ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ನೀರಾವರಿಗಾಗಿ ಕಾಲುವೆಗಳಿಗೆ ಏಪ್ರಿಲ್ ಅಂತ್ಯದವರೆಗೂ ನೀರು ಹರಿಸಬೇಕು ಹಾಗೂ
ವಿಜಯಪುರ ಜಿಲ್ಲೆಯ ಕೆರೆಗಳ ಭರ್ತಿಗಾಗಿ ಮೇ ಅಂತ್ಯದವರೆಗೂ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ಸೋಮವಾರ ಆಗ್ರಹಿಸಿದರು.
ಇಲ್ಲಿನ ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಡಿ.ಬಸವರಾಜ ಅವರಿಗೆ ಮನವಿ ಅರ್ಪಿಸಿ ನೀರು ಬಿಡುವಂತೆ ಮನವಿ ಮಾಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗರಾಜ ಅಲೂರ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಸೀತಪ್ಪ ಗಣಿ ಮಾತನಾಡಿ, ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಿಲ್ಲೆಯ ಕೆರೆಗಳ ಭರ್ತಿಗಾಗಿ ಮೇ ತಿಂಗಳಾದ್ಯAತ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಬೇಕು, ಅದೇ ರೀತಿ ಶೇಂಗಾ, ಉಳ್ಳಾಗಡ್ಡಿ , ಮೆಕ್ಕೆಜೋಳಕ್ಕೆ ನೀರಿನ ಅಗತ್ಯವಿದೆ ಎಂದರು.
ರೈತರ ಸಮಸ್ಯೆಯ ಬೇಡಿಕೆಯ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮುಖ್ಯ ಎಂಜಿನಿಯರ್ ಡಿ ಬಸವರಾಜ, ಮೇ ತಿಂಗಳಲ್ಲಿ ಕೆರೆಗಳ ಭರ್ತಿಗಾಗಿ ನೀರು ಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿವಪ್ಪ ಪಾಟೀಲ, ಹೊನ್ನಪ್ಪ ಕೆಂಗುತ್ತಿ , ಲಕ್ಷ್ಮಣ ಚಲವಾದಿ, ಈರಯ್ಯ ಹಿರೇಮಠ, ಶಿವಾನಂದ ಚಲವಾದಿ ಮತ್ತೀತರರು ಇದ್ದರು.

