Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸದ್ದಿಲ್ಲದೆ ಜಲಯೋಗದ ಸಾಧನೆ ಗೈದ ಪತ್ರಕರ್ತ ಸುನೀಲ ಗೋಡೆನ್ನವರ

ಯೋಗದಿಂದ ರೋಗ ದೂರ

ನೆನಪಿನ ಗೂಡಲಿ ಒಲವಿನ ಬೆಳಕು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸದ್ದಿಲ್ಲದೆ ಜಲಯೋಗದ ಸಾಧನೆ ಗೈದ ಪತ್ರಕರ್ತ ಸುನೀಲ ಗೋಡೆನ್ನವರ
(ರಾಜ್ಯ ) ಜಿಲ್ಲೆ

ಸದ್ದಿಲ್ಲದೆ ಜಲಯೋಗದ ಸಾಧನೆ ಗೈದ ಪತ್ರಕರ್ತ ಸುನೀಲ ಗೋಡೆನ್ನವರ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವರದಿ: ರಾಜು ಕೆರುಟಗಿ
ವಿಜಯಪುರ: ನಗರದ ಪತ್ರಕರ್ತ ಸುನೀಲ ಗೋಡೆನ್ನವರ ಅವರು ಭಾನುವಾರ ವಿಶ್ವ ಯೋಗ ದಿನ ಪ್ರಯುಕ್ತ ಶನಿವಾರ ತಮ್ಮ ಇಬ್ಬರು ಮಕ್ಕಳೊಂದಿಗೆ ನೀರಿನಲ್ಲೇ ಯೋಗ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಅತ್ಯಂತ ಕಠಿಣವೆನಿಸುವ ಜಲಯೋಗದ ಮೂಲಕ ಆರೋಗ್ಯ, ಏಕಾಗ್ರತೆ ಮತ್ತು ಶಿಸ್ತಿನ ಮಹತ್ವ ಸಾರುತ್ತಿರುವ ಪತ್ರಕರ್ತ ಸುನೀಲ ಗೋಡೆನ್ನವರ ಅವರು ನೀರಿನ ಮೇಲೆ ತೇಲುತ್ತಾ, ಕಣ್ಣು ಮುಚ್ಚಿ ಧ್ಯಾನದಲ್ಲಿ ಮಗ್ನರಾಗುವುದು ಕಠಿಣ ಯೋಗಗಳಲ್ಲಿ ಒಂದಾಗಿದೆ ಎನ್ನುತ್ತಾರೆ ಸಿಂದಗಿಯ ಹಿರಿಯ ಯೋಗಪಟು ಗಂಗಾಧರ ಹಿರೇಮಠ ಅವರು.
ರವಿವಾರ ವಿಶ್ವ ಯೋಗ ದಿನದ ಅಂಗವಾಗಿ ಪತ್ರಕರ್ತ ಸುನಿಲ್ ಹಾಗೂ ಅವರ ಮಕ್ಕಳಾದ ಸಾತ್ವಿಕ್ ಮತ್ತು ಋತ್ವಿಕ್ ಅವರು ಶನಿವಾರ ಜಲಯೋಗ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ ಯೋಗವನ್ನು ನೆಲದ ಮೇಲೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ನೀರಿನಲ್ಲೇ ಸಮತೋಲನ ಕಾಯ್ದುಕೊಂಡು ಪದ್ಮಾಸನ, ಉತ್ಕಟಾಸನ, ಶವಾಸನ ಸೇರಿದಂತೆ ಹಲವು ಆಸನಗಳನ್ನು ಮಾಡುವುದು ಸುಲಭದ ಮಾತಲ್ಲ. ಇದರ ಜೊತೆಗೆ ನೀರಿನಲ್ಲೇ ಪ್ರಾಣಾಯಾಮ ಅಭ್ಯಾಸ ಮಾಡಿ ದೇಹ ಮತ್ತು ಮನಸ್ಸಿನ ಮೇಲೆ ಸುನೀಲ ಅವರು ಹಿಡಿತ ಸಾಧಿಸುತ್ತಿದ್ದಾರೆ.
ನಿತ್ಯ ಕನಿಷ್ಠ ಎರಡು ಗಂಟೆಗಳ ಕಾಲ ಯೋಗಾಭ್ಯಾಸ ಮಾಡುವ ಈ ಕುಟುಂಬ, ಯೋಗವನ್ನು ಕೇವಲ ವ್ಯಾಯಾಮವಲ್ಲ, ಬದುಕಿನ ಶಿಸ್ತು ಎಂದು ಅಳವಡಿಸಿಕೊಂಡಿದೆ. ಇಂದು ಅನೇಕ ಯುವಕರು ದುಶ್ಚಟಗಳತ್ತ ಆಕರ್ಷಿತರಾಗುತ್ತಿರುವ ಸಂದರ್ಭದಲ್ಲಿ, ಈ ಕುಟುಂಬ ಮಾತ್ರ ಆರೋಗ್ಯಕರ ಜೀವನಶೈಲಿಯ ಮೂಲಕ ಮಾದರಿಯಾಗುತ್ತಿದೆ.
ನೀರಿನಲ್ಲಿ ಈಜು, ಯೋಗ ಮತ್ತು ಪ್ರಾಣಾಯಾಮವನ್ನು ಒಟ್ಟಿಗೆ ಅಭ್ಯಾಸ ಮಾಡುವ ಮೂಲಕ ಆರೋಗ್ಯದ ಜೊತೆಗೆ ಆತ್ಮವಿಶ್ವಾಸವನ್ನೂ ಬೆಳೆಸಿಕೊಳ್ಳುತ್ತಿದ್ದಾರೆ.

“ಜಲಯೋಗದಿಂದ ದೇಹದ ಸಮತೋಲನ ಹೆಚ್ಚುವುದರ ಜೊತೆಗೆ ಮನಸ್ಸು ಏಕಾಗ್ರತೆ ಹೊಂದಲು ಸಹಾಯವಾಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುವುದಲ್ಲದೆ ದೇಹ ಹೆಚ್ಚು ಚುರುಕಾಗುತ್ತದೆ. ಇದು ನನ್ನ ಸ್ವಾನುಭವ.”

– ಸುನೀಲ ಗೋಡೆನ್ನವರ
ಪತ್ರಕರ್ತರು, ವಿಜಯಪುರ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಯೋಗದಿಂದ ರೋಗ ದೂರ

ನೆನಪಿನ ಗೂಡಲಿ ಒಲವಿನ ಬೆಳಕು

ಅಪ್ಪನೆಂದರೆ ಆಲದ ಮರ

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 20, 2026

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸದ್ದಿಲ್ಲದೆ ಜಲಯೋಗದ ಸಾಧನೆ ಗೈದ ಪತ್ರಕರ್ತ ಸುನೀಲ ಗೋಡೆನ್ನವರ
    In (ರಾಜ್ಯ ) ಜಿಲ್ಲೆ
  • ಯೋಗದಿಂದ ರೋಗ ದೂರ
    In ವಿಶೇಷ ಲೇಖನ
  • ನೆನಪಿನ ಗೂಡಲಿ ಒಲವಿನ ಬೆಳಕು
    In ವಿಶೇಷ ಲೇಖನ
  • ಅಪ್ಪನೆಂದರೆ ಆಲದ ಮರ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 20, 2026
    In ದಿನಪತ್ರಿಕೆ
  • ಆಲಮಟ್ಟಿ ನೀರಿನ ಹಕ್ಕಿಗಾಗಿ ಹೋರಾಟ ತೀವ್ರ :ಸಂಸದರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಿಎಲ್ಡಿಇ ಆಸ್ಪತ್ರೆ: ಕಾಕ್ಲಿಯರ್ ಇಂಪ್ಲಾಂಟ್ ಸ್ವಿಚ್ ಆನ್ ಕಾರ್ಯಕ್ರಮ ಯಶಸ್ವಿ
    In (ರಾಜ್ಯ ) ಜಿಲ್ಲೆ
  • ಜೂ.೨೩-೨೪ಕ್ಕೆ ಕಿಡ್ನಿ ಸಂಬಂದಿತ ಸಮಸ್ಯೆಗಳಿಗೆಉಚಿತ ಚಿಕಿತ್ಸಾ ಶಿಬಿರ
    In (ರಾಜ್ಯ ) ಜಿಲ್ಲೆ
  • ವಿಶ್ವ ಯುವ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಶಿಫಾ ಜಮಾದಾರ
    In (ರಾಜ್ಯ ) ಜಿಲ್ಲೆ
  • ​ಮೈಸೂರು ವಿವಿ ಬಿ.ವಿ.ಎ ಪದವಿ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.