ಉದಯರಶ್ಮಿ ದಿನಪತ್ರಿಕೆ
ಇಂಡಿ: ಇಂಡಿಯಿಂದ ಕಲಬುರಗಿಗೆ ಹೋಗುವ ರಾಜ್ಯ ಕರ್ನಾಟಕ ರಾಜ್ಯ ಸಾರಿಗೆ ಬಸಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಘಟಕ ವ್ಯವಸ್ಥಾಪಕ ರೇವಣಸಿದ್ಧ ಖೈನೂರ ತಿಳಿಸಿದ್ದಾರೆ.
ಆಲಮೇಲದಿಂದ ಅಫಝಲಪೂರಕ್ಕೆ ಹೋಗುವ ಮಾರ್ಗದಲ್ಲಿ ದೇವಣಗಾಂವ ಬ್ರೀಡ್ಜ ಕಾರ್ಯ ನಡೆದ ನಿಮಿತ್ಯ ಈ ಕ್ರಮ ಕೈಕೊಳ್ಳಲಾಗಿದೆ.
ಇಂಡಿಯಿಂದ ಕಲಬುರಗಿಗೆ ಹೋಗುವ ಬಸ್ಸುಗಳು ಉಡಚಾಣ ಮಾರ್ಗವಾಗಿ ಅಪಝಲಪೂರಕ್ಕೆ ಹೋಗುವವು ಆದರೆ ದರದಲ್ಲಿ ಯಾವದೇ ಬದಲಾವಣೆ ಇರುವದಿಲ್ಲ ಎಂದು ಖೈನೂರ ತಿಳಿಸಿದ್ದಾರೆ.
