ಮಾಜಿ ಸಚಿವ ಸಂಗಣ್ಣ ಬೆಳ್ಳುಬ್ಬಿ ನೇತೃತ್ವದಲ್ಲಿ ಮಹಾಬಲೇಶ್ವರದಲ್ಲಿ ರೈತರಿಂದ ಬಾಗಿನ ಅರ್ಪಣೆ
ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ನಮ್ಮ ರಾಜ್ಯದಲ್ಲೀ ಮಳೆ ಆಗದೇ ಹೋದ್ರನೂ ಪ್ರತಿವರ್ಷ ಜನ, ಜಾನುವಾರುಗಳಿಗೆ ಜೀವಜಲವನ್ನು ಕೃಷ್ಣೆ ನೀಡುತ್ತಾ ಬಂದಿದ್ದಾಳೆ. ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳಿಗೆ ಈಕೆಯೇ ಜೀವನಾಡಿಯಾಗಿದ್ದಾಳೆ. ಆದ್ದರಿಂದ
ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯ ರೈತರು ಕಳೆದ 15 ವರ್ಷಗಳಿಂದ ಕೃಷ್ಣೆಯ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಗಂಗಾಪೂಜೆ ಮಾಡಿ ಬಾಗಿನ ಅರ್ಪಿಸುತ್ತಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
ಹೌದು, ಮಹಾಬಳೇಶ್ವರ ಪಂಚಗಂಗಾ ದೇವಸ್ಥಾನಕ್ಕೆ ತೆರಳಿದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಅನ್ನದಾತರು ಮಾಜಿ ಸಚಿವ ಸಂಗಣ್ಣ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ 16ನೇ ವರ್ಷದ ಗಂಗಾಪೂಜೆ ಸಲ್ಲಿಸಿ ಕೃಷ್ಣೆಗೆ ಬಾಗಿನ ಅರ್ಪಿಸಿದರು. ಮುಂಗಾರು ಆರಂಭ ವಾಗುವದರೊಂದಿಗೆ ಬರುವ ಕಡ್ಲೀಗರ ಪೂರ್ಣಿಮೆಯಂದೂ ಈ ಭಾಗದ ನೂರಾರು ಮಣ್ಣಿನ ಮಕ್ಕಳು ಮಹಾಬಳೇಶ್ವರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ದಂಪತಿಗಳು ವಿಶೇಷ ಪೂಜೆ ಸಲ್ಲಿಸಿ ಕೃಷ್ಣೆಯ ಕೃಪೆ ರೈತರ ಮೇಲಿರಲಿ. ಕಾಲಕಾಲಕ್ಕೆ ಸರಿಯಾಗಿ ಹರಿದು ಬದುಕು ಬಂಗಾರ ಮಾಡು ಎಂದು ಪ್ರಾರ್ಥಿಸಿದರು. ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಮಹಾಬಳೇಶ್ವರದ ಪಂಚಗಂಗಾ ಸ್ಥಳದಲ್ಲಿ ಹುಟ್ಟುವ ಕೃಷ್ಣಾ ನದಿ ಕೇವಲ ಮಹಾರಾಷ್ಟ್ರ ಮಾತ್ರವಲ್ಲ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜನರಿಗೆ ನೀರುಣಿಸುತ್ತಾಳೆ. ಕೃಷ್ಣಾ ನದಿ ಹುಟ್ಟುವ ಪಂಚಗಂಗೆ ಕ್ಷೇತ್ರ ಐದು ನದಿಗಳ ಉಗಮ ಸ್ಥಾನವಾಗಿರುವುದು ಮತ್ತೊಂದು ವಿಶೇಷ. ಗಾಯತ್ರಿ, ಸಾವಿತ್ರಿ, ಕೋಯ್ನಾ, ವೆನ್ನಾ ಮತ್ತು ಕೃಷ್ಣಾ ನದಿಗಳ ಸಂಗಮಸ್ಥಳವೂ ಹೌದು. ಇಲ್ಲಿ ಪಂಚಗಂಗಾ ದೇವಸ್ಥಾನ ನಿರ್ಮಿಸಲಾಗಿದ್ದು, ಈ ದೇವಾಲಯದಲ್ಲಿರುವ ಗೋವಿನ ಮೂರ್ತಿಯ ವಾಯಿಯಿಂದ ಎಲ್ಲ ನದಿಗಳು ಉಗಮವಾಗುತ್ತವೆ. ಈ ಹಿನ್ನೆಲೆಲಿ ಈ ಪ್ರದೇಶವನ್ನು ಪಂಚಗಂಗಾ ಎಂದು ಕರೆಯಲಾಗುತ್ತದೆ. ಇಲ್ಲಿಯೇ ಜನುಮ ತಾಳುವ ಕೃಷ್ಣೆಗೆ ಬಾಗೀನ ಅರ್ಪಿಸಿ ಕೃತಜ್ಞತೆ ಸಲ್ಲಿಸಿದರು. ಇನ್ನೂ ಈ ಉಗಮಸ್ಥಾನದ ಮಹತ್ವ ಅರಿತಿರುವ ಮಾಜಿ ಸಚಿವ ಸಂಗಣ್ಣ ಕೆ ಬೆಳ್ಳುಬ್ಬಿ ತಾವು ಶಾಸಕರಾಗಿದ್ದಾಗ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರೊಂದಿಗೆ
ಹಾಗೂ ಮಹಾರಾಷ್ಟ್ರ ರಾಜ್ಯದ ಸಾತಾರಾ, ಸಾಂಗ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಕೂಡಾ ಈ ಪೂಜೆಯಲ್ಲಿ ಭಾಗವಹಿಸುತ್ತಾರೆ. ಅಲ್ಲದೇ ಕನಿಷ್ಠ ಪಕ್ಷ ಎರಡು ನೂರಕ್ಕೂ ಹೆಚ್ಚು ಜನರಿಗೆ ವಸತಿ ಊಟದ ವೆಚ್ಚವನ್ನು ಬೆಳ್ಳುಬ್ಬಿಯವರೇ ನೋಡಿಕೊಂಡು ಪ್ರತಿ ವರ್ಷ ಕಡ್ಲೀಗರ ಪೂರ್ಣಿಮೆಯಂದು ಪಂಚಗಂಗಾ ದೇವಸ್ಥಾನಕ್ಕೆ ತೆರಳಿ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸುವ ಸಂಪ್ರದಾಯ ಪಾಲಿಸುತ್ತ ಬಂದಿದ್ದಾರೆ.
ಈಗ ಕೂಡ ತಮ್ಮ ಪತ್ನಿ ಮತ್ತು ವಿಜಯಪುರ, ಬಾಗಲಕೋಟ ರೈತರ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಕೃಷ್ಣಾ ಮಾತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೃಷ್ಣಾ ಮಾತೆಗೆ ಜೈಕಾರ ಹಾಕಿದ್ದಾರೆ. ಒಟ್ನಲ್ಲಿ ಮಹಾರಾಷ್ಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ದಾರಾಕಾರವಾಗಿ ಸುರಿಯುತ್ತಿರುವ ಮಳೆಯ ಮಧ್ಯೆಯೂ ಸಂಪ್ರದಾಯವನ್ನು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜನತೆ ಮುಂದುವರಿಸಿದ್ದಾರೆ.
ತಮ್ಮನ್ನು ಹರಸುವ ಕೃಷ್ಣಾ ಮಾತೆಗೆ ಕೃತಜ್ಞತೆ ಸಲ್ಲಿಸಿ ರೈತ ಎಂದಿಗೂ ಉಪಕಾರ ಸ್ಮರಣಿ ಎಂದು ತೋರಿಸಿಕೊಟ್ಟಿದ್ದಾರೆ.

