ವಿಜಯಪುರ: ಗುರುಪೂರ್ಣಿಮೆ ಅಂಗವಾಗಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ನಗರದ ಜ್ಞಾನಯೋಗಾಶ್ರಮದಲ್ಲಿ ಶನಿವಾರ ಮತ್ತು ರವಿವಾರ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.
ಶನಿವಾರ ಸಸಿಗೆ ನೀರುಣಿಸುವ ಮೂಲಕ ಶಿಬಿರಕ್ಕೆ ಸದಲಗಾದ ಶ್ರದ್ಧಾನಂದ ಸ್ವಾಮಿಗಳು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ಪ್ರತಿ ವರ್ಷ ಗುರುಪೂರ್ಣಿಮೆಯಂದು ಭಕ್ತರಿಗಾಗಿ ಬಿ.ಎಲ್.ಡಿ.ಇ ಆಸ್ಪತ್ರೆ ಆಯೋಜಿಸುತ್ತಿರುವ ಉಚಿತ ಆರೋಗ್ಯ ಶಿಬಿರ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನುಕೂಲ ಒದಗಿಸಿದೆ. ಗ್ರಾಮೀಣ ಭಾಗದಿಂದ ಬರುವ ಭಕ್ತಾದಿಗಳಿಗೂ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಿದೆ ಎಂದು ಶ್ಲಾಘಿಸಿದರು.
ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಆರೋಗ್ಯ ಸಂಪತ್ತು ಎಲ್ಲಕ್ಕಿಂತ ಮಿಗಿಲಾಗಿದೆ. ರೋಗ ಬಂದ ಮೇಲೆ ನರಳುವುದಕ್ಕಿಂತ, ನಿಯಮಿತ ಯೋಗಾಭ್ಯಾಸ ಮಾಡಿ ಆರೋಗ್ಯವಂತ ಜೀವನ ಶೈಲಿಯನ್ನು ರೂಢಿಸಿಕೊಂಡು ರೋಗ ಬರದಂತೆ ತಡೆಯುವುದು ಅಗತ್ಯವಾಗಿದೆ ಎಂದು ಕಿವಿಮಾತು ಹೇಳಿದರು.
ಈ ಶಿಬಿರದ ಸಂಚಾಲಕ ಮತ್ತು ಬಿ.ಎಲ್.ಡಿ.ಇ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ.ಕೋಟೆಣ್ಣವರ ಅವರು ಮಾತನಾಡಿ, ಆಸ್ಪತ್ರೆಯ ವತಿಯಿಂದ ನಿರಂತರವಾಗಿ ಜಿಲ್ಲಾದ್ಯಂತ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಕಿಡ್ನಿ, ಲಿವರ್, ಹ್ರದಯ, ಕ್ಯಾನ್ಸರ್ ಹೀಗೆ ಯಾವುದೇ ತರಹದ ರೋಗಗಳಿಗೆ ಬಿ.ಎಲ್.ಡಿ.ಇ. ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಅತ್ಯಾಧುನಿಕ ಚಿಕಿತ್ಸೆ ಸೌಲಭ್ಯಗಳು ಉಚಿತವಾಗಿ ಇಲ್ಲವೆ ಕೈಗೆಟುಕುವ ದರದಲ್ಲಿ ಲಭ್ಯವಿರುವುದಾಗಿ ಹೇಳಿದರು. ವಿಜಯಪುರದ ಜ್ಞಾನಯೋಗಾಶ್ರಮವು ಜನರಿಗೆ ಜ್ಞಾನದಾಸೋಹದೊಂದಿಗೆ ಇಂಥ ಆರೋಗ್ಯ ಶಿಬಿರಗಳನ್ನು ನಡೆಸುವುದರಿಂದ ಸ್ವಾಸ್ಥ್ಯ ದಾಸೋಹವನ್ನೂ ಕೈಗೊಂಡು ಜನಪರ ಕಾಳಜಿಯನ್ನು ಮೆರೆಯುತ್ತಿದೆ ಎಂದು ಹೇಳಿದರು.
ಎರಡು ದಿನಗಳ ಈ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆಯೊಂದಿಗೆ ಬಿ. ಪಿ., ರಕ್ತ, ಇಸಿಜಿ ತಪಾಸಣೆ, ಹಾಗೂ ಔಷಧಿ ವಿತರಣೆ ಮಾಡಲಾಯಿತು. ಅಲ್ಲದೇ, ಅವಶ್ಯವಿದ್ದವರಿಗೆ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುವಂತೆ ಶಿಫಾರಸು ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಗವಾಡದ ಶ್ರೀ ಯತೀಶ್ವರಾನಂದ ಸ್ವಾಮೀಜಿ, ಇಳಕಲ್ಲಿನ ಶ್ರೀ ಬಸವರಾಜ ಸ್ವಾಮೀಜಿ, ಆಶ್ರಮ ಭಕ್ತಮಂಡಳಿಯ ಎಂ. ಜಿ. ಹಳ್ಳದ, ಅರವಿಂದ ಹುಣಶ್ಯಾಳ, ಎಂ. ಎಂ. ಅಂಗಡಿ, ಎಸ್. ಆರ್. ಧೂಳಖೇಡ, ಪ್ರಕಾಶ ಕನ್ನೂರ ಮುಂತಾದವರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಅನುಜಾ ಭಾವಿ, ಡಾ.ವೀಣಾ ಘಂಟೆಪ್ಪಗೋಳ, ಡಾ.ಸಂದೀಪ ಯಂಕಂಚಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ. ಗೌತಮ ನಾಯ್ಡು, ಡಾ. ಸ್ಮಿತ್, ಡಾ. ನವರತ್ನಾ, ಸಿಬ್ಬಂದಿಯಾದ ಅನಿಲ ಶಿರಹಟ್ಟಿ, ವಿನೋದ ಗಲಗಲಿ, ಶ್ರೀಶೈಲ ಕುಂಬಾರ, ನಾಗೇಶ ಮಠ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
ಭಕ್ತಾದಿಗಳಿಗೆ ಅನುಕೂಲ ಒದಗಿಸಿದ ಆರೋಗ್ಯ ಉಚಿತ ಶಿಬಿರ :ಶ್ರದ್ಧಾನಂದ ಶ್ರೀ
Related Posts
Add A Comment

