ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವ್ಹಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಕಾಯಚಿಕಿತ್ಸಾ ವಿಭಾಗದ ವತಿಯಿಂದ ಕಿಡ್ನಿ ವೈಫಲ್ಯ ಮತ್ತು ಕಿಡ್ನಿ ಸಂಬಂದಿತ ಸಮಸ್ಯೆಗಳಾದ ಮೂತ್ರ ಕಡಿಮೆ ವಿಸರ್ಜನೆ, ರಕ್ತ ಹೀನತೆ, ರಕ್ತದೊತ್ತಡ (High blood pressure), ಧೀರ್ಘ ಕಾಲಿನ ಕಿಡ್ನಿ ವೈಫಲ್ಯ, ಹೈ ಕ್ರೀಯಾಟಿನ್ ಲೆವಲ್ಸ, ವಾಂತಿ, ಪಾದ ಉಜ್ಜುವಿಕೆ, ಸಕ್ಕರೆ ಕಾಯಿಲೆಯಿಂದ ಕಿಡ್ನಿ ವೈಫಲ್ಯ ಈ ರೀತಿಯ ಲಕ್ಷಣಗಳು ಹೊಂದಿರುವವರು ಜೂನ್ 23 ಹಾಗೂ ಜೂನ್ 24 ರಂದು ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು 2 ದಿನಗಳ ಕಾಲ ನಡೆಯಲಿದೆ.
ಇಂಥ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಮೊಬೈಲ್ ಸಂಖ್ಯೆ – 9513397413 ಮತ್ತು ಡಾ. ಅಶ್ವಿನಿ ಸಜ್ಜನ್ನವರ-7406737888 ಸಂಪರ್ಕಿಸಬಹುದಾಗಿದೆ.
