ಉದಯರಶ್ಮಿ ದಿನಪತ್ರಿಕೆ
ಇಂಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದ್ದು ಯಾವದೇ ಶಾಲೆ ಹಾಗೂ ಹಾಸ್ಟೇಲಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಕೊಳ್ಳಬೇಕು ಎಂದು ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದರು.
ತಾ,ಪಂ ಸಬಾಭವನದಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಗಳ ಬಗ್ಗೆ ನಡೆದ ಟಾಸ್ಕ ಪೋರ್ಸ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಸಿಗೆಯಲ್ಲಿ ನೀರಿನ ಅಭಾವ ಆಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ನೀರಿನ ಸಮಸ್ಯೆ ಉದ್ಭವಿಸಬಹುದಾದ ಸ್ಥಳಗಳ ಕುರಿತು ಮುಂಚಿತವಾಗಿ ಮಾಹಿತಿ ಸಲ್ಲಿಸಬೇಕು ಎಂದರು.
ನಗರ ನೀರು ಸರಬರಾಜಿಗೆ ಸಂಬಂದಿಸಿದಂತೆ ಅಗತ್ಯ ಮುಂಜಾಗೃತೆ ಕ್ರಮ ವಹಿಸಬೇಕು. ಗ್ರಾಪಂ ಹಂತದಲ್ಲಿಯೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಎಂದು ಎಇಇ ಬಂಡಿಯವರಿಗೆ ಸೂಚನೆ ನೀಡಿದರು.
ಇಒ ಭೀಮಾಶಂಕರ ಕನ್ನೂರ ಮಾತನಾಡಿ, ಮಿರಗಿ, ಮಸಳಿ, ಗುಬ್ಬೇವಾಡ ಕೊಳುರಗಿ ಝಳಕಿ ಬಸನಾಳ ಬಬಲಾದ ನಿಂಬಾಳ ಕೆಡಿ ಸಾಲೋಟಗಿ ಹಾಗೂ ತಡವಲಗಾ ಅಡವಿ ವಸ್ತಿಗಳ ಕುರಿತು ಗ್ರಾ.ಪಂ ಗಳಲ್ಲಿ ಚರ್ಚಿಸಬೇಕು. ಯಾವದೇ ಸಮಸ್ಯೆ ಬರದಂತೆ ಖುದ್ದಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು. ಸಹಾಯಕ ನಿರ್ದೇಶಕ ಪ್ರಕಾಶ ರಾಠೋಡ, ಯೋಜನಾಧಿಕಾರಿ ನಂದೀಪ ರಾಠೋಡ, ಹೆಸ್ಕಾಂ ಎಇಇ ಎಸ್.ಆರ್.ಮೆಡೆಗಾರ, ಪೌರಾಯುಕ್ತ ನಗರ ಸಭೆ ಶಿವಾನಂದ ಪೂಜಾರಿ ಕಾರ್ಯಪಾಲಕ ಅಭಿಯಂತರ ಮನೋಜಕುಮಾರ ತಾಲೂಕಿನ ಎಲ್ಲ ಗ್ರಾ.ಪಂ ಆಡಳಿತ ಅಧಿಕಾರಿಗಳು ಮತ್ತು ಪಿಡಿಒಗಳು ಮತ್ತಿತರಿದ್ದರು.

