ಕಾಯಕಯೋಗಿ ಹಡಪದ ಅಪ್ಪಣ ಜಯಂತಿಯಲ್ಲಿ ಕಾಂಗ್ರೆಸ್ ಮುಖಂಡ ರಮೇಶ ಬಂಟನೂರ ಅಭಿಮತ
ಆಲಮೇಲ: ಕಲ್ಯಾಣ ಕ್ರಾಂತಿಯ ಮೂಲಕ ಅನುಭವ ಮಂಟಪವನ್ನು ಸ್ಥಾಪಿಸಿದವರಲ್ಲಿ ಅನುಭವ ಮಂಟಪದ ಕಾರ್ಯದರ್ಶಿಗಳಾದವರು ಹಡಪದ ಅಪ್ಟಣವರು. ಧರ್ಮ ಕ್ರಾಂತಿಯಲ್ಲಿ ಸಾಮಾಜಿಕ ಕ್ರಾಂತಿಗಳು ನಡೆದಾಗ ಬಸವಣ್ಣವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಅವರ ಕಾರ್ಯದರ್ಶಿಗಳಾಗಿ ಸಾಗಿದವರು ಹಡಪದ ಅಪ್ಪಣ್ಣನವರು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ರಮೇಶ ಬಂಟನೂರ ಹೇಳಿದರು
ಪಟ್ಟಣದ ತಾಲೂಕಾ ದಂಡಾಧಿಕಾರಿಗಳ ಕಾರ್ಯಲಯದಲ್ಲಿ ಹಡಪದ ಅಪ್ಪಣ್ಣನವರ ೮೯೦ನೇ ಜಯಂತಿ ಆಚರಣೆ ಮಾಡಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತಾಲೂಕಾ ದಂಡಾಧಿಕಾರಿ ಸುರೇಶ ಚವಾಲರ್ ಮಾತನಾಡಿ, ಸರಕಾರದ ಆದೇಶದ ಪ್ರಕಾರ ಇಂತಹ ಮಾಹಾನಿಯರ ಜಯಂತಿಯನ್ನು ನಾವು ಆಚರಣೆ ಮಾಡುತ್ತಾ ಇರುತ್ತವೆ. ಈ ಜಯಂತಿ ಆಚರಣೆಗೆ ಸೀಮಿತವಾಗದೆ ಇಂತಹ ಮಹನೀಯರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ನಾವು ಅವಲೋಕನ ಮಾಡಿಕೊಳ್ಳಬೇಕಾಗಿದೆ ಮತ್ತು ನಾವು ಬಡವರಾಗಿದ್ದರೆ ಒಂದು ಹೊತ್ತಿನ ಉಟಬಿಟ್ಟು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿದೆ. ನಮ್ಮ ಮಕ್ಕಳಿಗೆ ದುಷ್ಟ ಚಟಗಳ ಕಡೆಗೆ ಸಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿಯ ಕಂದಾಯ ಅಧಿಕಾರಿ ಬೋಜು ನಾರಾಯಣಕರ ಆಡಳಿತ ಅಧಿಕಾರಿ ಮುಕಿಹಾಳ ಹೆಸ್ಕಾಂ ಅಧಿಕಾರಿ ದುಮಗೊಂಡ ಸಮಾಜದ ಅಧ್ಯಕ್ಷ ಶಂಕರ ಹಡಪದ ನಾ ಪ.ಪಂ ಸದಸ್ಯ ಗುರು ಹಡಪದ ಹಿರಿಯ ಮುಖಂಡರಾದ ಹಂಪಣ್ಣ ಹಡಪದ ಶಾಂತಪ್ಪ ಹಡಪದ ಶರಣು ಹಡಪದ ಪ್ರಭು ಹಡಪದ ಜಗದೀಶ ಹಡಪದ ಶ್ರೀಶೈಲ ಕುಂಬಾರ ಚನಯ್ಯ ಸಾರಂಗಮಠ ಸಮಾಜದ ಪ್ರಮುಖರು ಇದ್ದರು

