ಮುದ್ದೇಬಿಹಾಳ: ಕರ್ನಾಟಕ ಮಾಧ್ಯಮ ಒಕ್ಕೂಟದ ತಾಲೂಕು ಅಧ್ಯಕ್ಷರಾಗಿ ಸಾಹಿತಿ, ಹಿರಿಯ ಪತ್ರಕರ್ತ ಪರಶುರಾಮ ಕೊಣ್ಣೂರ ಅವರನ್ನು ಸರ್ವಾನುಮತದಿಂದ ಸರ್ವ ಸದಸ್ಯರ ಸಮ್ಮುಖದಲ್ಲಿ ಸಂಘದ ರಾಜ್ಯಧ್ಯಕ್ಷ ನಾರಾಯಣ ಮಾಯಾಚಾರಿ ಘೋಷಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಕರ್ನಾಟಕ ಮಾಧ್ಯಮ ಒಕ್ಕೂಟದ ತಾಲೂಕು ಘಟಕದ ಸಭೆಯಲ್ಲಿ ಈ ಘೋಷಣೆ ಮಾಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ಶ್ರೇಷ್ಠವಾಗಿದೆ. ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪತ್ರಕರ್ತರ ಶ್ರಮ ದೊಡ್ಡದು. ಜನರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಮಾಧ್ಯಮ ಮತ್ತು ಪತ್ರಕರ್ತರು, ತಮ್ಮದೇ ಆದ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು, ಸಾಮಾಜದ ಸ್ವಾಸ್ತ್ಯ ಕಾಪಾಡುತ್ತಿದ್ದಾರೆ. ಹೀಗಾಗಿ ಸಂಘದ ಅಧ್ಯಕ್ಷರು ಸದಸ್ಯರ ಹಿತಾಸಕ್ತಿ ಕಾಪಾಡಿಕೊಂಡು ಹೋಗಬೇಕು. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಕೊಡಿಸುವ ಪ್ರಾಮಾಣಿಕ ಜವಾಬ್ದಾರಿ ಇದೆ ಎಂದರು.
ಈ ವೇಳೆ ನೂತನ ಅಧ್ಯಕ್ಷ ಪರಶುರಾಮ ಕೊಣ್ಣೂರ ಅವರು ಮಾತನಾಡಿ, ಪತ್ರಕರ್ತರ ಸಂಘಗಳು ಅನ್ಯಾಯಕ್ಕೊಳಗಾದ, ದೌರ್ಜನ್ಯಕ್ಕೊಳಗಾದ ಪತ್ರಕರ್ತರ ಪರ ಧ್ವನಿ ಎತ್ತುವ ಮೂಲಕ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೇ ವಿನಃ ರಾಜಕಾರಿಣಿಗಳ ಕೈಗೊಂಬೆಯಾಗಿ ಇನ್ನೊಬ್ಬ ಪತ್ರಕರ್ತನ್ನು ತುಳಿಯುವಂತ ಕೆಟ್ಟ ಪ್ರವೃತ್ತಿ ಹೊಂದಿರಬಾರದು. ಪತ್ರಕರ್ತರು ಯಾವುದೇ ಸಂದರ್ಭದಲ್ಲಿ ವೃತ್ತಿಯ ಮೌಲ್ಯಗಳಿಗೆ ಕಳಂಕ ಬಾರದಂತೆ ನಡೆದುಕೊಳ್ಳಬೇಕು. ಪ್ರಜಾಪ್ರಭುತ್ವ ರಕ್ಷಣೆಗೆ ಎಲ್ಲ ರಂಗಗಳಂತೆ ನಮ್ಮ ಪತ್ರಕರ್ತರು ತಮ್ಮ ಬರವಣಿಗೆ ಮೂಲಕ ಶ್ರಮಿಸಬೇಕು ಎಂದರು.
ಪತ್ರಕರ್ತ ಶಿವುಕುಮಾರ ಶಾರದಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಯೂನೂಸ್ ಮೂಲಿಮನಿ, ಜಿಲಾನಿ ಮಕಾಂದರ, ಸಚಿನ್ ಚಲವಾದಿ, ರವಿ ಕುಂಬಾರ, ಬಸವರಾಜ ಯಂಕಂಚಿ, ಚಂದ್ರು ಮೂಕಿಹಾಳ, ಶ್ರೀಶೈಲ್ ಪೂಜಾರಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

