Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸದ್ದಿಲ್ಲದೆ ಜಲಯೋಗದ ಸಾಧನೆ ಗೈದ ಪತ್ರಕರ್ತ ಸುನೀಲ ಗೋಡೆನ್ನವರ

ಯೋಗದಿಂದ ರೋಗ ದೂರ

ನೆನಪಿನ ಗೂಡಲಿ ಒಲವಿನ ಬೆಳಕು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ನೆನಪಿನ ಗೂಡಲಿ ಒಲವಿನ ಬೆಳಕು
ವಿಶೇಷ ಲೇಖನ

ನೆನಪಿನ ಗೂಡಲಿ ಒಲವಿನ ಬೆಳಕು

By No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ,
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ನನ್ನ ಮುದ್ದಿನ ಸೊಸೆ,
ಬಾಲ್ಯದಲ್ಲಿ ಅದು ಬೇಕು ಇದು ಬೇಕೆಂದು ನೀ ಹಠ ಹಿಡಿದಾಗ ನಿನ್ನ ಕಾಡಿಗೆ ಕಂಗಳಲ್ಲಿ ಕಣ್ಣೀರನ್ನು ನೋಡಲು ಆಗುತ್ತಿರಲಿಲ್ಲ. ತಂಟೆ ಮಾಡುವ ತುಂಟಿಯ ಹಠವನ್ನು ಪೂರೈಸುವುದರಲ್ಲಿ ಅದೇನೋ ಸಂತಸ. ನಿನಗೆ ಆಕೆಯ ಮೇಲೆ ಅಷ್ಟು ಪ್ರೀತಿ ಮದುವೆ ಆಗ್ತಿಯಾ ಅವಳನ್ನ ಎಂದು ಮನೆಯಲ್ಲಿ ಹಿರಿಯರೆಲ್ಲ ತಮಾಷೆ ಮಾಡುತ್ತಿದ್ದರು. ಆಗ ಮದುವೆ ಅಂದರೆ ಏನು ಗೊತ್ತಿರದ ನಾನು ಹೂಂ ಎನ್ನುತ್ತಿದ್ದೆ. ಅವರೆಲ್ಲ ಗೊಳ್ಳೆಂದು ನಗುತ್ತಿದ್ದರು. ಅಂದು ಅಕ್ಕನ ಮಗಳಾಗಿ ನನ್ನ ಕಣ್ಮುಂದೆ ಓಡಾಡುವಾಗ ನಿನ್ನ ನೋಡುವುದೇ ಒಂದು ಆನಂದ. ನನ್ನ ಹೆಗಲ ಮೇಲೆ ಕುಳಿತಿದ್ದು ಇಬ್ಬರೂ ಕೈ ಕೈ ಹಿಡಿದು ಆಟವಾಡಿದ್ದು ಮನದಲ್ಲಿ ಇನ್ನೂ ಅಚ್ಚೊತ್ತಿದಂತಿದೆ.
ಮನೆಯಂಗಳದಲ್ಲಿ ಬಿರಿದ ಮಲ್ಲಿಗೆಯಂತಿದ್ದ ನಿನ್ನ ನಗು ಕಂಡಾಗಲೆಲ್ಲ ನಿನ್ನ ಹೆಜ್ಜೆಗಳನ್ನೇ ಹಿಂಬಾಲಿಸುತ್ತಿದ್ದೆ. ಚಿಕ್ಕಂದಿನಿಂದಲೂ ಕಷ್ಟ ಸುಖಗಳನ್ನು ಹಂಚಿಕೊಂಡು ಬೆಳೆದ ಗೆಳೆತನ ನಮ್ಮದು. ಆ ಎಲ್ಲ ಸವಿನೆನಪುಗಳು ನೀಡಿದ ಆನಂದವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಆ ಪುಟ್ಟ ಪುಟಾಣಿ ಇಂದು ಬೆಳೆದು ನಿಂತಿದ್ದಾಳೆ. ಮೈಕೈ ತುಂಬಿಕೊಂಡು ಕಣ್ಮನ ಸೆಳೆಯುತ್ತಿದ್ದಾಳೆ. ಹರೆಯದ ರೀತಿಯ ಆಸೆಗಳನ್ನು ಮನದಲ್ಲಿ ತುಂಬುತ್ತಿದ್ದಾಳೆ. ನನ್ನ ಬದುಕನ್ನೇ ಮುನ್ನಡೆಸುವಂತಾಗಿದ್ದಾಳೆ ಎಂದರೆ ನಂಬಲಾಗುತ್ತಿಲ್ಲ. ಅದರಲ್ಲೂ ಬಾಳಸಂಗಾತಿಯ ಸ್ಥಾನವನ್ನು ತುಂಬುತ್ತಿದ್ದಾಳೆ ಎಂಬ ಯೋಚನೆಯೇ ಅತ್ಯದ್ಭುತ ಎನಿಸುತ್ತಿದೆ. ಮನೆಯಲ್ಲಿ ನನ್ನ ನಿನ್ನ ಮದುವೆ ಸುದ್ದಿ ಮಾತನಾಡಿದಾಗ ನಿನ್ನೆಡೆ ನೋಡಿದೆ ನಿನ್ನ ಮುಖವರಳಿತು. ಕಣ್ಣು ಮಿನುಗಿದವು. ಆ ಕ್ಷಣ ಹೃದಯ ನಿನ್ನ ಹೆಸರನ್ನು ಸಾವಿರ ಬಾರಿಯಾದರೂ ಜಪಿಸಿತು.


ದೀಪಾವಳಿ ಹಬ್ಬದಲ್ಲಿ ನಾನೂ ಸೀರೆ ಉಡುವೆ ಎಂದು ಹಠ ಹಿಡಿದು ಜರತಾರಿ ಸೀರೆ ಉಟ್ಟಿದ್ದೆ. ಚಿಕ್ಕ ಜಡೆಗೆ ಉದ್ದ ಮಲ್ಲಿಗೆ ಮಾಲೆ, ಪುಟ್ಟ ಕೈಯಲ್ಲಿ ರಂಗುರಂಗಿನ ಗಾಜಿನ ಬಳೆಗಳು, ಓಡುವಲ್ಲೆಲ್ಲ ಕಾಲ್ಗೆಜ್ಜೆಯ ಸದ್ದು, ಪುಟ್ಟ ಮುಖದಲ್ಲಿ ದೊಡ್ಡ ನಗು ಹೊತ್ತು ಓಡಾಡುತ್ತಿದ್ದೆ. ಮುದ್ದು ಮುದ್ದಾಗಿ ಮಾತನಾಡುತ್ತಿದ್ದೆ. ಅದರಲ್ಲಿ ನೀನು ಥೇಟ್ ಪುಟ್ಟಗೌರಿಯಂತೆ ಕಾಣುತ್ತಿದ್ದೆ. ಅದೇ ಪುಟ್ಟ ಪೋರಿಗೆ ಹದಿನೆಂಟು ತುಂಬಿದಾಗ ನಾ ಎದುರಾದರೆ ಕೆನ್ನೆ ಮೇಲೆ ಮೂಡುವ ಆ ಕೆಂಪು ಲಜ್ಜೆಯನ್ನು ಕಂಡು ಬೆರಗಾಗಿದ್ದೆ. ಎಡಕೆನ್ನೆಯ ಮೇಲಿದ್ದ ಗುಳಿ ನನ್ನನ್ನು ಇನ್ನಿಲ್ಲದಂತೆ ಸೆಳೆಯುತ್ತಿತ್ತು. ಕಾಲೇಜಿಗೆ ಹೊರಡುವಾಗ ನಿಲುವುಗನ್ನಡಿಯಲ್ಲಿ ನಿನ್ನ ರೂಪ ನೀ ನೋಡಿಕೊಳ್ಳುತ್ತಿದ್ದುದನ್ನು ಕಂಡಾಗ ಅರೆಕ್ಷಣ ಪುಳಕಗೊಂಡೆ.
ಹರೆಯದ ಕನಸಿನ ಸಿರಿಯಲಿ ನಾ ನೀ ಎಂದು ಅನೇಕ ಹುಡುಗಿಯರು ಕಣ್ಮುಂದೆ ಬಂದರೂ ಯಾರನ್ನೂ ಹದ್ದು ಮೀರಿ ಬರಲು ಬಿಡುತ್ತಿರಲಿಲ್ಲ. ನಿನ್ನ ನೆನೆದರೆ ಮಾತ್ರ ಕಲ್ಲೆದೆ ಮೃದುವಾಗುವುದನ್ನು ಮರೆಯುತ್ತಿರಲಿಲ್ಲ. ಚಿಗುರುಮೀಸೆ ಮೂಡುತ್ತಿದ್ದ ಹೊಸತರದಲ್ಲಿ ರಾತ್ರಿ ಮಂಚದ ಮೇಲೆ ಮೈ ಚೆಲ್ಲಿದಾಗ ನಿನ್ನ ನೆನಪು ತಂಪಾದ ಗಾಳಿಯೊಡನೆ ಪಯಣಿಸಿ ಹಾಯೆನಿಸುತ್ತಿತ್ತು. ಆಹ್ಲಾದಕರ ವಾತಾವರಣದಲ್ಲಿ ಬೆಳದಿಂಗಳಂತಿರುವ ನಿನ್ನ ನಗುಮೊಗವ ನೆನೆದು ಮೈ ರೋಮಾಂಚನವಾಗುತ್ತಿತ್ತು ಮೆಲ್ಲಗೆ ಶೃಂಗಾರ ಭಾವ ಮಿನುಗುತ್ತಿತ್ತು. ನಿದ್ರಾ ರಾಣಿಯನ್ನು ಬಳಿ ಬರಲು ಬಿಡದೆ ಕನಸಿನ ರಾಣಿಯ ಕನಸಿನಲ್ಲಿ ಜಾರುತ್ತಿದ್ದೆ. ಆ ಸೂರ್ಯ ಚಂದ್ರ ಸಾಕ್ಷಿಯಾಗಿ ನಾ ನಿನ್ನ ಕೈ ಬಿಡಲಾರೆ ಎಂದು ಗುನುಗುತ್ತಿದ್ದೆ.
ಅದಾವ ಶಿಲ್ಪಿ ಕೆತ್ತಿದ ಶಿಲಾಬಾಲಿಕೆಯೋ ನೀನು ನಾ ಕಾಣೆ. ದೇವರಿಗೆ ಆರ್ಡರ್ ಕೊಟ್ಟು ಮಾಡಿಸಿದಂತಿದ್ದ ನಿನ್ನ ಅಂದ, ಬಳಕುವ ನಡುವನು ನೆನದಾಗಲೆಲ್ಲ ಮೈ ಕೊರೆಯುವ ಚಳಿಯಲ್ಲೂ ಮೈ ಬಿಸಿಯಾಗುತ್ತಿತ್ತು.. ನಿನ್ನಂದ ಹೊಗಳಲು ಮಹಾಕವಿಯೂ ಪದಗಳಿಗಾಗಿ ಪರದಾಡುವನು ಎನಿಸುತ್ತಿತ್ತು.
ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ತರಲು ಬೈಕಿನಲ್ಲಿ ಪೇಟೆಗೆ ಹೋಗುವಾಗ ಹಳ್ಳಿಯ ಹಚ್ಚಹಸಿರಾದ ದಾರಿಯಲ್ಲಿ ಐಲವ್ಯೂ ಎಂದು ಕೊಂಚ ಸಂಕೋಚದಲ್ಲಿ ನೀ ನುಡಿದಿದ್ದೆ. ನಾನು ಒಮ್ಮೆಲೇ ಬೆವೆತು ಹೋದೆ. ತಕ್ಷಣ ಗಾಡಿ ನಿಲ್ಲಿಸಿದೆ. ನಿಂತಲ್ಲೇ ಶಿಲೆಯಾದೆ. ಆ ಕ್ಷಣ ಆಕಾಶವೇ ಬಾಗಿ ನನ್ನಡೆ ಕೈ ಚಾಚಿದಂತೆ ಅನಿಸಿತ್ತು. ಹೂವಿನ ತೂಗುಯ್ಯಾಲೆಯಲ್ಲಿ ಕೂರಿಸಿ ನಿನ್ನ ತೂಗುವ ದಿನಗಳು, ಮೃದುವಾದ ಮೈಗೆಲ್ಲ ಮುತ್ತುಗಳ ಸುರಿಮಳೆ ಸುರಿಸುವ ರಾತ್ರಿಗಳು ದೂರ ಉಳಿದಿಲ್ಲ ಎಂದೆ. ಆಗ ನಿನ್ನ ಸವಿ ಲಜ್ಜೆ ಸೊಗಸಾಗಿತ್ತು.
ಕಪ್ಪಾದ ಕೇಶರಾಶಿಯ ಮುಂಗುರುಳುಗಳು ಗಾಳಿಗೆ ನಿನ್ನ ಕೆನ್ನೆ ಮುದ್ದಿಸುವುದನ್ನು ನೋಡಿ ತಡೆಯದೇ ನಾನೂ ಮುತ್ತಿಕ್ಕಬೇಕೆನ್ನುವಷ್ಟರಲ್ಲಿ ನೀನೇ ಮೆಲ್ಲನೆ ಕೈ ಹಿಡಿದೆ. ಕ್ಷಣಾರ್ಧದಲ್ಲಿ ತೋಳುಗಳು ನಿನ್ನನ್ನು ಬಳಸಿದ್ದವು. ಬಿಗಿಯಾಗಿ ಆಲಂಗಿಸಿ ಹಣೆಗೆ ಕೆನ್ನೆಗೆ ಬಿಡದೇ ಮುತ್ತನ್ನಿತ್ತೆ. ನೀನೂ ಪ್ರತಿಯಾಗಿ ಮುತ್ತನಿತ್ತೆ. ಬೇಸಿಗೆಯ ಬಿರು ಬಿಸಿಲಿಗೆ ತತ್ತರಿಸಿದ ಇಳೆಗೆ ಮೊದಲ ಮಳೆ ಹನಿ ಬಿದ್ದಾಗ ಸಿಗುವ ಆನಂದದಂತೆ ನಿನ್ನ ಮೊದಲ ಮುತ್ತಿನ ರೋಮಾಂಚನ. ಮೈ ಮನ ತುಂಬಿಕೊಳ್ಳುತ್ತಿತ್ತು. ಆ ಕ್ಷಣದಲ್ಲಿ ಇಬ್ಬರೂ ಮೈ ಮರೆತಿದ್ದೆವು. ತಟ್ಟನೇ ಗಾಬರಿಗೊಂಡೆ, ಲಜ್ಜೆಯಿಂದ ಕಣ್ಣುಗಳನ್ನು ಕೆಳಗೆ ಮಾಡಿ, ’ಹೀಗೆ ಕದ್ದು ಮುಚ್ಚಿ ಪ್ರೀತಿ ಮಾಡುವುದು ಬೇಡ ಮಾವ. ಇನ್ನೇನ್ನಿದ್ದರೂ ಹಸೆಮಣೆ ಏರಿದ ಮೇಲೆಯೇ ಪ್ರೀತಿ.’ ಎನ್ನುವಾಗ ನಿನ್ನ ಕೆನ್ನೆ ಕೆಂಪಾಗಿತ್ತು.


ಆ ಮುತ್ತಿನಾಟ ಬರಿ ಪ್ರೀತಿಯಲ್ಲ. ನನ್ನುಸಿರಿನೊಂದಿಗೆ ನಾನಾಡುವ ಪರಿಯಾಗಿತ್ತು. ಹೃದಯದ ಪುಟ್ಟ ಗೂಡಿನಲ್ಲಿ ನನ್ನೆದೆಗೆ ತಲೆ ಒರಗಿಸಿ ಜಗದ ಗೊಡವೆ ಇಲ್ಲದೇ ನಿರಾಳವಾಗುವ ಸವಿಸಮಯವಾಗಿತ್ತು. ಮನಸ್ಸನ್ನು ಕದ್ದ ಕನ್ಯೆಯಲ್ಲಿ ನನಗಾಗಿ ಇಷ್ಟೊಂದು ಒಲವು ತುಂಬಿದೆ ಎಂದು ಕೆಂದುಟಿಯ ಸವಿಜೇನನ್ನು ಹಂಚುತ್ತ, ನಿನ್ನ ನೆರಳಲ್ಲಿ ಬದುಕುವಾಸೆ ಎಂದು ಹೇಳಿಯಾಗಿತ್ತು.
ಇಬ್ಬರಿಗೂ ಅದು ಮೊದಲ ಮುತ್ತಿನ ಅನುಭವಾದ್ದರಿಂದ ನಾಚಿಕೆ ಮೂಡಿತ್ತು. ನಿನ್ನ ಕೈ ಹಿಡಿದು ಸಪ್ತಪದಿ ತುಳಿದು ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ನೆರಳಾಗಿ ನಿಲ್ಲುವ ಹೊಂಗನಸೊAದು ಮೊದಲೇ ಇತ್ತು. ಮುತ್ತಿನ ಮತ್ತಿನ ನಂತರ ಕನಸಿನ ಮಲ್ಲಿಗೆಯ ಮೊಗ್ಗಿನ ಕಂಪು ಹೆಚ್ಚತೊಡಗಿತ್ತು. ಪೂರ್ಣ ಚಂದಿರನ ರಾತ್ರಿಯಲ್ಲಿ ನಿನ್ನ ನಗುಮೊಗವ ಕಲ್ಪಿಸಿಕೊಂಡು ನಿನ್ನಂದದ ಮುಖವ ಕಂಡು ಚಂದಿರನೇ ನಾಚುವನು ಎಂದೆಲ್ಲ ಕವಿತೆ ಗೀಚುವುದನ್ನು ಕಲಿತಿದ್ದೇನೆ. ನಿನ್ನ ಪ್ರೀತಿಯ ಹುಚ್ಚಿನಲ್ಲಿ ಪ್ರೇಮಕವಿ ಆಗುತ್ತಿದ್ದೇನೆ. ನಿನಗೆಂದೇ ಬರೆಯಬೇಕೆಂದ ಕೋಟಿ ಕೋಟಿ ಸಾಲುಗಳು ಇನ್ನೂ ಮನದಲ್ಲಿ ಹಾಗೆ ಉಳಿದಿವೆ ಹೃದಯದಂಗಳಲ್ಲಿ ಕನಸಿನ ಚಿತ್ತಾರ ಬರೆದವಳು ಇನ್ನೇನು ಕೆಲ ತಿಂಗಳಲ್ಲಿ ಮನೆಯಂಗಳದಲ್ಲಿ ರಂಗೋಲಿ ಬರೆಯಲಿದ್ದಾಳೆ. ನನ್ನೊಲವು ನನ್ನ ಬದುಕಾಗಿ ಬರುತ್ತಿದೆ. ಜೀವನದ ಓಟ ನಿನ್ನ ಕೈ ಹಿಡಿದು ಸಾಗಲಿದೆ ಎಂಬ ಭಾವನೆಗಳೇ ನನ್ನೆದೆಯ ಹೂಬನದ ಸುಗಂಧವನ್ನು ನೂರ್ಮಡಿಗೊಳಿಸುತ್ತಿವೆ.
ಮುದ್ದು ಸೊಸೆ ಅರ್ಧಾಂಗಿಯಾಗುವ ಸಮಯ ಸನ್ನಿಹಿತವಾಗುತ್ತಿದೆ. ಎನ್ನ ಮನದ ಅರಸಿ. ಜೊತೆ ಮಧುರ ಮಿಲನಕೆ ದಿನ ಗಣನೆ ಶುರುವಾಗಿದೆ. ಹೂವಿನಿಂದ ಅಲಂಕರಿಸಿದ ಕೋಣೆಯಲ್ಲಿ ಗಂಧದ ಕಡ್ಡಿಯ ಸುವಾಸನೆ ಹಾಲಿನ ಲೋಟವನ್ನು ಹಿಡಿದು, ತಲೆ ತಗ್ಗಿಸಿ ಲಜ್ಜೆಯಿಂದ ಬರುವಾಗ ರೇಷ್ಮೆ ಸೀರೆಯ ಮತ್ತು ಒಡವೆಗಳ ಸದ್ದು ಕೇಳುತ್ತ ಕೋಣೆಯ ದೀಪ ಮಸುಕಾಗಿಸಿ ಹತ್ತಿರಕ್ಕೆ ಎಳೆದುಕೊಂಡು ಮುಂಗುರಳನ್ನು ಕಿವಿಯ ಹಿಂದೆ ಸರಿಸುತ್ತ ಗಲ್ಲವನ್ನು ನವಿರಾಗಿ ಸವರುತ್ತ ಮೃದುವಾಗಿ ಮುತ್ತಿಡುತ್ತ ‘ಈ ಕೈಗಳು ನಿನ್ನನ್ನು ಎಂದಿಗೂ ಬಿಡುವುದಿಲ್ಲ.’ ಎಂದು ಹೇಳುವ ಕ್ಷಣಕ್ಕೆ ಕಾಯುತ್ತಿದ್ದೇನೆ. ಸತಾಯಿಸದೆ ಬೇಗ ಬಂದು ಬಿಡು
ನಿನ್ನ ಮುದ್ದಿನ ಮಾವ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸದ್ದಿಲ್ಲದೆ ಜಲಯೋಗದ ಸಾಧನೆ ಗೈದ ಪತ್ರಕರ್ತ ಸುನೀಲ ಗೋಡೆನ್ನವರ

ಯೋಗದಿಂದ ರೋಗ ದೂರ

ಅಪ್ಪನೆಂದರೆ ಆಲದ ಮರ

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 20, 2026

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸದ್ದಿಲ್ಲದೆ ಜಲಯೋಗದ ಸಾಧನೆ ಗೈದ ಪತ್ರಕರ್ತ ಸುನೀಲ ಗೋಡೆನ್ನವರ
    In (ರಾಜ್ಯ ) ಜಿಲ್ಲೆ
  • ಯೋಗದಿಂದ ರೋಗ ದೂರ
    In ವಿಶೇಷ ಲೇಖನ
  • ನೆನಪಿನ ಗೂಡಲಿ ಒಲವಿನ ಬೆಳಕು
    In ವಿಶೇಷ ಲೇಖನ
  • ಅಪ್ಪನೆಂದರೆ ಆಲದ ಮರ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 20, 2026
    In ದಿನಪತ್ರಿಕೆ
  • ಆಲಮಟ್ಟಿ ನೀರಿನ ಹಕ್ಕಿಗಾಗಿ ಹೋರಾಟ ತೀವ್ರ :ಸಂಸದರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಿಎಲ್ಡಿಇ ಆಸ್ಪತ್ರೆ: ಕಾಕ್ಲಿಯರ್ ಇಂಪ್ಲಾಂಟ್ ಸ್ವಿಚ್ ಆನ್ ಕಾರ್ಯಕ್ರಮ ಯಶಸ್ವಿ
    In (ರಾಜ್ಯ ) ಜಿಲ್ಲೆ
  • ಜೂ.೨೩-೨೪ಕ್ಕೆ ಕಿಡ್ನಿ ಸಂಬಂದಿತ ಸಮಸ್ಯೆಗಳಿಗೆಉಚಿತ ಚಿಕಿತ್ಸಾ ಶಿಬಿರ
    In (ರಾಜ್ಯ ) ಜಿಲ್ಲೆ
  • ವಿಶ್ವ ಯುವ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಶಿಫಾ ಜಮಾದಾರ
    In (ರಾಜ್ಯ ) ಜಿಲ್ಲೆ
  • ​ಮೈಸೂರು ವಿವಿ ಬಿ.ವಿ.ಎ ಪದವಿ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.