ಉದಯರಶ್ಮಿ ದಿನಪತ್ರಿಕೆ
ಚಡಚಣ: ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಬಳ್ಳೊಳ್ಳಿ ಗ್ರಾಮದ ಗ್ರಾಮ ದೇವರು ಶ್ರೀ ವೀರಬದ್ರೇಶ್ವರ ದೇವರ ಜಾತ್ರಾ ಮಹೊತ್ಸವ ಆಚರಣೆ ಅದ್ಧೂರಿಯಾಗಿ ನಡೆಯಿತು, ಸೋಮವಾರ ದಿವಸ ಜಂಗಮ ವಟುಗಳಿಗೆ ಹಿರಿಯರ ವಾಡಿಕೆಯಂತೆ ಬಾಳಿಕಾಯಿ, ಚಪಾತಿ, ಹುಗ್ಗಿ ವಿಶೇಷ ಭೋಜನ ಉಣ ಬಡಿಸಿ ನಂತರ ಗ್ರಾಮದ ಭಕ್ತರು ಪ್ರಸಾದ ಸೇವಿಸಿದರು, ನಂತರ ಗೀಗೀ ಪದಗಳು ಜರುಗಿದವು, ಮಂಗಳವಾರ ಬೆಳಿಗಿನ ಜಾವದಲ್ಲಿ ಭಕ್ತಾದಿಗಳಿಂದ ಧೀರ್ಘದಂಡವತ, ಜವಳ ಸೇವೆ, ನಂತರ ವೇಷಧಾರಿ ಪುರವಂತರಿಂದ ಶಸ್ತ್ರಾಸ್ತ್ರಗಳಿಂದ ನೃತ್ಯ, ನಂದಿ ಧ್ವಜಗಳನ್ನು ಹೊತ್ತು ಭಕ್ತರ ಭವ್ಯ ಮೇರವಣಿಗೆ, ಮದ್ಯಾಹ್ನ ಸರಿಯಾಗಿ ಸುಡು ಬಿಸಿಲಿನಲ್ಲಿ ವೀರಬದ್ರೇಶ್ವರ ದೇವರ ಪೂಜಾರಿ ಮೋನಪ್ಪ ಬಡಿಗೇರ ಇವರಿಂದ ಅಗ್ನಿ ಪ್ರವೇಶ, ನಂತರ ಪಲ್ಲಕ್ಕಿ, ನಂದಿ ಧ್ವಜಗಳ ಮೆರವಣಿಗೆ ನಡೆಯಿತು. ನೂರಾರು ಭಕ್ತರು ಅಗ್ನಿ ಪ್ರವೇಶ ಮಾಡಿ ಪುನಿತರಾದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಇಂಡಿ ಶಾಸಕ ಯಶವಂತರಾಗೌಡ ಪಾಟೀಲ, ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ, ಝಳಕಿ ಠಾಣಾಧಿಕಾರಿ ಮಂಜುನಾಥ ತಿರಕನ್ನವರ, ಈರಣ್ಣ ವಾಲಿ, ಕಾಮಣ್ಣಗೌಡ ಬಿರಾದಾರ, ಅಶೋಕ ತೋಟದಾರ, ಸಿದ್ದಾರಾಮ ಶಿರಶ್ಯಾಡ, ಸದಾಶಿವ ರೇವತಗಾಂವ, ರೇವಣಸಿದ್ದ ಶಿರಶ್ಯಾಡ, ವಿನೋದ ಶಿರಶ್ಯಾಡ, ಭೀಮಾಶಂಕರ ವಾಲಿಕಾರ, ರಾಘವೇಂದ್ರ ಕಾಪಸೆ, ಸಣ್ಣಪ್ಪ ತಳವಾರ, ಹರೀಶ ಶೆಟ್ಟಿ, ಪ್ರಕಾಶ ಬಿರಾದಾರ, ಹಾಗೂ ಪೊಲಿಸ ಸಿಬ್ಬಂದಿ ಸೋಮು ಶಿವೂರ, ಭಿಮಾಶಂಕರ ದೇವರ , ಗ್ರಾಮಸ್ಥರು ಉಪಸ್ಥಿತರಿದ್ದರು.

