ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ನೇ ಸಾಲಿನ ಕೃಷಿ ಇಲಾಖೆಯ ಹೈಟೆಕ್ ಹಾರ್ವೆಸ್ಟರ್ ಹಬ್ ಕಾರ್ಯಕ್ರಮದಡಿ ಶುಗರ್‌ಕೇನ್ ಹಾರ್ವೆಸ್ಟರ್ ಹಬ್ ಹಾಗೂ ಕಂಬೈನ್ ಹಾರ್ವೆಸ್ಟರ್ ಹಬ್‌ಗಳನ್ನು ಸಹಾಯಧನದಡಿ ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಸಾಮಾನ್ಯ ಹಾಗೂ ಪರಿಶಿಷ್ಟ ವರ್ಗದ ವೈಯಕ್ತಿಕ ಫಲಾನುಭವಿಗಳು ಹಾಗೂ ಸಂಘ- ಸಂಸ್ಥೆಗಳು ಶುಗರ್‌ಕೇನ್ ಹಾರ್ವೆಸ್ಟರ್ ಹಬ್ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದ್ದು, ಸಾಮಾನ್ಯ ಹಾಗೂ ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ಕಂಬೈನ್ ಹಾರ್ವೆಸ್ಟರ್ ಹಬ್‌ಗಳ ಸಹಾಯಧನದಡಿ ನೀಡಲಾಗುತ್ತಿದ್ದು.
ಯಂತ್ರೋಪಕರಣಗಳ ಖರೀದಿಗೆ ಅನುದಾನ ಲಭ್ಯತೆ, ಆದ್ಯತೆಯ ಆಧಾರದ ಮೇಲೆ ಸಹಾಯಧನ ಮಂಜೂರು ಮಾಡಲಾಗುತ್ತಿದ್ದು .ಆಸಕ್ತ ರೈತರು, ರೈತ ಸಂಘಗಳು ಹಾಗೂ ಸಂಸ್ಥೆಗಳು ಕೊನೆಯ ದಿನಾಂಕ ಆಗಸ್ಟ್ ೧೦ ರೊಳಗೆ ಅರ್ಹರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
