧಿ ಹರಿಕಾರ ಪ್ರಶಸ್ತಿಗೆ…
