ದೇವರಹಿಪ್ಪರಗಿ: ಸರಕಾರಿ ಶಾಲೆಗಳ ಅಭಿವೃದ್ದಿಯಲ್ಲಿ ಸಮುದಾಯದ ಪಾತ್ರ ಮತ್ತು ಸಹಕಾರ ತುಂಬಾ ಮಹತ್ವದ್ದಾಗಿದೆ. ಸಹಯೋಗ ಹಾಗೂ ಪ್ರೋತ್ಸಾಹದ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸೋಣ ಎಂದು ಹಿರಿಯ ಶಿಕ್ಷಣ ಪ್ರೇಮಿ ಮಲ್ಲಪ್ಪ ದುದ್ದಗಿ ಹೇಳಿದರು.
ತಾಲ್ಲೂಕಿನ ಗಂಗನಳ್ಳಿ ಗ್ರಾಮದ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ಸದಾಶಿವ ದುದ್ದಗಿ ಇವರು ಕೊಡುಗೆಯಾಗಿ ನೀಡಿದ ಗುಣಮಟ್ಟದ ೪೦೦ ಶಾಲಾ ಬ್ಯಾಗುಗಳನ್ನು ಮಕ್ಕಳಿಗೆ ವಿತರಿಸಿ ಮಾತನಾಡಿದರು.
ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಸರಕಾರಿ ಶಾಲೆಗಳಿಗೆ ತೊಂದರೆಯಾಗಬಾರದು. ಅದಕ್ಕಾಗಿ ಸರಕಾರಿ ಶಾಲಾ ಮಕ್ಕಳಿಗೆ ಬ್ಯಾಗ ವಿತರಿಸಲಾಗುತ್ತಿದೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ವಾಯ್.ಎಮ್. ಹಿರೇಕುರುಬರ, ಅಕ್ಷಯ ಕೇರಿ ಮಾತನಾಡಿ, ಶಿಕ್ಷಣ ಪ್ರೇಮಿ ಮಲ್ಲಪ್ಪ ದುದ್ದಗಿ ಹಾಗೂ ಸದಾಶಿವ ದುದ್ದಗಿಯವರ ಈ ಶೈಕ್ಷಣಿಕ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ನಂತರ ಎಸ್‌ಡಿಎಮ್‌ಸಿ ಅಧ್ಯಕ್ಷ ಬಸವರಾಜ ಈಶ್ವರಪ್ಪಗೋಳ ಅವರ ನೇತೃತ್ವದಲ್ಲಿ ಬ್ಯಾಗುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದಾನಿ ಸದಾಶಿವ ದುದ್ದಗಿ ಇವರನ್ನು ಸನ್ಮಾನಿಸಲಾಯಿತು.
ಪ್ರೌಢಶಾಲಾ ಮುಖ್ಯಶಿಕ್ಷಕ ಬಿ.ಜಿ.ಸಜ್ಜನ, ಪ್ರಾಥಮಿಕ ಶಾಲಾ ಪ್ರಭಾರಿ ಮುಖ್ಯಶಿಕ್ಷಕ ಶ್ರೀಶೈಲ ಕುದರಿ, ಬಸವನಗರ ವಸ್ತಿ ಶಾಲೆಯ ಮುಖ್ಯಶಿಕ್ಷಕ ಜಗದೀಶ್, ನಿವೃತ್ತಶಿಕ್ಷಕ ಬಸವಂತರಾಯ ಈಶ್ವರಪ್ಪಗೋಳ, ಕಾಶೀನಾಥ ಜೇವೂರ, ಪ್ರೌಢಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಬಸಯ್ಯ ಹಿರೇಮಠ, ಸಿಆರ್‌ಪಿ ಕಸ್ತೂರಿ ಬಡದಾಳ, ಕೆ.ಆರ್.ಜಾಧವ, ಎಸ್.ಕೆ.ಕೊಲ್ಹಾರ್, ಅಕ್ಕಮಹಾದೇವಿ ನಿಂಬರಗಿಮಠ, ಜಯಶ್ರೀ ಕೋಟಗೊಂಡ, ಶಿಲ್ಪಾ ಲೋಗಾವಿ, ಜಗದೇವಿ ದುದ್ದಗಿ, ಮಮ್ತಾಜ್‌ಬೇಗಂ ಕೊರಬು ಸೇರಿದಂತೆ ಗ್ರಾಮಸ್ಥರು, ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
ಶಾಲಾ ಮಕ್ಕಳಿಗೆ ಸದಾಶಿವ ದುದ್ದಗಿ ಯಿಂದ ಬ್ಯಾಗುಗಳ ಉಚಿತ ಕೊಡುಗೆ
Related Posts
Add A Comment

