ವಿಜಯಪುರ: ಕನ್ನಡರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಸಂಗಮೇಶ ದಾಶ್ಯಾಳ ಮಾತನಾಡಿ, ಕರ್ನಾಟಕ ಕನ್ನಡಿಗರು ಸಾರ್ವಬೌಮ ಹೌದೂ ಅಲ್ಲಾ? ಎಂಬುವ ವಿಷಯ ಕನ್ನಡಿಗರಿಗೆ ತಿಳಿಯದಂತಾಗಿದೆ, ಹೊರ ರಾಜ್ಯದಿಂದ ಬಂದು ಕನ್ನಡದ ನೆಲ,ಜಲ, ಮೂಲಭೂತ ಸೌಕಯ್ಯಗಳನ್ನು ಪಡೆದುಕೊಂಡು ಆದರೆ ಕನ್ನಡಿಗನಿಗೆ ಉದ್ಯೋಗ ಕೊಡುವದಿಲ್ಲ.ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅದಿವೇಶನದಲ್ಲಿ ಚರ್ಚೆಗೆ ತೆಗೆದುಕೊಂಡು ಮೀಸಲಾತಿಯ ವಿದೇಯಕ ಜಾರಿಗೊಳಿಸಿ ನಂತರ ಈ ಆದೇಶವನ್ನು ತಡೆಹಿಡಿಯಲಾಯಿತು. ಹೀಗಾದರೆ ಕನ್ನಡಿಗ ಹೇಗೆ ಸಾರ್ವಭೌಮನಾಗುತ್ತಾನೆ? ಪ್ರತಿಯೊಂದು ಖಾಸಗಿ ಕಾರ್ಖಾನೆ ಹಾಗೂ ದೊಡ್ಡ ದೊಡ್ಡ ಅಂಗಡಿ ಮುಗ್ಗಟಗಳನ್ನು ಹೊರ ರಾಜ್ಯದಿಂದ ಬಂದು ನೆಲೆ ಊರಿ ನಮ್ಮ ಕನ್ನಡಿಗರಿಗೆ ಕೆಲಸಗಳನ್ನು ಕೊಡದೇ ತಮ್ಮ ರಾಜ್ಯದವರನ್ನು ತೆಗೆದುಕೊಂಡು ಬಂದು ಕನ್ನಡಿಗರಿಗೆ ಕೆಲಸ ಇಲ್ಲದಂತೆ ಮಾಡಿದ್ದಾರೆ. ಆದರಿಂದ ಕನ್ನಡರಿಗೆ ಪ್ರತಿ ಶತ ೭೦ % ಭಾಗ ಉದ್ಯೋಗ ಮೀಸಲಾತಿಯನ್ನು ಸರ್ಕಾರದ ನೀತಿ ನಿಯಮದ ಅಡಿಯಲ್ಲಿ ಉದ್ಯೋಗ ಭದ್ರತೆಯನ್ನು ಒದಗಿಸಿಕೊಡಬೇಕು. ಒಂದು ವೇಳೆ ಮೀಸಲಾತಿಯ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದೇ ಹೋದಲ್ಲಿ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿ.ಬಿ.ಇಂಗಳಗಿ, ಮುಕದಸ್ ಇನಾಮದಾರ, ರಿಯಾಜ ಪಾಂಡು, ಮಹೇಶ ನಾಯಕ, ಮೀನಾ ಕುಂದನಗಾರ, ಸುಜಾತಾ ಪೂಜಾರಿ, ಮಲ್ಲಮ್ಮ ಲಮಾಣಿ, ಬೇಬಿ ತಳವಾರ, ರೇಣುಕಾ ಅಗಸರ, ಗಾಯತ್ರಿ ವನಕನಳ್ಳಿ, ಕವಿತಾ ಖಿಲಾರಿ, ಇಸ್ಮಾಯಿಲ ಕುಣಬಿ, ನಿಂಗರಾಜ ಗೊರಗುಂಡಗಿ, ಬಾಪುಗೌಡ ಪಾಟೀಲ, ಸಿದಾಮ ಅವಟಿ, ಸಂತೋಷ ಮನಗೂಳಿ, ಖಾಜಾಸಾಬ ಪಾಂಡು, ಬಸವರಾಜ ಸಿಂಗನಳ್ಳಿ, ಪರಶುರಾಮ ಬಂಡಿವಡ್ಡರ, ಶಿವಯ್ಯ ಬರಗಿ, ಮಹಾಂತೇಶ ಇಂಗಳೇಶ್ವರ, ರಾಜು ಮೂಲಿಮನಿ, ನಾಗಣ್ಣ ಪಡೇಕನೂರ, ಸೋಮಲಿಂಗ ನಾಯ್ಕೋಡಿ, ಅರ್ಜುನ ಧರಿ, ರುದ್ರೇಶ ಮುರಾಳ, ಆನಂದ ಹೊನ್ನೂರ ಇನ್ನಿತರರು ಇದ್ದರು.
Subscribe to Updates
Get the latest creative news from FooBar about art, design and business.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವಂತೆ ಜಯ ಕರ್ನಾಟಕ ಆಗ್ರಹ
Related Posts
Add A Comment

