ವಿಜಯಪುರ ಜಿಲ್ಲೆ ಕನ್ನಡಮತ್ತು ಸಂಸ್ಕೃತಿ ಇಲಾಖೆಯಿಂದ ಹಡಪದ ಅಪ್ಪಣ್ಣ ಜಯಂತಿ
ವಿಜಯಪುರ: ನಗರದ ಶ್ರೀ.ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪಾರ ಜಿಲ್ಲಾಧಿಕಾರಿ, ಸೋಮಲಿಂಗ ಗೆಣ್ಣೂರ, ಕಲ್ಯಾಣದಲ್ಲಿ ನಾವು ಪ್ರತಿಯೊಬ್ಬರೂ ಬಂದು ಸೇರಿದ್ದು ದುಡಿದು ಉಣ್ಣಲು ಮತ್ತು ಮೌಢ್ಯವನ್ನು ಕಿತ್ತೊಗೆಯಲು ಒಂದ್ದಾಗಿದ್ದೇವೆ. ಈ ಮೂಲಕ ಸಮಸಮಾಜದ ಕಾರ್ಯ ನಮ್ಮದಾಗಬೇಕು. ಇವ ನಮ್ಮವ ಎನ್ನುವ ಬಾಂಧವ್ಯ ಬೆಳೆದಾಗ ಶರಣ ಸಂಕುಲ ವಿಸ್ತಾರವಾಗಿ ಬೆಳೆಯುತ್ತದೆ. ಆದ್ದರಿಂದ ಕಾಯಕ ದಾಸೋಹ ನಮ್ಮ ಮುಖ್ಯ ಗುರಿಯಾಗಬೇಕೆಂದು ಹೇಳಿದರು.
ಬಸವಣ್ಣನವರ ಹಿಂದೆ ನಡೆದ ಶರಣರಲ್ಲಿ ಹಡಪದ ಅಪ್ಪಣ್ಣ ಕಲ್ಯಾಣದಿಂದ ಕೂಡಲಸಂಗಮದೇವ ಬಸವಣ್ಣನವರ ನೆರಳಿನಂತೆ ಇದ್ದು ತಮ್ಮ ಕಾಯಕದಲ್ಲಿ ನಿಷ್ಠೆತೋರಿ ಬಸವಣ್ಣನವರ ಆಪ್ತರಾಗಿದ್ದ ಅಪ್ಪನ್ನನವರ ಕಾಯಕನಿಷ್ಟೆಗೆ ಸಾಕ್ಷಿಯಾಗಿದೆ. ಅಂತಹ ಪ್ರಾಮಾಣಿಕತೆಯನ್ನು ಸಮಾಜ ಬಾಂಧವರು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ಅವಶ್ಯಕತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಭೀಮಾಶಂಕರ ಅವರು, ಹಡಪದ ಅಪ್ಪಣ್ಣ ಜೀವನವನ್ನು ಕಣ್ಣಮುಂದೆ ತಂದು ನಿಲ್ಲಿಸಿದರು.
ಇಡೀ ಕಾರ್ಯಕ್ರಮಕ್ಕೆ ಶರಣ ಹಡಪದ ಅಪ್ಪಣ್ಣ ನಾಟಕ ಇನ್ನಷ್ಟು ಮೆರಗು ತಂದು ಜಯಂತಿ ಯಶಸ್ವಿಗೊಳಿಸಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರು, ಅಪಾರ ಸಂಖ್ಯೆಯ ಹಡಪದ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಸುಭಾಷ ಕೊಣ್ಣೂರ ನಿರೂಪಿಸಿ ವಂದಿಸಿದರು.

