Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಕನ್ನಡರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಸಂಗಮೇಶ ದಾಶ್ಯಾಳ ಮಾತನಾಡಿ, ಕರ್ನಾಟಕ ಕನ್ನಡಿಗರು ಸಾರ್ವಬೌಮ ಹೌದೂ ಅಲ್ಲಾ? ಎಂಬುವ ವಿಷಯ ಕನ್ನಡಿಗರಿಗೆ ತಿಳಿಯದಂತಾಗಿದೆ, ಹೊರ ರಾಜ್ಯದಿಂದ ಬಂದು ಕನ್ನಡದ ನೆಲ,ಜಲ, ಮೂಲಭೂತ ಸೌಕಯ್ಯಗಳನ್ನು ಪಡೆದುಕೊಂಡು ಆದರೆ ಕನ್ನಡಿಗನಿಗೆ ಉದ್ಯೋಗ ಕೊಡುವದಿಲ್ಲ.ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅದಿವೇಶನದಲ್ಲಿ ಚರ್ಚೆಗೆ ತೆಗೆದುಕೊಂಡು ಮೀಸಲಾತಿಯ ವಿದೇಯಕ ಜಾರಿಗೊಳಿಸಿ ನಂತರ ಈ ಆದೇಶವನ್ನು ತಡೆಹಿಡಿಯಲಾಯಿತು. ಹೀಗಾದರೆ ಕನ್ನಡಿಗ ಹೇಗೆ ಸಾರ್ವಭೌಮನಾಗುತ್ತಾನೆ? ಪ್ರತಿಯೊಂದು ಖಾಸಗಿ ಕಾರ್ಖಾನೆ ಹಾಗೂ ದೊಡ್ಡ ದೊಡ್ಡ ಅಂಗಡಿ ಮುಗ್ಗಟಗಳನ್ನು ಹೊರ ರಾಜ್ಯದಿಂದ ಬಂದು ನೆಲೆ ಊರಿ ನಮ್ಮ ಕನ್ನಡಿಗರಿಗೆ ಕೆಲಸಗಳನ್ನು ಕೊಡದೇ ತಮ್ಮ ರಾಜ್ಯದವರನ್ನು ತೆಗೆದುಕೊಂಡು ಬಂದು ಕನ್ನಡಿಗರಿಗೆ ಕೆಲಸ ಇಲ್ಲದಂತೆ ಮಾಡಿದ್ದಾರೆ. ಆದರಿಂದ ಕನ್ನಡರಿಗೆ ಪ್ರತಿ ಶತ ೭೦ % ಭಾಗ ಉದ್ಯೋಗ ಮೀಸಲಾತಿಯನ್ನು ಸರ್ಕಾರದ ನೀತಿ ನಿಯಮದ ಅಡಿಯಲ್ಲಿ ಉದ್ಯೋಗ ಭದ್ರತೆಯನ್ನು ಒದಗಿಸಿಕೊಡಬೇಕು. ಒಂದು ವೇಳೆ ಮೀಸಲಾತಿಯ…
ದೇವರಹಿಪ್ಪರಗಿ: ಹಡಪದ ಅಪ್ಪಣ್ಣ ನವರು ೧೨ ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ ಸಾರಿದ ಬಸವಾದಿ ಶರಣರಲ್ಲಿ ಪ್ರಮುಖರಾಗಿದ್ದಾರೆ ಎಂದು ಬಸವ ಶರಣ ಸಂಗಮ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ತಡವಲ್ ಹೇಳಿದರು.ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಭಾನುವಾರ ಜರುಗಿದ ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಬಸವಣ್ಣನ ಬಾಲ್ಯದ ಒಡನಾಡಿಗಳಾಗಿ, ಕಲ್ಯಾಣದ ಅನುಭವ ಮಂಟಪದಲ್ಲಿ ಆರಂಭದಲ್ಲಿ ಸಭಿಕರಾಗಿ ನಂತರ ತಾಂಬೂಲ ಸೇವೆಯನ್ನು ಒದಗಿಸುವ ಸೇವೆ ಮಾಡಿ, ತದನಂತರ ಬಸವಣ್ಣನಿಗೆ ಪ್ರಧಾನಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಅಪ್ಪಣ್ಣನವರದಾಗಿದೆ. ಅಂತೆಯೇ ಬಸವಣ್ಣನವರು ಸಹ ಇವರ ಕಾರ್ಯಕ್ಷಮತೆಯನ್ನು ಮೆಚ್ಚಿ ಯಾರೇ ಬಂದರು ಮೊದಲು ಅಪ್ಪಣ್ಣನವರನ್ನು ನೋಡಿಕೊಂಡು ಬನ್ನಿ ಎಂದು ಕಳಿಸುತ್ತಿದ್ದರಂತೆ, ಇಂತಹ ಮಹಾನ್ ಶರಣ ಅಪ್ಪಣ್ಣ ೨೫೦ ಕ್ಕಿಂತಲೂ ಹೆಚ್ಚು ವಚನಗಳನ್ನು ಬಸವಪ್ರೀಯ ಕೂಡಲ ಚೆನ್ನಬಸವಣ್ಣ ಎಂಬ ಅಂಕಿತನಾಮದಿಂದ ರಚಿಸಿ ವಚನಸಾರದ ಭಾಗವಾಗಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಮಾತನಾಡಿದರು.ಶಿರಸ್ತೇದಾರ ಸುರೇಶ ಮ್ಯಾಗೇರಿ, ಕಂದಾಯ ನಿರೀಕ್ಷಕ…
ದೇವರಹಿಪ್ಪರಗಿ: ಸರಕಾರಿ ಶಾಲೆಗಳ ಅಭಿವೃದ್ದಿಯಲ್ಲಿ ಸಮುದಾಯದ ಪಾತ್ರ ಮತ್ತು ಸಹಕಾರ ತುಂಬಾ ಮಹತ್ವದ್ದಾಗಿದೆ. ಸಹಯೋಗ ಹಾಗೂ ಪ್ರೋತ್ಸಾಹದ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸೋಣ ಎಂದು ಹಿರಿಯ ಶಿಕ್ಷಣ ಪ್ರೇಮಿ ಮಲ್ಲಪ್ಪ ದುದ್ದಗಿ ಹೇಳಿದರು.ತಾಲ್ಲೂಕಿನ ಗಂಗನಳ್ಳಿ ಗ್ರಾಮದ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ಸದಾಶಿವ ದುದ್ದಗಿ ಇವರು ಕೊಡುಗೆಯಾಗಿ ನೀಡಿದ ಗುಣಮಟ್ಟದ ೪೦೦ ಶಾಲಾ ಬ್ಯಾಗುಗಳನ್ನು ಮಕ್ಕಳಿಗೆ ವಿತರಿಸಿ ಮಾತನಾಡಿದರು.ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಸರಕಾರಿ ಶಾಲೆಗಳಿಗೆ ತೊಂದರೆಯಾಗಬಾರದು. ಅದಕ್ಕಾಗಿ ಸರಕಾರಿ ಶಾಲಾ ಮಕ್ಕಳಿಗೆ ಬ್ಯಾಗ ವಿತರಿಸಲಾಗುತ್ತಿದೆ ಎಂದರು.ನಿವೃತ್ತ ಮುಖ್ಯಶಿಕ್ಷಕ ವಾಯ್.ಎಮ್. ಹಿರೇಕುರುಬರ, ಅಕ್ಷಯ ಕೇರಿ ಮಾತನಾಡಿ, ಶಿಕ್ಷಣ ಪ್ರೇಮಿ ಮಲ್ಲಪ್ಪ ದುದ್ದಗಿ ಹಾಗೂ ಸದಾಶಿವ ದುದ್ದಗಿಯವರ ಈ ಶೈಕ್ಷಣಿಕ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದರು.ನಂತರ ಎಸ್‌ಡಿಎಮ್‌ಸಿ ಅಧ್ಯಕ್ಷ ಬಸವರಾಜ ಈಶ್ವರಪ್ಪಗೋಳ ಅವರ ನೇತೃತ್ವದಲ್ಲಿ ಬ್ಯಾಗುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದಾನಿ ಸದಾಶಿವ ದುದ್ದಗಿ ಇವರನ್ನು ಸನ್ಮಾನಿಸಲಾಯಿತು.ಪ್ರೌಢಶಾಲಾ ಮುಖ್ಯಶಿಕ್ಷಕ ಬಿ.ಜಿ.ಸಜ್ಜನ, ಪ್ರಾಥಮಿಕ ಶಾಲಾ ಪ್ರಭಾರಿ ಮುಖ್ಯಶಿಕ್ಷಕ ಶ್ರೀಶೈಲ…
ಸಿಂದಗಿ: ನೀರಿನ ಬಳಕೆ ಮತ್ತು ಸಂರಕ್ಷಣೆಯನ್ನು ನಾವು ನಿತ್ಯ ಅನುಸರಿಸಿದ್ದಲ್ಲಿ, ನೀರಿನ ಕೊರತೆಯಿಂದ ತಕ್ಕಮಟ್ಟಿಗೆ ಮುಕ್ತತೆಯನ್ನು ಪಡೆಯುತ್ತೇವೆ ಎಂದು ಶ್ರೀಪದ್ಮರಾಜ ಪಬ್ಲಿಕ್ ಶಾಲೆಯ ಪ್ರಾಚಾರ್ಯ ವಿ.ಬಿ. ಲಮಾಣಿ ಹೇಳಿದರು.ಪಟ್ಟಣದಲ್ಲಿ ಶ್ರೀಪದ್ಮರಾಜ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ಜಲದೂತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ನೀರನ್ನು ನಾವೆಲ್ಲ ಪೋಲು ಮಾಡುತ್ತಿದ್ದೇವೆ. ಜಲ ಸಂಪನ್ಮೂಲವನ್ನು ಸಂರಕ್ಷಿಸಿದಾಗ ಮಾತ್ರ ಕೈಗಾರಿಕೆ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳು ಅಭಿವೃದ್ಧಿಯಾಗಲಿವೆ. ಪ್ರತಿ ಕಾರ್ಯಕ್ಕೂ ನೀರಿನ ಹೆಚ್ಚು ಅವಶ್ಯಕತೆ ಇರುವುದರಿಂದ ನೀರಿನ ಬಳಕೆಯ ಬಗ್ಗೆ ಹೆಚ್ಚು ಗಮನದಲ್ಲಿಟ್ಟುಕೊಂಡು ಬಳಕೆ ಮಾಡಬೇಕು. ನೀರಿಲ್ಲದ ಕಾರಣ ಅನೇಕ ಕೃಷಿ ಜಮೀನುಗಳು ಇಂದು ನಿವೇಶನಗಳಾಗಿ ಮಾರ್ಪಾಡಾಗುತ್ತಿವೆ. ನೀರಿನ ಸದ್ಬಳಕೆ ಮತ್ತು ಮಹತ್ವವನ್ನು ಮಕ್ಕಳಲ್ಲಿ ಬಿಂಬಿಸುವ ಉದ್ದೇಶದಿಂದ ಜಲದೂತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಅಭಿಯಾನ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪಟ್ಟಣದ ವಿವಿಧ ಬೀದಿಗಳ ಮೂಲಕ ಸಂಚಾರ ಮಾಡಿ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು.ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿಗಳಾದ ರಾಣಿ ಜೋಗೂರ, ಕೆ.ಎಸ್.ಲಾತೂರ, ಎಸ್.ಎಸ್.ಪೋದ್ದಾರ, ಸಾವಿತ್ರಿ…
ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಅಭಿಮತ ಸಿಂದಗಿ: ಹಡಪದ ಅಪ್ಪಣ್ಣನವರ ವಚನಗಳು ಮನುಕುಲ ಉದ್ಧಾರಕ್ಕೆ ದಾರಿದೀಪ ಎಂದು ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು.ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಲಿಂಬೆ ಅಭಿವೃದ್ಧಿ ನಿಮಗ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ವಿಶ್ವದ ಮೊದಲ ಪ್ರಜಾಪ್ರಭುತ್ವದ ಸಂಸತ್ತು ಎಂದು ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಡಪದ ಅಪ್ಪಣ್ಣನವರು ತಮ್ಮ ಕಾಯಕ ನಿಷ್ಠೆ ಮತ್ತು ಮೌಲ್ಯಯುತ ವಚನಗಳಿಂದ ಬಸವಣ್ಣನವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಮಾಜದಲ್ಲಿನ ಅಜ್ಞಾನ, ಅಸಮಾನತೆ, ಜಾತಿ ಪದ್ಧತಿ, ಮೂಡನಂಬಿಕೆ ವಿರುದ್ಧ ಹೋರಾಡಿ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದರು. ಇವರ ಸಾಮಾಜಿಕ ಚಿಂತನೆಗಳು ವೈಚಾರಿಕ ಸಮಾಜಕ್ಕೆ ಚೈತನ್ಯ ನೀಡುತ್ತವೆ ಎಂದರು.ಈ ವೇಳೆ ಶಿಕ್ಷಕಿ ಸೈನಾಬಿ ಮಸಳಿ ಮಾತನಾಡಿ,…
ಉದಯರಶ್ಮಿ’ ವರದಿಗಾರ ಚೇತನ ಶಿವಶಿಂಪಿ ಸೇರಿದಂತೆ ಐವರಿಗೆ “ತಾಲೂಕು ಉತ್ತಮ ಪತ್ರಕರ್ತ” ಪ್ರಶಸ್ತಿ ಮುದ್ದೇಬಿಹಾಳ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ೨೦೨೪-೨೫ ನೇ ಸಾಲಿನ ಪತ್ರಿಕಾ ದಿನಾಚರಣೆ ನಡೆಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ವಿಶೇಷ ಚರ್ಚೆಗಳು ನಡೆದವು.ಈ ವೇಳೆ ಸದಸ್ಯ ಚೇತನ ಶಿವಶಿಂಪಿ ಮಾತನಾಡಿ, ಕಾರ್ಯಕ್ರಮದ ಬಳಿಕ ಸದಸ್ಯರೆಲ್ಲರಿಗೆ ಲೆಕ್ಕಪತ್ರಗಳ ಮಾಹಿತಿ ನೀಡಿದಲ್ಲಿ ಸಂಘದ ಶಿಸ್ತನ್ನು ಕಾಯ್ದುಕೊಂಡಂತಾಗುತ್ತದೆ ಎಂದರು.ಹಿರಿಯ ಸದಸ್ಯ ಪರಶುರಾಮ ಕೊಣ್ಣೂರ ಮಾತನಾಡಿ, ಕೆಲವರು ತಮ್ಮ ಲಾಬಿಗಾಗಿ ಸಂಘದಲ್ಲಿ ಪತ್ರಕರ್ತರಲ್ಲದವರನ್ನು ಸೇರಿಸಿದ್ದಾರೆ. ಕೂಡಲೇ ಅಂತವರನ್ನು ಗುರುತಿಸಿ ಸಂಘದಿಂದ ಕೈಬಿಡಬೇಕು ಎಂದರು.ಎಚ್.ಆರ್.ಬಾಗವಾನ, ಅಲ್ಲಾಭಕ್ಷ ನಿಡಗುಂದಿ, ಡಿ.ಬಿ.ವಡವಡಗಿ ಮತ್ತೀತರರು ಮಾತನಾಡಿ ಸಲಹೆಗಳನ್ನು ನೀಡಿದರು.ಜು.೩೧ ಕ್ಕೆ ಪಟ್ಟಣದ ವಿದ್ಯಾನಗರದಲ್ಲಿರುವ ಅಭ್ಯುದಯ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಯಿತು.ಈ ವೇಳೆ ರವೀಂದ್ರ ನಂದೆಪ್ಪನವರ, ಲಾಡ್ಲೇಮಶಾಕ ನದಾಫ, ಸಿದ್ದು ಚಲವಾದಿ, ಮುತ್ತು ಬೀರಗೊಂಡ, ಹಣಮಂತ ಬೀರಗೊಂಡ, ಯಲ್ಲಾಲಿಂಗ ಕೊಡೇಕಲ್, ಕೃಷ್ಣ ಕುಂಬಾರ, ಸಾಗರ ಉಕ್ಕಲಿ, ಈಶ್ವರ ಈಳಗೇರ, ಬಿ.ಎಸ್.ಪಾಟೀಲ ಇದ್ದರು.…
ಮುದ್ದೇಬಿಹಾಳ: ಕರ್ನಾಟಕ ಮಾಧ್ಯಮ ಒಕ್ಕೂಟದ ತಾಲೂಕು ಅಧ್ಯಕ್ಷರಾಗಿ ಸಾಹಿತಿ, ಹಿರಿಯ ಪತ್ರಕರ್ತ ಪರಶುರಾಮ ಕೊಣ್ಣೂರ ಅವರನ್ನು ಸರ್ವಾನುಮತದಿಂದ ಸರ್ವ ಸದಸ್ಯರ ಸಮ್ಮುಖದಲ್ಲಿ ಸಂಘದ ರಾಜ್ಯಧ್ಯಕ್ಷ ನಾರಾಯಣ ಮಾಯಾಚಾರಿ ಘೋಷಿಸಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಕರ್ನಾಟಕ ಮಾಧ್ಯಮ ಒಕ್ಕೂಟದ ತಾಲೂಕು ಘಟಕದ ಸಭೆಯಲ್ಲಿ ಈ ಘೋಷಣೆ ಮಾಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ಶ್ರೇಷ್ಠವಾಗಿದೆ. ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪತ್ರಕರ್ತರ ಶ್ರಮ ದೊಡ್ಡದು. ಜನರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಮಾಧ್ಯಮ ಮತ್ತು ಪತ್ರಕರ್ತರು, ತಮ್ಮದೇ ಆದ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು, ಸಾಮಾಜದ ಸ್ವಾಸ್ತ್ಯ ಕಾಪಾಡುತ್ತಿದ್ದಾರೆ. ಹೀಗಾಗಿ ಸಂಘದ ಅಧ್ಯಕ್ಷರು ಸದಸ್ಯರ ಹಿತಾಸಕ್ತಿ ಕಾಪಾಡಿಕೊಂಡು ಹೋಗಬೇಕು. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಕೊಡಿಸುವ ಪ್ರಾಮಾಣಿಕ ಜವಾಬ್ದಾರಿ ಇದೆ ಎಂದರು.ಈ ವೇಳೆ ನೂತನ ಅಧ್ಯಕ್ಷ ಪರಶುರಾಮ ಕೊಣ್ಣೂರ ಅವರು ಮಾತನಾಡಿ, ಪತ್ರಕರ್ತರ ಸಂಘಗಳು ಅನ್ಯಾಯಕ್ಕೊಳಗಾದ, ದೌರ್ಜನ್ಯಕ್ಕೊಳಗಾದ ಪತ್ರಕರ್ತರ ಪರ ಧ್ವನಿ ಎತ್ತುವ ಮೂಲಕ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೇ…
ಮುದ್ದೇಬಿಹಾಳ: ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಿದ್ದಗಂಗಾ ಪ್ಯಾರಾ ಮೆಡಿಕಲ್ ಕಾಲೇಜು ಇವರ ಸಹಯೋಗದಲ್ಲಿ ಡೆಂಗ್ಯೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.ಡೆಂಗ್ಯೂ ರೋಗ ನಿಯಂತ್ರಣ ಮುಂಜಾಗ್ರತೆ ಹಾಗೂ ರೋಗ ಲಕ್ಷಣ ಚಿಕಿತ್ಸೆ ಕುರಿತು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಸಿದ್ದಗಂಗಾ ಪ್ಯಾರಾ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಿಗೆ ಸೊಳ್ಳೆ ಕಡಿತದಿಂದ ಹರಡುವ ರೋಗಗಳ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಡೆಂಗೀ ಜ್ವರ ನಿಯಂತ್ರಿಸೋಣ ಎಂಬ ಘೋಷವಾಕ್ಯದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ, ವಿವಿಧ ಬಡಾವಣೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಈಡಿಸ್ ಲಾರ್ವ್ ಸಮೀಕ್ಷೆ ಕೈಗೊಳ್ಳಲಾಯಿತು.ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಲಾರ್ವ ತಾಣಗಳನ್ನು ತೋರಿಸಿ ಅವುಗಳನ್ನು ನಾಶಪಡಿಸುವ ಕ್ರಮಗಳನ್ನು ತಿಳಿಸಲಾಯಿತು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯಾ ತೇರದಾಳ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಎಸ್.ಸಿ.ಮಾನಕರ, ವ್ಹಿ.ಬಿ.ಡಿ ಮೇಲ್ವಿಚಾರಕ ಎಸ್.ಸಿ.ರುದ್ರವಾಡಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಎಸ್.ಗೌಡರ, ಎಸ್.ಐ.ಕಮಲಪ್ಪನವರ, ಇಸ್ಮಾಯಿಲ್ ವಾಲಿಕರ, ಎಸ್.ಆರ್.ಸಜ್ಜನ, ಎನ್.ಎಂ.ಯಾಳವಾರ, ರೇಷ್ಮಾ ರೂಡಗಿ, ಕೆ.ಟಿ.ಮುಲ್ಲಾ, ಕಾಲೇಜಿನ ವಿದ್ಯಾರ್ಥಿಗಳು ಆಶಾ ಕಾರ್ಯಕರ್ತೆಯರು ಇದ್ದರು.
ಚಡಚಣ: ನೀರು ಅತ್ಯಮೂಲ್ಯ ಸಂಪತ್ತು.ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನದಿ,ಕೆರೆ,ಬಾವಿಯ ನೀರನ್ನು ಸಂರಕ್ಷಿಸುವ ಜೊತೆಗೆ ಮಳೆನೀರು ಕೊಯ್ಲು ಮೂಲಕ ಮಳೆ ನೀರನ್ನು ಸಂಗ್ರಹಿಸುವ ದಿಟ್ಟ ಪ್ರಯತ್ನ ಅಗತ್ಯ ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಹಮ್ಮಿಕೊಂಡ ಜಲಧೂತ ಜಾಗೃತಿ ಅಭಿಯಾನದ ನಿಮಿತ್ಯ ಜಲ ಸಂರಕ್ಷಣೆ-ನಮ್ಮ ಹೊಣೆ ಕುರಿತು ಮಾತನಾಡಿದರು.ಶಿಕ್ಷಕ ಡಿ ಎಸ್ ಬಗಲಿ ಮಾತನಾಡಿ, ನಾಳೆಯ ಅಭಾವ ತಪ್ಪಿಸಲು ಅತ್ಯಮೂಲ್ಯವಾದ ನೀರನ್ನು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸಿ-ಮುಂಬರುವ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕಿದೆ ಎಂದು ಹೇಳಿದರು.ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ, ನೀರು ಮುಗಿದು ಹೋಗುವ ಸಂಪನ್ಮೂಲ. ಸಕಲ ಜೀವಿಗಳಿಗೂ ನೀರು ಅತ್ಯಗತ್ಯ. ಮಾನವ ವೈಜ್ಞಾನಿಕವಾಗಿ ಬೆಳೆದರೂ ಸಹಿತ ನೀರನ್ನು ಸೃಷ್ಟಿಸುವ ತಂತ್ರಜ್ಞಾನದ ಆವಿಷ್ಕಾರ ಮಾಡಿಲ್ಲ. ನೀರಿನ ಮಿತ ಬಳಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸಗಳು ನಿರಂತರವಾಗಿರಬೇಕು ಎಂದು ಹೇಳಿದರು.ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರಾದ ಮಹಾದೇವ…
ಗ್ರಂಥಾಲಯ ನೌಕರರ ಮೇಲ್ವಿಚಾರಕರ ಸಂಘದ ತಾಲೂಕು ಗೌರವಾಧ್ಯಕ್ಷರಾಗಿ ಗುರು ಆರ್. ಹಿರೇಮಠ ಆಯ್ಕೆ ಸಿಂದಗಿ: ಗ್ರಂಥಾಲಯಗಳನ್ನು ಅರಿವು ಕೇಂದ್ರಗಳಾಗಿ ಮಾರ್ಪಡಿಸಿ ಮೇಲ್ದರ್ಜೆಗೆ ಏರಿಸುವ ಮೂಲಕ ಅವುಗಳ ಉನ್ನತಿಗೆ ಸರ್ಕಾರ ಶ್ರಮ ವಹಿಸುತ್ತಿದೆ. ಅದರ ಫಲವಾಗಿ ಇಂದು ವಿಧ್ಯಾರ್ಥಿಗಳು ಗ್ರಂಥಾಲಯಗಳತ್ತ ಮುಖಮಾಡಿದ್ದಾರೆ ಎಂದು ಗ್ರಂಥಾಲಯ ನೌಕರರ ಮೇಲ್ವಿಚಾರಕರ ಸಂಘದ ಜಿಲ್ಲಾ ಗೌರವಧ್ಯಕ್ಷ ಮಹಾಂತಗೌಡ ಕಾಶಿನಕುಂಟಿ ಹೇಳಿದರು.ಅವರು ಇಲ್ಲಿನ ಶಾಖಾ ಗ್ರಂಥಾಲಯದಲ್ಲಿ ನಡೆದ ಗ್ರಂಥಾಲಯ ನೌಕರರ ರಾಜ್ಯ ಅಧ್ಯಕ್ಷರಾದ ಸತ್ಯನಾರಾಯಣ ಅವರ ಮುಖಂಡತ್ವದ ಸಂಘದ ಮೇಲ್ವಿಚಾರಕರ ಸಭೆಯಲ್ಲಿ ಮಾತನಾಡಿದರು.ಗ್ರಂಥಾಲಯಗಳಿಗೆ ಮಕ್ಕಳು, ಹಿರಿಯರು ವಿಶೇಷವಾಗಿ ಮಹಿಳೆಯರು ಬಂದು ಪುಸ್ತಕಗಳನ್ನು ಓದುವ ರೀತಿಯಲ್ಲಿ ತಮ್ಮ ತಮ್ಮ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ತಾವುಗಳು ಪ್ರಯತ್ನಿಸಬೇಕು. ಅಂದಾಗ ಅರಿವು ಕೇಂದ್ರಗಳು ಜನ ಸ್ನೆಹಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದು ಎಂದರುಸಭೆಯಲ್ಲಿ ಜಿಲ್ಲಾ ಸಂಘದ ಮಾಜಿ ಗೌರವ ಅಧ್ಯಕ್ಷ ಪಿ ಸಿ ಬಿರಾದಾರ, ಗೌರವ ಸಲಹೆಗಾರ ರಾಮನಗೌಡ ಬಿರಾದಾರ ಸಾಸನೂರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಉಕುಮನಾಳ, ಖಜಾಂಚಿ ಶ್ರೀಮತಿ ಮುಕ್ತಬಾಯಿ ಹೆಗಡೆ, ಸಹ ಕಾರ್ಯದರ್ಶಿ ಶ್ರೀಮತಿ…
