ದೇವರಹಿಪ್ಪರಗಿ: ಹಡಪದ ಅಪ್ಪಣ್ಣ ನವರು ೧೨ ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ ಸಾರಿದ ಬಸವಾದಿ ಶರಣರಲ್ಲಿ ಪ್ರಮುಖರಾಗಿದ್ದಾರೆ ಎಂದು ಬಸವ ಶರಣ ಸಂಗಮ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ತಡವಲ್ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಭಾನುವಾರ ಜರುಗಿದ ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಬಸವಣ್ಣನ ಬಾಲ್ಯದ ಒಡನಾಡಿಗಳಾಗಿ, ಕಲ್ಯಾಣದ ಅನುಭವ ಮಂಟಪದಲ್ಲಿ ಆರಂಭದಲ್ಲಿ ಸಭಿಕರಾಗಿ ನಂತರ ತಾಂಬೂಲ ಸೇವೆಯನ್ನು ಒದಗಿಸುವ ಸೇವೆ ಮಾಡಿ, ತದನಂತರ ಬಸವಣ್ಣನಿಗೆ ಪ್ರಧಾನಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಅಪ್ಪಣ್ಣನವರದಾಗಿದೆ. ಅಂತೆಯೇ ಬಸವಣ್ಣನವರು ಸಹ ಇವರ ಕಾರ್ಯಕ್ಷಮತೆಯನ್ನು ಮೆಚ್ಚಿ ಯಾರೇ ಬಂದರು ಮೊದಲು ಅಪ್ಪಣ್ಣನವರನ್ನು ನೋಡಿಕೊಂಡು ಬನ್ನಿ ಎಂದು ಕಳಿಸುತ್ತಿದ್ದರಂತೆ, ಇಂತಹ ಮಹಾನ್ ಶರಣ ಅಪ್ಪಣ್ಣ ೨೫೦ ಕ್ಕಿಂತಲೂ ಹೆಚ್ಚು ವಚನಗಳನ್ನು ಬಸವಪ್ರೀಯ ಕೂಡಲ ಚೆನ್ನಬಸವಣ್ಣ ಎಂಬ ಅಂಕಿತನಾಮದಿಂದ ರಚಿಸಿ ವಚನಸಾರದ ಭಾಗವಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಮಾತನಾಡಿದರು.
ಶಿರಸ್ತೇದಾರ ಸುರೇಶ ಮ್ಯಾಗೇರಿ, ಕಂದಾಯ ನಿರೀಕ್ಷಕ ಸಂಗಮೇಶ ಗ್ವಾಳೇದ, ಸಿಬ್ಬಂದಿ ರಾಜು ಕಂಠಿ, ಅಪ್ಪಣ್ಣ ಸಮಾಜ ಸೇವಾಸಂಘದ ಅಧ್ಯಕ್ಷ ಸಾಯಬಣ್ಣ ಹಡಪದ, ಸೋಮರಾಯ ಹಡಪದ, ನಾಗರಾಜ್ ಹಳಿಮನಿ, ದೇವಾನಂದ ಹಳಿಮನಿ, ಶಂಕರ ಹಡಪದ, ಶಿವಾನಂದ ಹಡಪದ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

