Author: editor.udayarashmi@gmail.com

ಜಿಲ್ಲೆಯ ಪ್ರಥಮ ಪ್ರೊಬೊನೊ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠರಿಗೆ ಸನ್ಮಾನ ವಿಜಯಪುರ: ಮಹಿಳಿಯರ ಕಾರ್ಮಿಕರ, ಸಮಾಜದ ಕಟ್ಟ ಕಡೆಯ ಪ್ರಜೆಗಳ ಹಕ್ಕುಗಳು ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ಯಾರಿಗೂ ಕನಸು ಕೂಡಾ ಬೀಳದ ೧೨ ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲರ ಹಕ್ಕುಗಳು ಬಗ್ಗೆ ಮಾತಾಡಿದ್ದರು. ಶರಣರ ವಚನಗಳು ಹಲವು ಸಂವಿಧಾನಗಳ ಪ್ರತೀಕವಾಗಿದೆ. ಅದಕ್ಕಾಗಿ ನಾವು ವಚನ ಸಾಹಿತ್ಯವನ್ನು ತಗೆದುಕೊಂಡು ಲೋಕದ ನ್ಯಾಯಾಂಗ ವ್ಯವಸ್ಥೆಗೆ ಹೋಗಬೇಕು ಎಂದು ಹಿರಿಯ ಸಾಹಿತಿ ಶಂಕರ ಬೈಚವಾಳ ಹೇಳಿದರುಅವರು ಕನ್ನಡ ಪ್ರಸ್ತಕ ಪರಿಷತ್ತು ವಿಜಯಪುರ ಹಾಗೂ ಕಾನೂನು ಕ್ರಿಯಾತ್ಮಕ ವೇದಿಕೆ ವಿಜಯಪುರ ಅಡಿಯಲ್ಲಿ ನಡೆದ ’ನ್ಯಾಯ ಶಾಸ್ತ್ರ ಹಾಗೂ ವಚನಗಳು’ ವಿಷಯ ಕುರಿತ ವಿಚಾರ ಸಂಕಿರಣ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ನೂತನ ಆಡಳಿತ ಮಂಡಳಿಯ ಸದಸ್ಯ ಮತ್ತು ಜಿಲ್ಲೆಯ ಪ್ರಥಮ ಪ್ರೊಬೊನೊ [ಜನಸ್ನೇಹಿ] ವಕೀಲರಾಗಿ ಕಾನೂನು ಸೇವೆ ಪ್ರಾಧಿಕಾರದಿಂದ ನೇಮಕಗೊಡ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು,ಸನ್ಮಾನ…

Read More

ಆಲಮೇಲ: ವಿಜಯಪುರ ಜಿಲ್ಲೆಯ ಕಡಣಿ ಗ್ರಾಮದ ಬೆರಗು ಪ್ರಕಾಶನವು ರಾಜ್ಯಮಟ್ಟದ ಪ್ರೊ. ಎಚ್.ಟಿ.ಪೋತೆ ಕಾವ್ಯ, ಕಥಾ ಪ್ರಶಸ್ತಿ ನೀಡಲು ಹಸ್ತಪ್ರತಿಗಳನ್ನು ಆವ್ಹಾನಿಸಿದೆ. ಪ್ರಶಸ್ತಿ ರೂ ೧೦ ಸಾವಿರ ನಗದು, ಪ್ರಶಸ್ತಿ ಫಲಕ ಸ್ಮರಣಿಕೆ ಒಳಗೊಂಡಿದೆ. ಆಯ್ಕೆಯಾದ ಹಸ್ತಪ್ರತಿಯನ್ನು ಪ್ರಕಾಶನದಿಂದ ಪ್ರಕಟಿಸಿ ಪ್ರಕಾಶನದ ೭ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಚಾಲಕಿ ವಿಜಯಲಕ್ಷ್ಮಿ ಕತ್ತಿ ತಿಳಿಸಿದ್ದಾರೆ.ಕನಿಷ್ಠ ೧೦ ಕತೆಗಳನ್ನೊಳಗೊಂಡ ಅಥವಾ ೪೦ ಕವಿತೆಯನ್ನೊಳಗೊಂಡ ಹಸ್ತಪ್ರತಿಯು ನುಡಿ ಅಥವಾ ಬರಹದಲ್ಲಿ ಟೈಪ್ ಮಾಡಿದ ತಮ್ಮ ಅಪ್ರಕಟಿತ ಕೃತಿಯ ಎರಡು ಪ್ರತಿಗಳನ್ನು ಇದೇ ಅಗಷ್ಟ.೩೦ ರೊಳಗೆ ತಲುಪುವಂತೆ ಕಳಿಸಲು ಕೋರಲಾಗಿದೆ.ಪ್ರಕಟಿತ ಕೃತಿಗಳ ಆವ್ಹಾನ:ಕಡಣಿ ಬೆರಗು ಪ್ರಕಾಶನವು ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ಅವರ ಹೆಸರಿನಲ್ಲಿ ಪ್ರತಿವರ್ಷ ನೀಡುವ ಬೆರಗು ಪ್ರಶಸ್ತಿ-೨೦೨೧ ನೀಡಲು ೨೦೨೩ನೇ ಸಾಲಿನಲ್ಲಿ ಪ್ರಕಟವಾದ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಆವ್ಹಾನಿಸಿದೆ. ಪ್ರಶಸ್ತಿಯು ೫ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಆಸಕ್ತ ಲೇಖಕರು ತಮ್ಮ ಕೃತಿಯ ಎರಡು…

Read More

ಕಾಯಕಯೋಗಿ ಹಡಪದ ಅಪ್ಪಣ ಜಯಂತಿಯಲ್ಲಿ ಕಾಂಗ್ರೆಸ್ ಮುಖಂಡ ರಮೇಶ ಬಂಟನೂರ ಅಭಿಮತ ಆಲಮೇಲ: ಕಲ್ಯಾಣ ಕ್ರಾಂತಿಯ ಮೂಲಕ ಅನುಭವ ಮಂಟಪವನ್ನು ಸ್ಥಾಪಿಸಿದವರಲ್ಲಿ ಅನುಭವ ಮಂಟಪದ ಕಾರ್ಯದರ್ಶಿಗಳಾದವರು ಹಡಪದ ಅಪ್ಟಣವರು. ಧರ್ಮ ಕ್ರಾಂತಿಯಲ್ಲಿ ಸಾಮಾಜಿಕ ಕ್ರಾಂತಿಗಳು ನಡೆದಾಗ ಬಸವಣ್ಣವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಅವರ ಕಾರ್ಯದರ್ಶಿಗಳಾಗಿ ಸಾಗಿದವರು ಹಡಪದ ಅಪ್ಪಣ್ಣನವರು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ರಮೇಶ ಬಂಟನೂರ ಹೇಳಿದರುಪಟ್ಟಣದ ತಾಲೂಕಾ ದಂಡಾಧಿಕಾರಿಗಳ ಕಾರ್ಯಲಯದಲ್ಲಿ ಹಡಪದ ಅಪ್ಪಣ್ಣನವರ ೮೯೦ನೇ ಜಯಂತಿ ಆಚರಣೆ ಮಾಡಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತಾಲೂಕಾ ದಂಡಾಧಿಕಾರಿ ಸುರೇಶ ಚವಾಲರ್ ಮಾತನಾಡಿ, ಸರಕಾರದ ಆದೇಶದ ಪ್ರಕಾರ ಇಂತಹ ಮಾಹಾನಿಯರ ಜಯಂತಿಯನ್ನು ನಾವು ಆಚರಣೆ ಮಾಡುತ್ತಾ ಇರುತ್ತವೆ. ಈ ಜಯಂತಿ ಆಚರಣೆಗೆ ಸೀಮಿತವಾಗದೆ ಇಂತಹ ಮಹನೀಯರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ನಾವು ಅವಲೋಕನ ಮಾಡಿಕೊಳ್ಳಬೇಕಾಗಿದೆ ಮತ್ತು ನಾವು ಬಡವರಾಗಿದ್ದರೆ ಒಂದು ಹೊತ್ತಿನ ಉಟಬಿಟ್ಟು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿದೆ. ನಮ್ಮ ಮಕ್ಕಳಿಗೆ ದುಷ್ಟ ಚಟಗಳ ಕಡೆಗೆ ಸಾಗದಂತೆ ನೋಡಿಕೊಳ್ಳಬೇಕು…

Read More

ಇಂಡಿ: ಮಹಿಳೆ ಇಲ್ಲದ ಸಮಾಜವನ್ನು ಕಲ್ಪಿಸಲು ಸಾಧ್ಯವಿಲ್ಲ, ಪ್ರಸ್ತುತ ದಿನಗಳಲ್ಲೂ ನಿರಂತರ ಶೋಷಣೆಗಳು ನಡೆಯುತ್ತಿರುವುದು ಆಘಾತಕಾರಿ ವಿಷಯವಾಗಿದೆ ಎಂದು ಜಿ.ಆರ್.ಗಾಂಧಿ ಕಲಾ ಮಹಾವಿದ್ಯಾಲಯದ ಡಾ. ಸುರೇಂದ್ರ ಕುಮಸಿ ಅವರು ಹೇಳಿದರು.ಅವರು ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಸಮಾಜಶಾಸ್ತ್ರ ವಿಭಾಗವು ಹಮ್ಮಿಕೊಂಡಿದ್ದ ʼವಿಶೇಷ ಉಪನ್ಯಾಸ ʼ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಆರ್. ಎಚ್.ರಮೇಶ ಮಾತನಾಡಿ ʼ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಶಿಕ್ಷಣವನ್ನು ಮಹಿಳೆಗೆ ಎಲ್ಲ ಹಂತಗಳಲ್ಲೂ ದೊರೆಯುವಂತಾಗಬೇಕು ಎಂದರು.ಐಕ್ಯೂಎಸಿ ಸಂಯೋಜಕರಾದ ಡಾ.ಶೀರುನುಸುಲ್ತಾನ ಇನಾಂದಾರ, ಪ್ರೊ. ಕಿರಣ ರೇವಣಕರ, ಸಮಾಜಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಸುನಂದ ಎಚ್. ಪೂಜಾರಿ‌, ಡಾ. ಸಚಿನ ಹುಗ್ಗಿ, ಪ್ರೊ. ಆರ್.ಬಿ.ಮುದ್ದೇಬಿಹಾಳ ಮೊದಲಾದವರು ವೇದಿಕೆಯಲ್ಲಿದ್ದರು.ಕು.ಮಂಜುನಾಥ ಶಿವಣಗಿ ಸ್ವಾಗತಿಸಿದರು. ಕು.ಸದಾಶಿವ ಕಂಬಾರ ನಿರೂಪಿಸಿದರು. ಕು.ಶಿವಾನಂದ ಬನಸೋಡೆ ವಂದಿಸಿದರು.

Read More

ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ವಿವಿದ ಸಂಘಸಂಸ್ಥೆಗಳ ಸಹಯೋಗದಲ್ಲಿ ಕಲಕೇರಿ ಬ್ಯಾಂಕ್ ಆಫ್ ಬರೊಡಾ ಶಾಖೆಯ ವತಿಯಿಂದ ೧೧೭ ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಾಲೇಜಿನ ಆವರಣದಲ್ಲಿ ೧೦ ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.ಈ ವೇಳೆ ಬ್ರ್ಯಾಂಚ್ ಮ್ಯಾನೇಜರ್ ಶ್ರೀನಿವಾಸಲು ಪಿ.ಅಸಿಸ್ಟೆಂಟ್ ಮ್ಯಾನೆಜರ್ ಭವಾನಿ ಪ್ರಸಾದ, ಅಂಬಣ್ಣ ಪವಾರ, ಪ್ರಾಚಾರ್ಯ ಸಿ ಎಸ್ ಹಿರೇಮಠ, ಜಗದೀಶ ಕಾದಳ್ಳಿ, ಎಸ್ ಎಸ್ ಕಲಶೇಟ್ಟಿ, ಡಾ.ಜಿ ಜಿ ಮೆಡೆದಾರ್, ಎಸ್ ಎಸ್ ಧುರ್ಗಿ, ಆರ್ ಎಂ ಗುಮಶೇಟ್ಟಿ,ಬಸವರಾಜ್ ಕುಂಬಾರ, ಮಹಾಂತೇಶ ಮಾಗಣಗೇರಿ ಸೇರಿದಂತೆ ಕಲಕೇರಿ ಬ್ಯಾಂಕ್ ಬರೋಡಾ ಶಾಖೆಯ ಸಿಬ್ಬಂದ್ದಿ ಇತರರು ಇದ್ದರು.

Read More

ವಿಜಯಪುರ: ಗುರು ಜೀವನದಲ್ಲಿ ಬೆಳಕು ನೀಡುತ್ತಾನೆ. ಬೆಳಕು ಜ್ಞಾನದ ಸಂಕೇತ. ನಮ್ಮನ್ನು ಕತ್ತಲೆಯಿಂದ ಜ್ಞಾನದ ಕಡೆಗೆ ಕರೆದೊಯ್ಯುತ್ತಾರೋ ಅವರೇ ಗುರುಗಳು ಎಂದು ಕಾಖಂಡಕಿಯ ಗುರುದೇವಾಶ್ರಮದ ಶ್ರೀ ಶಿವಯೋಗೀಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ.ಶನಿವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ನಡೆದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ನಮ್ಮದು ಮಾತೃದೇವೋಭವ, ಪಿತೃದೇವೋಭವ, ಗುರುದೇವೋಭವ ಎಂದು ಆರಾಧಿಸುವ ಘನತೆವೆತ್ತ ನಾಡು. ನಮ್ಮ ಬಾಳಿನಲ್ಲಿ ಈ ಮೂವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ನಾವು ಜೀವನ ಪೂರ್ತಿ ಅವರಿಗೆ ಋಣಿಯಾಗಿರಬೇಕು ಎಂದು ಅವರು ಹೇಳಿದರು.ಶಾಲೆಯ ಪ್ರಾಚಾರ್ಯ ಡಾ. ಶೈಜು ನಾಯರ ಪ್ರಾಸ್ತಾವಿಕ ಮಾತನಾಡಿ, ಶಾಲೆಯಲ್ಲಿ ಮಕ್ಕಳ ನೈತಿಕ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಮಾಡುತ್ತಿರುವ ಶಾಲಾ ಕಾರ್ಯ ಚಟುವಟಿಕೆಗಳ ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸಿದರು.ಏಳನೆಯ ತರಗತಿಯ ವಿದ್ಯಾರ್ಥಿಗಳು ಹಾಗೂ ಕನ್ನಡ ಶಿಕ್ಷರಾದ ಭೈರವ ಭಂಡಾರಿಯವ ಬಸವಣ್ಣನವರ ವಚನಗಳನ್ನು ಹಾಡಿದರು. ಶಾಲಾ ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಅವರು ವ್ಯಾಸ ಮಹರ್ಷಿಗಳ ಪೂಜಾ ಕಾರ್ಯವನ್ನು ನೆರವೇರಿಸಿದರು.…

Read More

ವೇದಾಂತಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಸ್ಮರಣೋತ್ಸವ & ಗುರುಪೂರ್ಣಿಮೆ ಮಹೋತ್ಸವ – ದೇವೇಂದ್ರ ಹೆಳವರವಿಜಯಪುರ: ನಗರದ ಜ್ಞಾನಯೋಗಾಶ್ರಮದಲ್ಲಿ ರವಿವಾರ ಹಮ್ಮಿಕೊಂಡಿದ್ದ ವೇದಾಂತಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಸ್ಮರಣೋತ್ಸವ ಹಾಗೂ ಗುರುಪೂರ್ಣಿಮೆ ಮಹೋತ್ಸವಕ್ಕೆ ಭಕ್ತರ ಮಹಾಪೂರವೇ ಹರಿದು ಬಂದಿತ್ತು.ಜ್ಞಾನಯೋಗಾಶ್ರಮದಲ್ಲಿ ವರ್ಷದಲ್ಲಿ ಎರಡು ಬಾರಿ ದೊಡ್ಜ ಜಾತ್ರೆಯಂತೆ ಲಕ್ಷಾಂತರ ಭಕ್ತರು ಸೇರುವ ದೊಡ್ಡ ಪ್ರಮಾಣದ ಎರಡು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.ಒಂದು ಗುರುನಮನ ಮಹೋತ್ಸವ. ಇನ್ನೊಂದು ಗುರುಪೂರ್ಣಿಮೆ ಮಹೋತ್ಸವ.ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ದೇಹತ್ಯಾಗ ಮಾಡಿ ಬಯಲಲ್ಲಿ ಬಯಲಾಗಿ ಒಂದು ವರ್ಷವಾದ ಪ್ರಯುಕ್ತ 2024 ರ ಜನೇವರಿ 1 ಮತ್ತು 2 ರಂದು ಗುರುನಮನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಶ್ರೀಗಳಿಗೆ ಭಕ್ತಿಯ ನಮನ ಸಲ್ಲಿಸಲಾಯಿತು. ಈ ಕಾರ್ಯಕ್ರಮ ಪ್ರತೀ ವರ್ಷ ಆಶ್ರಮದಲ್ಲಿ ಆಚರಿಸುವ ಗುರುಪೂರ್ಣಿಮೆ ಮಹೋತ್ಸವ ನೆನಪಿಸುವಂತೆ ದೊಡ್ಡ ಪ್ರಮಾಣದಲ್ಲಿಯೇ ನಡೆಯಿತು. ಅದೇ ಸಂದರ್ಭದಲ್ಲಿ ಈ ವರ್ಷದಿಂದ ಇನ್ನು ಮುಂದೆ ಆಶ್ರಮದಲ್ಲಿ ಜನೇವರಿಯಲ್ಲಿ ಗುರುನಮನ ಮಹೋತ್ಸವ, ಜುಲೈನಲ್ಲಿ ಗುರುಪೂರ್ಣಿಮೆ ಮಹೋತ್ಸವ ಕಾರ್ಯಕ್ರಮಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತವೆ…

Read More

ವಿಜಯಪುರ ಜಿಲ್ಲೆ ಕನ್ನಡಮತ್ತು ಸಂಸ್ಕೃತಿ ಇಲಾಖೆಯಿಂದ ಹಡಪದ ಅಪ್ಪಣ್ಣ ಜಯಂತಿ ವಿಜಯಪುರ: ನಗರದ ಶ್ರೀ.ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪಾರ ಜಿಲ್ಲಾಧಿಕಾರಿ, ಸೋಮಲಿಂಗ ಗೆಣ್ಣೂರ, ಕಲ್ಯಾಣದಲ್ಲಿ ನಾವು ಪ್ರತಿಯೊಬ್ಬರೂ ಬಂದು ಸೇರಿದ್ದು ದುಡಿದು ಉಣ್ಣಲು ಮತ್ತು ಮೌಢ್ಯವನ್ನು ಕಿತ್ತೊಗೆಯಲು ಒಂದ್ದಾಗಿದ್ದೇವೆ. ಈ ಮೂಲಕ ಸಮಸಮಾಜದ ಕಾರ್ಯ ನಮ್ಮದಾಗಬೇಕು. ಇವ ನಮ್ಮವ ಎನ್ನುವ ಬಾಂಧವ್ಯ ಬೆಳೆದಾಗ ಶರಣ ಸಂಕುಲ ವಿಸ್ತಾರವಾಗಿ ಬೆಳೆಯುತ್ತದೆ. ಆದ್ದರಿಂದ ಕಾಯಕ ದಾಸೋಹ ನಮ್ಮ ಮುಖ್ಯ ಗುರಿಯಾಗಬೇಕೆಂದು ಹೇಳಿದರು.ಬಸವಣ್ಣನವರ ಹಿಂದೆ ನಡೆದ ಶರಣರಲ್ಲಿ ಹಡಪದ ಅಪ್ಪಣ್ಣ ಕಲ್ಯಾಣದಿಂದ ಕೂಡಲಸಂಗಮದೇವ ಬಸವಣ್ಣನವರ ನೆರಳಿನಂತೆ ಇದ್ದು ತಮ್ಮ ಕಾಯಕದಲ್ಲಿ ನಿಷ್ಠೆತೋರಿ ಬಸವಣ್ಣನವರ ಆಪ್ತರಾಗಿದ್ದ ಅಪ್ಪನ್ನನವರ ಕಾಯಕನಿಷ್ಟೆಗೆ ಸಾಕ್ಷಿಯಾಗಿದೆ. ಅಂತಹ ಪ್ರಾಮಾಣಿಕತೆಯನ್ನು ಸಮಾಜ ಬಾಂಧವರು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ಅವಶ್ಯಕತೆ ಇದೆ ಎಂದರು.ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಭೀಮಾಶಂಕರ ಅವರು, ಹಡಪದ…

Read More

ವಿಜಯಪುರ: ಗುರುಪೂರ್ಣಿಮೆ ಅಂಗವಾಗಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ನಗರದ ಜ್ಞಾನಯೋಗಾಶ್ರಮದಲ್ಲಿ ಶನಿವಾರ ಮತ್ತು ರವಿವಾರ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.ಶನಿವಾರ ಸಸಿಗೆ ನೀರುಣಿಸುವ ಮೂಲಕ ಶಿಬಿರಕ್ಕೆ ಸದಲಗಾದ ಶ್ರದ್ಧಾನಂದ ಸ್ವಾಮಿಗಳು ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ಪ್ರತಿ ವರ್ಷ ಗುರುಪೂರ್ಣಿಮೆಯಂದು ಭಕ್ತರಿಗಾಗಿ ಬಿ.ಎಲ್.ಡಿ.ಇ ಆಸ್ಪತ್ರೆ ಆಯೋಜಿಸುತ್ತಿರುವ ಉಚಿತ ಆರೋಗ್ಯ ಶಿಬಿರ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನುಕೂಲ ಒದಗಿಸಿದೆ. ಗ್ರಾಮೀಣ ಭಾಗದಿಂದ ಬರುವ ಭಕ್ತಾದಿಗಳಿಗೂ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಿದೆ ಎಂದು ಶ್ಲಾಘಿಸಿದರು.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಆರೋಗ್ಯ ಸಂಪತ್ತು ಎಲ್ಲಕ್ಕಿಂತ ಮಿಗಿಲಾಗಿದೆ. ರೋಗ ಬಂದ ಮೇಲೆ ನರಳುವುದಕ್ಕಿಂತ, ನಿಯಮಿತ ಯೋಗಾಭ್ಯಾಸ ಮಾಡಿ ಆರೋಗ್ಯವಂತ ಜೀವನ ಶೈಲಿಯನ್ನು ರೂಢಿಸಿಕೊಂಡು ರೋಗ ಬರದಂತೆ ತಡೆಯುವುದು ಅಗತ್ಯವಾಗಿದೆ ಎಂದು ಕಿವಿಮಾತು ಹೇಳಿದರು.ಈ ಶಿಬಿರದ ಸಂಚಾಲಕ ಮತ್ತು ಬಿ.ಎಲ್.ಡಿ.ಇ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ…

Read More

ಮಾಜಿ ಸಚಿವ ಸಂಗಣ್ಣ ಬೆಳ್ಳುಬ್ಬಿ ನೇತೃತ್ವದಲ್ಲಿ ಮಹಾಬಲೇಶ್ವರದಲ್ಲಿ ರೈತರಿಂದ ಬಾಗಿನ ಅರ್ಪಣೆ ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ನಮ್ಮ ರಾಜ್ಯದಲ್ಲೀ ಮಳೆ ಆಗದೇ ಹೋದ್ರನೂ ಪ್ರತಿವರ್ಷ ಜನ, ಜಾನುವಾರುಗಳಿಗೆ ಜೀವಜಲವನ್ನು ಕೃಷ್ಣೆ ನೀಡುತ್ತಾ ಬಂದಿದ್ದಾಳೆ. ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳಿಗೆ ಈಕೆಯೇ ಜೀವನಾಡಿಯಾಗಿದ್ದಾಳೆ. ಆದ್ದರಿಂದವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯ ರೈತರು ಕಳೆದ 15 ವರ್ಷಗಳಿಂದ ಕೃಷ್ಣೆಯ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಗಂಗಾಪೂಜೆ ಮಾಡಿ ಬಾಗಿನ ಅರ್ಪಿಸುತ್ತಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.ಹೌದು, ಮಹಾಬಳೇಶ್ವರ ಪಂಚಗಂಗಾ ದೇವಸ್ಥಾನಕ್ಕೆ ತೆರಳಿದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಅನ್ನದಾತರು ಮಾಜಿ ಸಚಿವ ಸಂಗಣ್ಣ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ 16ನೇ ವರ್ಷದ ಗಂಗಾಪೂಜೆ ಸಲ್ಲಿಸಿ ಕೃಷ್ಣೆಗೆ ಬಾಗಿನ ಅರ್ಪಿಸಿದರು. ಮುಂಗಾರು ಆರಂಭ ವಾಗುವದರೊಂದಿಗೆ ಬರುವ ಕಡ್ಲೀಗರ ಪೂರ್ಣಿಮೆಯಂದೂ ಈ ಭಾಗದ ನೂರಾರು ಮಣ್ಣಿನ ಮಕ್ಕಳು ಮಹಾಬಳೇಶ್ವರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ…

Read More