ಜಿಲ್ಲೆಯ ಪ್ರಥಮ ಪ್ರೊಬೊನೊ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠರಿಗೆ ಸನ್ಮಾನ
ವಿಜಯಪುರ: ಮಹಿಳಿಯರ ಕಾರ್ಮಿಕರ, ಸಮಾಜದ ಕಟ್ಟ ಕಡೆಯ ಪ್ರಜೆಗಳ ಹಕ್ಕುಗಳು ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ಯಾರಿಗೂ ಕನಸು ಕೂಡಾ ಬೀಳದ ೧೨ ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲರ ಹಕ್ಕುಗಳು ಬಗ್ಗೆ ಮಾತಾಡಿದ್ದರು. ಶರಣರ ವಚನಗಳು ಹಲವು ಸಂವಿಧಾನಗಳ ಪ್ರತೀಕವಾಗಿದೆ. ಅದಕ್ಕಾಗಿ ನಾವು ವಚನ ಸಾಹಿತ್ಯವನ್ನು ತಗೆದುಕೊಂಡು ಲೋಕದ ನ್ಯಾಯಾಂಗ ವ್ಯವಸ್ಥೆಗೆ ಹೋಗಬೇಕು ಎಂದು ಹಿರಿಯ ಸಾಹಿತಿ ಶಂಕರ ಬೈಚವಾಳ ಹೇಳಿದರು
ಅವರು ಕನ್ನಡ ಪ್ರಸ್ತಕ ಪರಿಷತ್ತು ವಿಜಯಪುರ ಹಾಗೂ ಕಾನೂನು ಕ್ರಿಯಾತ್ಮಕ ವೇದಿಕೆ ವಿಜಯಪುರ ಅಡಿಯಲ್ಲಿ ನಡೆದ ’ನ್ಯಾಯ ಶಾಸ್ತ್ರ ಹಾಗೂ ವಚನಗಳು’ ವಿಷಯ ಕುರಿತ ವಿಚಾರ ಸಂಕಿರಣ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ನೂತನ ಆಡಳಿತ ಮಂಡಳಿಯ ಸದಸ್ಯ ಮತ್ತು ಜಿಲ್ಲೆಯ ಪ್ರಥಮ ಪ್ರೊಬೊನೊ [ಜನಸ್ನೇಹಿ] ವಕೀಲರಾಗಿ ಕಾನೂನು ಸೇವೆ ಪ್ರಾಧಿಕಾರದಿಂದ ನೇಮಕಗೊಡ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು,
ಸನ್ಮಾನ ಸ್ವೀಕರಿಸಿದ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿ, ಸರ್ವಧರ್ಮಗಳಲ್ಲಿನ ತಿರುಳು ವಚನಗಳಲ್ಲಿ ಕಾಣಬಹುದು ವಿಶೇಷವಾಗಿ ವೀರಶೈವ ಲಿಂಗಾಯತ ಧರ್ಮದ ಸಿದ್ದಾಂತವೆಂದರೆ ಅದು ಸಮಾನತೆ, ಸಹಕಾರ, ಪರಸ್ಪರ ಗೌರವ, ಧ್ಯಾನ ಚಿಂತನ ಮಂಥನಗಳಾಗಿವೆ. ಇವುಗಳ ಒಳ ಅರ್ಥ ಅರಿತರೆ ಮಾನವ ಜನಾಂಗಕ್ಕೆ ಒಳಿತಾಗುತ್ತದೆ, ವೀರಶೈವ ಲಿಂಗಾಯತ ಧರ್ಮದಲ್ಲಿನ ಒಳ ತಿರುಳೆ ಸಕಲರ ಕಲ್ಯಾಣ ಆಗಿವೆ. ಇವು ಇಂದಿನ ಕಾನೂನುಗಳ ಮೂಲವು ಸಹ ಅನಿಸಿವೆ, ಕಾನೂನು ಹಾಗೂ ಧಾರ್ಮಿಕವಾಗಿರುವ ಮಾನವ ಕಲ್ಯಾಣದ ಜೊತೆಗೆ ಸರ್ವ ಜೀವಿಗಳಿಗೆ ಲೇಸು ಬಯಸುವುದೇ ವೀರಶೈವ ಲಿಂಗಾಯತ ದರ್ಮದ ಮೂಲ ಉದ್ದೇಶವಾಗಿದೆ ಎಂದರು.
ಕಾನೂನು ಸೇವಾ ಪ್ರಾಧಿಕಾರದಲ್ಲಿ ಉಚಿತವಾಗಿ ಕಾನೂನು ಸೇವೆ ದೊರಕಲಿದ್ದು ಅದರ ಸದುಪಯೋಗವನ್ನು ಜನರು ಮಾಡಿಕೊಳ್ಳಬೇಕೆಂದು ತಿಳಿಸಿದರು,
ಈ ಸಂಧರ್ಭದಲ್ಲಿ ನ್ಯಾಯವಾದಿ ಭೃಂಗಿಮಠ ಅವರು ವೀರಶೈವ ಮಹಾಸಭಾಕ್ಕೆ ನೂತನವಾಗಿ ಆಯ್ಕೆಯಾದಕ್ಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು,
ಹಿರಿಯ ಸಾಹಿತಿ ಹಾಗೂ ಪುಸ್ತಕ ಪರಿಷತ್ತಿನ ಸಂಚಾಲಕ ಸಿದ್ದರಾಮ ಬಿರಾದಾರ ಮನಗೂಳಿ ಅವರು ಮಾತನಾಡಿ, ಪ್ರಾಚೀನ ಅವಧಿಯಲ್ಲೆ ನ್ಯಾಯಶಾಸ್ತ್ರ ಇದ್ದು ೧೨ನೇ ಶತಮಾನದಲ್ಲಿ ಶರಣರ ವಚನಗಳಲ್ಲಿ ಅದನ್ನು ಕ್ರಿಯಾತ್ಮಕಗೊಳಿಸಿದರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈಕೋರ್ಟ್ ನ್ಯಾಯವಾದಿ ಶ್ರೀಮತಿ ಅನುಸೂಯ ಹಿರೇಮಠ ಅವರು ವಹಿಸಿ ಮಾತನಾಡಿ, ನ್ಯಾಯಶಾಸ್ತ್ರ ಎಂಬುದು ಕಾನೂನಿನ ತತ್ವ, ಸಿದ್ದಾಂತವಾಗಿರುತ್ತದೆ, ಶರಣರು ಕಾನೂನು ಜಿಜ್ಞಾಸುಗಳು ಆಗಿದ್ದರು, ಭೃಂಗಿಮಠ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಅಬಿಪ್ರಾಯ ಪಟ್ಟರು.
ವೇದಿಕೆಯ ಮೇಲೆ ನಮ್ಮ ಕನ್ನಡಿಗರ ವಿಜಯಸೇನೆ ಜಿಲ್ಲಾಧ್ಯಕ್ಷ ಭೀಮಾಶಂಕರ ಪತ್ತಾರ, ಕೈಲಾಸ ಗಾಲಾ, ಸಂಗಮೇಶ ಮನ್ನಿಕೆರಿ, ಸಿದ್ದು ಮಡಸನಾಳ, ಹೊನ್ನುಂಗುರ, ಚಂದ್ರಕಾಂತ ಹಿರೇಮಠ ಸೇರಿದಂತೆ ಇತರರು ಇದ್ದರು.
ಜಗನಾಥ ಯಾದಗಿರಿ ಸ್ವಾಗತಿಸಿದರು,

