ಗ್ರಂಥಾಲಯ ನೌಕರರ ಮೇಲ್ವಿಚಾರಕರ ಸಂಘದ ತಾಲೂಕು ಗೌರವಾಧ್ಯಕ್ಷರಾಗಿ ಗುರು ಆರ್. ಹಿರೇಮಠ ಆಯ್ಕೆ
ಸಿಂದಗಿ: ಗ್ರಂಥಾಲಯಗಳನ್ನು ಅರಿವು ಕೇಂದ್ರಗಳಾಗಿ ಮಾರ್ಪಡಿಸಿ ಮೇಲ್ದರ್ಜೆಗೆ ಏರಿಸುವ ಮೂಲಕ ಅವುಗಳ ಉನ್ನತಿಗೆ ಸರ್ಕಾರ ಶ್ರಮ ವಹಿಸುತ್ತಿದೆ. ಅದರ ಫಲವಾಗಿ ಇಂದು ವಿಧ್ಯಾರ್ಥಿಗಳು ಗ್ರಂಥಾಲಯಗಳತ್ತ ಮುಖಮಾಡಿದ್ದಾರೆ ಎಂದು ಗ್ರಂಥಾಲಯ ನೌಕರರ ಮೇಲ್ವಿಚಾರಕರ ಸಂಘದ ಜಿಲ್ಲಾ ಗೌರವಧ್ಯಕ್ಷ ಮಹಾಂತಗೌಡ ಕಾಶಿನಕುಂಟಿ ಹೇಳಿದರು.
ಅವರು ಇಲ್ಲಿನ ಶಾಖಾ ಗ್ರಂಥಾಲಯದಲ್ಲಿ ನಡೆದ ಗ್ರಂಥಾಲಯ ನೌಕರರ ರಾಜ್ಯ ಅಧ್ಯಕ್ಷರಾದ ಸತ್ಯನಾರಾಯಣ ಅವರ ಮುಖಂಡತ್ವದ ಸಂಘದ ಮೇಲ್ವಿಚಾರಕರ ಸಭೆಯಲ್ಲಿ ಮಾತನಾಡಿದರು.
ಗ್ರಂಥಾಲಯಗಳಿಗೆ ಮಕ್ಕಳು, ಹಿರಿಯರು ವಿಶೇಷವಾಗಿ ಮಹಿಳೆಯರು ಬಂದು ಪುಸ್ತಕಗಳನ್ನು ಓದುವ ರೀತಿಯಲ್ಲಿ ತಮ್ಮ ತಮ್ಮ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ತಾವುಗಳು ಪ್ರಯತ್ನಿಸಬೇಕು. ಅಂದಾಗ ಅರಿವು ಕೇಂದ್ರಗಳು ಜನ ಸ್ನೆಹಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದು ಎಂದರು
ಸಭೆಯಲ್ಲಿ ಜಿಲ್ಲಾ ಸಂಘದ ಮಾಜಿ ಗೌರವ ಅಧ್ಯಕ್ಷ ಪಿ ಸಿ ಬಿರಾದಾರ, ಗೌರವ ಸಲಹೆಗಾರ ರಾಮನಗೌಡ ಬಿರಾದಾರ ಸಾಸನೂರ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಉಕುಮನಾಳ, ಖಜಾಂಚಿ ಶ್ರೀಮತಿ ಮುಕ್ತಬಾಯಿ ಹೆಗಡೆ, ಸಹ ಕಾರ್ಯದರ್ಶಿ ಶ್ರೀಮತಿ ನಾಗರತ್ನ ಅತನೂರ, ಬಸವರಾಜ ಬಿರಾದಾರ ಕನ್ನಾಳ , ಬಾಗೇವಾಡಿ ತಾಲೂಕು ಅಧ್ಯಕ್ಷ ಭೀಮಸಿಂಗ್ ರಾಠೋಡ ಸೇರಿದಂತೆ ಅನೇಕ ಹಿರಿಯರು ಉಪಸ್ಥಿತರಿದ್ದರು,
ಈ ಸಂದರ್ಭದಲ್ಲಿ ಅಖಂಡ ಸಿಂದಗಿ ತಾಲೂಕಿನ (ಸಿಂದಗಿ ಆಲಮೇಲ ದೇವರಹಿಪ್ಪರಗಿ) ಮೇಲ್ವಿಚಾರಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು
ಅಖಂಡ ಸಿಂದಗಿ ತಾಲೂಕಿನ ನೂತನ ಗೌರವಾಧ್ಯಕ್ಷರಾಗಿ ಗುರು ಆರ್. ಹಿರೇಮಠ ದೇವನಗಾಂವ, ಅಧ್ಯಕ್ಷರಾಗಿ ಸಂತೋಷ್ ಭಜಂತ್ರಿ ಗುಬ್ಬೇವಾಡ, ಉಪಾಧ್ಯಕ್ಷರಾಗಿ ಗೌಡಪ್ಪಗೌಡ ಬಿರಾದಾರ ಬಗಲೂರ, ಕಾರ್ಯದರ್ಶಿಯಾಗಿ ಶಂಕರ ಅಗಸರ ಬ್ಯಾಕೋಡ, ಖಜಾಂಚಿಯಾಗಿ ಶ್ರೀಮತಿ ಸುಜಾತ ಚಟ್ಟರಕಿ, ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಕುಂಬಾರ ಹಿಟ್ನಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್.ಎಂ. ಮಠ, ಮಲ್ಲಯ್ಯ ಮಠ ರಾಂಪೂರ, ನಿಂಗಣ್ಣ ಯಳಮೇಲಿ, ಪಿ.ಬಿ. ಬೋಗುಂಡಿ, ಎನ್.ಎಸ್.ಕುಲಕರ್ಣಿ, ಎ.ವೈ.ಬನಸೋಡೆ, ಸುನಿತಾ ಪಾವುಟೆ, ಆರ್. ಎಸ್ ಬಿರಾದಾರ ಮಣ್ಣೂರ್, ಎಸ್ ಎಸ್ ಬೊಮ್ಮನಹಳ್ಳಿ, ಲಕ್ಷ್ಮಣ ಪಾತ್ರೋಟ, ಚನ್ನು ಹಿರೇಮಠ ಎಸ್ ಎಸ್ ಯತ್ನಾಳ, ಶರಣಗೌಡ ಬೆಕಿನಾಳ ಇದ್ದರು.

