ಇಂಡಿ: ಮಹಿಳೆ ಇಲ್ಲದ ಸಮಾಜವನ್ನು ಕಲ್ಪಿಸಲು ಸಾಧ್ಯವಿಲ್ಲ, ಪ್ರಸ್ತುತ ದಿನಗಳಲ್ಲೂ ನಿರಂತರ ಶೋಷಣೆಗಳು ನಡೆಯುತ್ತಿರುವುದು ಆಘಾತಕಾರಿ ವಿಷಯವಾಗಿದೆ ಎಂದು ಜಿ.ಆರ್.ಗಾಂಧಿ ಕಲಾ ಮಹಾವಿದ್ಯಾಲಯದ ಡಾ. ಸುರೇಂದ್ರ ಕುಮಸಿ ಅವರು ಹೇಳಿದರು.
ಅವರು ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಸಮಾಜಶಾಸ್ತ್ರ ವಿಭಾಗವು ಹಮ್ಮಿಕೊಂಡಿದ್ದ ʼವಿಶೇಷ ಉಪನ್ಯಾಸ ʼ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಆರ್. ಎಚ್.ರಮೇಶ ಮಾತನಾಡಿ ʼ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಶಿಕ್ಷಣವನ್ನು ಮಹಿಳೆಗೆ ಎಲ್ಲ ಹಂತಗಳಲ್ಲೂ ದೊರೆಯುವಂತಾಗಬೇಕು ಎಂದರು.
ಐಕ್ಯೂಎಸಿ ಸಂಯೋಜಕರಾದ ಡಾ.ಶೀರುನುಸುಲ್ತಾನ ಇನಾಂದಾರ, ಪ್ರೊ. ಕಿರಣ ರೇವಣಕರ, ಸಮಾಜಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಸುನಂದ ಎಚ್. ಪೂಜಾರಿ, ಡಾ. ಸಚಿನ ಹುಗ್ಗಿ, ಪ್ರೊ. ಆರ್.ಬಿ.ಮುದ್ದೇಬಿಹಾಳ ಮೊದಲಾದವರು ವೇದಿಕೆಯಲ್ಲಿದ್ದರು.
ಕು.ಮಂಜುನಾಥ ಶಿವಣಗಿ ಸ್ವಾಗತಿಸಿದರು. ಕು.ಸದಾಶಿವ ಕಂಬಾರ ನಿರೂಪಿಸಿದರು. ಕು.ಶಿವಾನಂದ ಬನಸೋಡೆ ವಂದಿಸಿದರು.
Subscribe to Updates
Get the latest creative news from FooBar about art, design and business.
ಮಹಿಳೆಗೆ ಎಲ್ಲ ಹಂತಗಳಲ್ಲೂ ಶಿಕ್ಷಣ ದೊರೆಯುವಂತಾಗಬೇಕು :ಕುಮಸಿ
Related Posts
Add A Comment

