ವಿಜಯಪುರ: ಗುರು ಜೀವನದಲ್ಲಿ ಬೆಳಕು ನೀಡುತ್ತಾನೆ. ಬೆಳಕು ಜ್ಞಾನದ ಸಂಕೇತ. ನಮ್ಮನ್ನು ಕತ್ತಲೆಯಿಂದ ಜ್ಞಾನದ ಕಡೆಗೆ ಕರೆದೊಯ್ಯುತ್ತಾರೋ ಅವರೇ ಗುರುಗಳು ಎಂದು ಕಾಖಂಡಕಿಯ ಗುರುದೇವಾಶ್ರಮದ ಶ್ರೀ ಶಿವಯೋಗೀಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ.
ಶನಿವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ನಡೆದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ನಮ್ಮದು ಮಾತೃದೇವೋಭವ, ಪಿತೃದೇವೋಭವ, ಗುರುದೇವೋಭವ ಎಂದು ಆರಾಧಿಸುವ ಘನತೆವೆತ್ತ ನಾಡು. ನಮ್ಮ ಬಾಳಿನಲ್ಲಿ ಈ ಮೂವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ನಾವು ಜೀವನ ಪೂರ್ತಿ ಅವರಿಗೆ ಋಣಿಯಾಗಿರಬೇಕು ಎಂದು ಅವರು ಹೇಳಿದರು.
ಶಾಲೆಯ ಪ್ರಾಚಾರ್ಯ ಡಾ. ಶೈಜು ನಾಯರ ಪ್ರಾಸ್ತಾವಿಕ ಮಾತನಾಡಿ, ಶಾಲೆಯಲ್ಲಿ ಮಕ್ಕಳ ನೈತಿಕ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಮಾಡುತ್ತಿರುವ ಶಾಲಾ ಕಾರ್ಯ ಚಟುವಟಿಕೆಗಳ ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸಿದರು.
ಏಳನೆಯ ತರಗತಿಯ ವಿದ್ಯಾರ್ಥಿಗಳು ಹಾಗೂ ಕನ್ನಡ ಶಿಕ್ಷರಾದ ಭೈರವ ಭಂಡಾರಿಯವ ಬಸವಣ್ಣನವರ ವಚನಗಳನ್ನು ಹಾಡಿದರು. ಶಾಲಾ ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಅವರು ವ್ಯಾಸ ಮಹರ್ಷಿಗಳ ಪೂಜಾ ಕಾರ್ಯವನ್ನು ನೆರವೇರಿಸಿದರು. ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ಮಾಡಿದ ಬಳಪ ಹಿಡಿದ ಭಗವಂತ ಎಂಬ ನರ್ತನ ಎಲ್ಲರ ಮನದಲ್ಲಿ ಗುರುಭಕ್ತಿ ಮೂಡಿಸಿತು.
ಜೈನಾಬ್ ಮೋಮಿನ್ ಸ್ವಾಗತಿಸಿದರು. ಯೋಗಿರಾಜ ಹಳಕಟ್ಟಿ ವಂದಿಸಿದರು. ಆಂಗ್ಲ ಶಿಕ್ಷಕಿ ಸಾವಿತ್ರಿ ನಿಂಬಾಳ್ಕರ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

