Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ

ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಮಾ.26ಕ್ಕೆ ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕೆಬಿಜೆಎನ್ನೆಲ್ ಅಧಿಕಾರಿಗಳಿಂದ ಚಡಚಣ ಭಾಗದ ರೈತರಿಗೆ ಮಲತಾಯಿ ಧೋರಣೆ
(ರಾಜ್ಯ ) ಜಿಲ್ಲೆ

ಕೆಬಿಜೆಎನ್ನೆಲ್ ಅಧಿಕಾರಿಗಳಿಂದ ಚಡಚಣ ಭಾಗದ ರೈತರಿಗೆ ಮಲತಾಯಿ ಧೋರಣೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಝಳಕಿಯಲ್ಲಿ ರೈತರ ಆಕ್ರೋಶ | ಕೆಬಿಜೆಎನ್‌ಎಲ್ ವಿರುದ್ಧ ರೈತರ ಪ್ರತಿಭಟನೆ | ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

ಉದಯರಶ್ಮಿ ದಿನಪತ್ರಿಕೆ

ಚಡಚಣ: ತಾಲೂಕಿನ ರೈತರಿಗೆ ಕೆ. ಬಿ. ಜೆ. ಎನ್. ಎಲ್ ಅಧಿಕಾರಿಗಳು ಮಲತಾಯಿ ದೋರಣೆ ಮಾಡುತ್ತಿದ್ದಾರೆ, ನಮ್ಮ ರೈತರು, ಜಾನುವಾರುಗಳಿಗೆ, ಜಮೀನುಗಳಿಗೆ ನೀರಿಲ್ಲದೆ ಗೊಳಾಡಿದರೂ ರೈತರ ಕೂಗಿಗೆ ಸ್ಪಂದನೆ ಕೊಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಆಕ್ರೋಶ ವ್ಯಕ್ತಪಡಿಸಿದರು.
ಝಳಕಿ ಹಾಗೂ ಚಡಚಣ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ತಿಂಗಳಿಂದ ನೀರಿನ ಕೊರತೆ ತೀವ್ರವಾಗಿದೆ. ಕೆಬಿಜೆಎನ್‌ಎಲ್‌ ಯೋಜನೆಗಳು ಸಮಯಕ್ಕೆ ಪೂರ್ಣಗೊಳ್ಳದ ಕಾರಣ ಕಾಲುವೆಗಳಿಗೆ ನೀರು ಸರಿಯಾಗಿ ಹರಿಯುತ್ತಿಲ್ಲ. ಇದರಿಂದ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗುತ್ತಿವೆ. ರೈತರ ಬೇಡಿಕೆಗಳಾದ ತಕ್ಷಣ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಬೇಕು,ಬಾಕಿ ಉಳಿದ ನೀರಾವರಿ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು, ಬೆಳೆ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಸರಿಯಾದ ನೀರು ಪೋರೈಕೆ ಮಾಡಬೇಕು, ಇಲ್ಲವಾದಲ್ಲಿ ಮುಂದಿನದಿನಗಳಲ್ಲಿ ಜಾನುವಾರುಗಳನ್ನು ತಂದು ಉಗ್ರ ಹೋರಾಟ ಮಾಡಲಾಗುವುದು ಎಂದರು.
ನಾಗಠಾಣ ಕ್ಷೇತ್ರದ 35 ರಿಂದ 46ರ ಡಿಸ್ಟ್ರೀಬ್ಯೂಟರ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಸದಸ್ಯರು ಮತ್ತು ಚಡಚಣ ತಾಲೂಕಾ ರೈತರಿಂದ ಝಳಕಿ ಕಾರ್ಯಪಾಲಕ ಅಭಿಯಂತರರು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಕಚೇರಿ ಎದುರಿಗೆ ರೈತರಿಂದ ಬೃಹತ್ ಹೋರಾಟ ನಡೆಯಿತು.
ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳೆ ಮಾತನಾಡಿ, ಕುಡಿಯುವ ನೀರಿನ ಅಭಾವವಿದ್ದು, ಶುದ್ಧ ಘಟಕ ಮತ್ತು ಕೆರೆಗಳಿಗೆ ನೀರನ್ನು ತುಂಬಿಸಿ ನಂತರ ಕಾಲುವೆಗಳಿಗೆ ನೀರು ಹಾರೈಸುವಂತೆ ಆದೇಶವಿದ್ದು, ನಾವು ಅದನ್ನು ಪಾಲಿಸಬೇಕಾಗುತ್ತದೆ, ನಾನು ಯಾವ ರೈತರಿಗೂ ಅಸಹ್ಯ ಮಾತನಾಡಿಲ್ಲ, ಆದರೂಕೂಡ ನಾನು ರೈತರಲ್ಲಿ ಕ್ಷಮಾಪಣೆ ಕೇಳುತ್ತೇನೆ ಎಂದರು.
ದಯಾನಂದ ಕೋಳಿ ಮಾತನಾಡಿ ಸರ್ಕಾರ ನೀಡಿರುವ ಆದೇಶ ಪ್ರತಿ ನಮಗೆ ಕೊಡಿ, ರೈತರೆಂದರೆ ಮರ್ಯಾದೆ ಕೊಡದ ಅಧಿಕಾರಿಗಳಿಗೆ ಧಿಕ್ಕಾರ, ರೈತರು ದೇಶದ ಬೆನ್ನೆಲಬು ಎಂದು ಭಾಷಣ ಬಿಗಿಯುತ್ತೀರಿ, ರೈತರು ಕಚೇರಿಗೆ ಬಂದರೆ ಅಸಭ್ಯ ವರ್ತನೆ ಮಾಡುತ್ತೀರಿ, ನಮಗೆ ನ್ಯಾಯ ಸಿಗುವವರೆಗೂ ಇಲ್ಲಿಂದ ಕದಡೊದಿಲ್ಲ ಎಂದು ಘೋಷಣೆ ಕೂಗಿದರು.
ಕಚೇರಿ ಎದುರಲ್ಲಿ ರೈತರೇ ಸ್ವತಃ ಅಡುಗೆ ಮಾಡಿ, ಕಚೇರಿ ಎದುರು ನೆಲದ ಮೇಲೆ ಕುಳಿತು ಉಪಹಾರ ಮಾಡಿ, ಮತ್ತೆ ಹೋರಾಟ ಮುಂದುವರೆಸಿದರು.
ಇಂಡಿ ತಹಸೀಲ್ದಾರ ವಿಜಯ ಕಡಕಭಾವಿ ಮತ್ತು ಚಡಚಣ ತಹಸೀಲ್ದಾರ ಸಂಜಯ ಇಂಗಳೆ, ಝಳಕಿ ಠಾಣಾ ಅಧಿಕಾರಿಗಳು ಮಂಜುನಾಥ್ ತೀರಕನ್ನವರ ಮಧ್ಯಸ್ತಿಕೆ ವಹಿಸಿ, ರೈತರಿಗೆ ಅಶ್ವಾಸನೆ ನೀಡಿ, ಜಿಲ್ಲಾಧಿಕಾರಿಗಳೊಂದಿಗೆ ನೇರವಾಗಿ ಫೋನ್ ಮುಖಾಂತರ ಸಂದರ್ಶನ ನಡೆಸಿ ನೀರು ಪೂರೈಕೆ ಮಾಡಲಾಗುವದು ಎಂದು ತಿಳಿಸಿದರು. ಆಗ ರೈತರು ಹೋರಾಟ ಅಂತ್ಯಗೊಳಿಸಿ ಅಧಿಕಾರಿಗಳೊಂದಿಗೆ ಸ್ಪಂದಿಸಿದರು.
ಪ್ರತಿಭಟನೆ ವೇಳೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಎಲ್ಲ ಕಾರ್ಯಕರ್ತರು, ದಯಾನಂದ ಕೋಳಿ, ವಸಂತ ಭೈರಾಮಡಿ, ಗುರುನಾಥ ಬಗಲಿ, ಎಮ್.ಎಚ್. ಪೂಜಾರಿ, ಖಾಜೀಸಾಬ ಗುರುನಾಳ, ರಾಜುಗೌಡ ಪಾಟೀಲ, ದಸ್ತಗೀರ ವಾಲಿಕಾರ, ಅಣ್ಣಾರಾಯ ಶಿರನಾಳ, ಸತೀಶ ತಳಕೇರಿ, ದಾನೇಶ ತಳಕೇರಿ,ನಾಗನಾಥ ಬಿರಾದಾರ, ಅಶೋಕ್ ಜಿತ್ತಿ, ಸೋಮನಾಥ ಮದಭಾವಿ, ಭೀಮಾಶಂಕರ್ ರಗಟೆ, ಕಾಶಿರಾಯ ಕಾಮಗೊಂಡ, ಸದಾಶಿವ ತೇಲಿ, ಸುರೇಶ ಮಾಳಾಬಾಗಿ, ಲಕ್ಷ್ಮಣ ಬೆಳ್ಳಿ, ಸಂತೋಷ ಘೋಡಕೆ, ಖಾಜಾಮಿಯಾ ಪಿರಜಾದೆ, ಮಹೇಶ ವಗ್ಗಿ, ಲೋಣಿ (ಬಿಕೆ), ಚಡಚಣ,ಬರಡೋಲ, ಏಳಗಿ, ಹಲಸಂಗಿ, ಹತ್ತಳ್ಳಿ, ಹಾವಿನಾಳ, ಮಣಂಕಲಗಿ, ಮರಗುರ, ತದ್ದೇವಾಡಿ, ಗೋಡಿಹಾಳ, ಉಮರಾಣಿ ಗ್ರಾಮದ ರೈತರು ಉಪಸ್ಥಿತರಿದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ

ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಮಾ.26ಕ್ಕೆ ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯ!

ಸ್ಮಶಾನ ಭೂಮಿಗೆ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಿ :ಡಿಸಿ ಡಾ.ಆನಂದ ಕೆ.

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ
    In (ರಾಜ್ಯ ) ಜಿಲ್ಲೆ
  • ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಮಾ.26ಕ್ಕೆ ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯ!
    In (ರಾಜ್ಯ ) ಜಿಲ್ಲೆ
  • ಸ್ಮಶಾನ ಭೂಮಿಗೆ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಿ :ಡಿಸಿ ಡಾ.ಆನಂದ ಕೆ.
    In (ರಾಜ್ಯ ) ಜಿಲ್ಲೆ
  • ಅಲೆಮಾರಿ ಜನಾಂಗದವರ ಕಾಲೊನಿಗಳಿಗೆ ಮೂಲಸೌಲಭ್ಯ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಸಂಪೂರ್ಣ ಒಳಮೀಸಲಾತಿ ಜಾರಿಗೆ ರಕ್ತ ಕರಪತ್ರ ಚಳುವಳಿ!
    In (ರಾಜ್ಯ ) ಜಿಲ್ಲೆ
  • ಮಹಿಳೆ ಅಬಲೆಯಲ್ಲ ಸಬಲೆ :ಪ್ರತಿಮಾ ಪಾಟೀಲ
    In (ರಾಜ್ಯ ) ಜಿಲ್ಲೆ
  • ರೈತರ ಹೊಲದಲ್ಲಿ ಅನಾಹುತಕ್ಕೆ ಕಾದಿರುವ ವಾಲಿದ ವಿದ್ಯುತ್ ಕಂಬ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ :ಎಸಿ ಗುರುಸ್ವಾಮಿ
    In (ರಾಜ್ಯ ) ಜಿಲ್ಲೆ
  • ಸೇತುವೆ ಕಾರ್ಯದಿಂದಾಗಿ ಮಾರ್ಗ ಬದಲಾವಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.