Author: editor.udayarashmi@gmail.com

‌ವಿಜಯಪುರ: ಪ್ರತೀ ವರ್ಷದಂತೆ ಈ ವರ್ಷವೂ ನಗರದ ಇಬ್ರಾಹಿಂಪುರದಲ್ಲಿ ಮಾತಾ ಶ್ರೀ ಮರಗಮ್ಮ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.ಜಾತ್ರೆಯ ಪ್ರಯುಕ್ತ ಶ್ರೀ ಮರಗಮ್ಮದೇವಿ ದೇವಸ್ಥಾನಕ್ಕೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಿ ಮುಂಭಾಗದಲ್ಲಿ ಭವ್ಯ ಶಾಮೀಯಾನ ನಿರ್ಮಿಸಿ ಬಾಳೆಗಿಡ, ತಳಿರು-ಹೂವಿನ ತೋರಣ ಕಟ್ಟಲಾಗಿತ್ತು.ದೇವಿಗೆ ಹೂವಿನದಂಡೆ, ಹಾರಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.ಬೆಳಗ್ಗೆ ದೇವಿಗೆ ಅಭಿಷೇಕ, ಆರತಿ, ವಿಶೇಷ ಪೂಜೆ ನಡೆಯಿತು. ದೇವಿಯ ದರ್ಶನಕ್ಕೆ ಜಿಟಿ-ಜಿಟಿ ಮಳೆಯ ನಡುವೆಯೇ ಭಕ್ತರು ಬೆಳಗಿನ ಜಾವದಿಂದಲೇ ದೇವಸ್ಥಾನಕ್ಕೆ ತೆರಳುತ್ತಿದ್ದುದು ಕಂಡುಬಂತು. ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿತ್ತು.ಇಬ್ರಾಹಿಂಪುರ ಹಾಗೂ ಸುತ್ತಮುತ್ತಲಿನ ವಿವಿಧ ಬಡಾವಣೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವಿಗೆ ನೀರೆರೆದು ಹೂವು, ಕಾಯಿ, ನೈವೇದ್ಯ ಸಮರ್ಪಿಸಿ ಭಕ್ತಿಭಾವದಿಂದ ನಮಿಸಿದರು.ಮಧ್ಯಾಹ್ನ ಗ್ರಾಮದಲ್ಲಿ ಡೊಳ್ಳು ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಮರಗಮ್ಮ ದೇವಿಯ ಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಿತು.ಪಲ್ಲಕ್ಕಿ ಉತ್ಸವದ ಬಳಿಕ ಸಂಜೆ ಮರಗಮ್ಮ ದೇವಿ ದೇವಸ್ಥಾನದ ಮುಂದೆ ಪ್ರತೀ ವರ್ಷದ…

Read More

ಆಮ್ ಆದ್ಮಿ ಪಕ್ಷದ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆರೋಪ ವಿಜಯಪುರ: ಬಜೆಟ್ 2024 ” ಪ್ರಧಾನ ಮಂತ್ರಿ ಸರ್ಕಾರ ಬಚಾವೋ” ಬಜೆಟ್ ಎಂದು ಆಮ್ ಆದ್ಮಿ ಪಕ್ಷ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆರೋಪ ಮಾಡಿದ್ದಾರೆ.ವಿಫಲವಾದ ಸರ್ಕಾರದ ವಿಫಲ ಹಣಕಾಸು ಸಚಿವರಿಂದ ಪ್ರಸ್ತುತಪಡಿಸಲಾದ ಶೂನ್ಯ ವಾರಂಟಿಯೊಂದಿಗೆ ಈ ಬಜೆಟ್ ಸಂಪೂರ್ಣ ವಿಫಲವಾಗಿದೆ. ನಿರುದ್ಯೋಗ, ಏರುತ್ತಿರುವ ಬೆಲೆಗಳು ಮತ್ತು ಹೆಚ್ಚುತ್ತಿರುವ ಹಣದುಬ್ಬರದಂತಹ ತುರ್ತು ಸಮಸ್ಯೆಗಳನ್ನು ನಿಭಾಯಿಸುವ ಬದಲು, ಬಿಜೆಪಿಯು ತನ್ನ ಸಮ್ಮಿಶ್ರ ಪಾಲುದಾರರಿಗೆ ಲಂಚ ನೀಡಲು ಈ ಬಜೆಟ್ ರೂಪಿಸಿದೆ. ಬಜೆಟ್ 2024 ಒಕ್ಕೂಟ ವ್ಯವಸ್ಥೆಯ ವಿರೋಧಿ, ಕರ್ನಾಟಕ ವಿರೋಧಿ ಬಜೆಟ್ ಆಗಿದೆ.ಬಿಜೆಪಿಯು ತನ್ನ ಸರ್ಕಾರವನ್ನು ಉಳಿಸಲು ಬಯಸುತ್ತಿದೆ ಮತ್ತು ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಜೆಟ್‌ನ ದೊಡ್ಡ ಮೊತ್ತವನ್ನು ನೀಡುತ್ತಿದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.ಆದರೆ ಕರ್ನಾಟಕದ ತಪ್ಪೇನು? ನಾವು ಅತಿ ಹೆಚ್ಚು ತೆರಿಗೆ ಕಟ್ಟುತ್ತೇವೆ. ನಾವು ಕೊಡುಗೆ ನೀಡುವುದರ ಬದಲಾಗಿ ನಾವು ಏನು ಪಡೆದುಕೊಂಡಿದ್ದೇವೆ?ಬಜೆಟ್‌ನಲ್ಲಿ ಕರ್ನಾಟಕದ ಬಗ್ಗೆ ಒಮ್ಮೆಯಾದರೂ ಪ್ರಸ್ತಾಪಿಸಲಾಗಿದೆಯೇ? ಬಿಜೆಪಿಯವರು…

Read More

” ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಸಂಪೂರ್ಣ ಜನವಿರೋಧಿಯಾಗಿದ್ದು, ಯಾವುದೇ ಅಭಿವೃದ್ಧಿ ಯೋಜನೆಗೆ ಮಹತ್ವ ನೀಡಿಲ್ಲ. ಕಳೆದ ಹತ್ತು ವರ್ಷಗಳಿಂದ ಕೇವಲ ಬಜೆಟ್ ಮಂಡನೆಯಾಗುತ್ತಿದೆ ಅಷ್ಟೇ, ಅದರ ಅನುಷ್ಠಾನವಾಗುತ್ತಿಲ್ಲ. ಜನರಿಗೆ ಕೇವಲ ಮಾತಿನಿಂದಲೇ ಮರಳು ಮಾಡುತ್ತ ಮೋಡಿ ಮಾಡುತ್ತಿದ್ದಾರೆ. ಮದ್ಯಮ ಕೆಳವರ್ಗದ ಸಂಪೂರ್ಣ ವಿರೋಧಿ ಬಜೆಟ್ ಆಗಿದ್ದು, ಶ್ರೀಮಂತರ ಪರವಾಗಿದೆ. ಇವರ ಒಂದು ಯೋಜನೆಗಳು ಪೂರ್ಣಗೊಂಡಿಲ್ಲ. ಇರುವ ಯೋಜನೆಗಳೆಲ್ಲ ಕಳಪೆ ಮಟ್ಟದ್ದಾಗಿದ್ದು, ಇದ್ದ ವಸ್ತುಗಳಿಗೆಲ್ಲ ಜಿಎಸ್‌ಟಿ ಮೂಲಕ ಬೆಲೆ ಹೆಚ್ಚಳ ಮಾಡಿದ್ದು, ಜನಸಮಾನ್ಯರಿಗೆ ಹೊರೆಯಾಗಿದೆ. ವಿಶೇಷವಾಗಿ ನಮ್ಮ ಕರ್ನಾಟಕಕ್ಕೆ ಯಾವುದೇ ಹೇಳಿಕೊಳ್ಳುವಂತ ಯೋಜನೆಗಳನ್ನು ನೀಡದೆ ಮಲತಾಯಿ ಧೋರಣೆ ಮುಂದುವರೆಸಿದ್ದಾರೆ.” – ಅಬ್ದುಲ್‌ಹಮೀದ ಮುಶ್ರೀಫ್ಕಾಂಗ್ರೆಸ್ ಮುಖಂಡರು, ವಿಜಯಪುರ

Read More

” ಪ್ರಸ್ತುತ ಬಜೆಟ್ಟಿನಲ್ಲಿ ಮೀನುಗಾರಿಕಾ ಇಲಾಖೆಗೆ ೨೫೮೪. ೫೦ ಕೋಟಿ ರೂ ಮೀಸಲಾಗಿಟ್ಟಿರುವುದು ಸ್ವಾಗತಾರ್ಹ.ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಆಕ್ವಾಕಲ್ಚರ್ ಉತ್ಪಾದನೆಯನ್ನು ಹೆಚ್ಚಿಸಲು, ರಫ್ತುಗಳನ್ನು ೧ ಲಕ್ಷ ಕೋಟಿಗೆ ದ್ವಿಗುಣಗೊಳಿಸಲು ಮತ್ತು ೫೫ ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮಾಡಿರುವ ಪ್ರಯತ್ನ , ಹವಾಮಾನ ಸ್ಥಿತಿಸ್ಥಾಪಕ ಚಟುವಟಿಕೆಗಳನ್ನು ಉತ್ತೇಜಿಸಲು ನೀಲಿ ಆರ್ಥಿಕತೆ ೨.0 ಆರಂಭಿಸುವ ಯೋಜನೆ, ಸಮಗ್ರ ಮತ್ತು ಬಹುವಲಯ ವಿಧಾನದೊಂದಿಗೆ ಕರಾವಳಿ ಜಲಕೃಷಿ ಮತ್ತು ಮಾರಿಕಲ್ಚರ್ ಅಭಿವೃದ್ಧಿ ಮಾಡುವ ಯೋಜನೆಗಳು ಶ್ಲಾಘನೀಯ.ಮತ್ತೊಮ್ಮೆ ಮೀನುಗಾರರ ಆರೋಗ್ಯ ವಿಮೆ ಮತ್ತು ಮೀನುಗಾರಿಕೆಯ ಸಂಧರ್ಭದಲ್ಲಿ ಆಗುವ ಅವಘಡ ಅಪಘಾತಗಳಿಗೆ ಪರಿಹಾರ ಪ್ರಸ್ತಾಪಿಸದೆ ಇರುವುದು ಬೇಸರ ತಂದಿದೆ.” ಡಾ.ಗೌತಮ್ ಆರ್ ಚೌಧರಿರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ಸಂಘ

Read More

” ಕೇಂದ್ರ ವಿತ್ತ ಸಚಿವೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಬಡವರ ಹಿತ, ಯುವಕರಿಗೆ ಆರ್ಥಿಕ ಸಬಲೀಕರಣ, ರೈತ ಹಿತರಕ್ಷಣೆಯ ತ್ರಿವೇಣಿ ಸಂಗಮವಾಗಿದೆ.ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ೩ ಕೋಟಿ ಮನೆ ನಿರ್ಮಾಣ ಬಡವರಿಗೆ ಸ್ವಂತ ಸೂರಿನ ಕನಸನ್ನು ನನಸು ಮಾಡಿದರೆ, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಮೂಲಕ ಉಚಿತ ವಿದ್ಯುತ್ ಪ್ರತಿಯೊಬ್ಬ ನಿವಾಸಿಗಳಿಗೆ ವರದಾನವಾಗಿದೆ.ಮಹಿಳಾ ಕಲ್ಯಾಣಕ್ಕೆ ೩ ಲಕ್ಷ ಕೋಟಿ ರೂ.ಗಳ ಬೃಹತ್ ಅನುದಾನ, ಸಣ್ಣ ಕೈಗಾರಿಕಾ ಸಾಲ ಖಾತ್ರಿ ಯೋಜನೆ ಹಾಗೂ ಮುದ್ರಾ ಸಾಲ ಯೋಜನೆಯನ್ನು ೨೦ ಲಕ್ಷಕ್ಕೆ ಏರಿಕೆ, ೩೦ ಲಕ್ಷ ಯುವಕರಿಗೆ ಉದ್ಯೋಗ ಭರವಸೆ ಹೀಗೆ ಅನೇಕ ಮಹತ್ವದ ಯೋಜನೆಗಳ‌ ಮೂಲಕ ಜನಸ್ನೇಹಿ, ಜನರ ಪ್ರಗತಿಗೆ ಪೂರಕವಾದ ಬಜೆಟ್ ಮಂಡನೆಯಾಗಿದೆ.” – ಉಮೇಶ ಕಾರಜೋಳರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಎಸ್.ಸಿ. ಮೋರ್ಚಾ

Read More

ತ್ವರಿತಗತಿಯಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸುವ ಕುರಿತಂತೆ ಅಧಿವೇಶನದಲ್ಲಿ ಪ್ರಶ್ನೆ ವಿಜಯಪುರ: ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ತ್ವರಿತಗತಿಯಲ್ಲಿ ಈ ಯೋಜನೆ ಪೂರ್ಣಗೊಳಿಸುವ ಕುರಿತಂತೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು, ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಬುಧವಾರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ೧,೫೮೧ ಮೂಲಕ ಸರ್ಕಾರದ ಗಮನಸೆಳೆದರು.೧೯೬೩ ರಲ್ಲಿ ದಿ.ಲಾಲ್ ಬಹದ್ದೂರ್ ಶಾಸ್ತಿç ಅವರಿಂದ ಪ್ರಾರಂಭವಾದ ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗೆ, ಕಳೆದ ಆರು ದಶಕಗಳಿಂದ ಅನ್ಯಾಯ ಆಗುತ್ತಲೇ ಬಂದಿದೆ. ಇದರಿಂದ ಉತ್ತರ ಕರ್ನಾಟಕ ಭಾಗ ನೀರಾವರಿಯಿಂದ ವಂಚಿತವಾಗಿದೆ. ಇದು ನಮ್ಮ ಭಾಗದ ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಕೃಷ್ಣಾ ನದಿಯಿಂದ ಶೇ ೬೮ ರಷ್ಟು ನೀರಾವರಿ ವ್ಯವಸ್ಥೆ ಕಲ್ಪಿಸುವ ದೊಡ್ಡ ಯೋಜನೆಯಾದರೆ, ಕಾವೇರಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದು ಮತ್ತು ಕೇವಲ ಶೇ ೧೨ ರಷ್ಟು ಮಾತ್ರ ನೀರಾವರಿ ವ್ಯವಸ್ಥೆಯಿದೆ. ಆದರೆ, ಅಧಿಕಾರಕ್ಕೆ ಬಂದ ಪ್ರತಿಯೊಂದು…

Read More

ದೇವರಹಿಪ್ಪರಗಿ: ಅಪ್ಪಣ್ಣ ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿ, ಸಮಾನತೆಗಾಗಿ ದುಡಿದ ಶರಣರಾಗಿದ್ದಾರೆ ಎಂದು ಸ್ಥಳೀಯ ಗದ್ದಿಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ಭಾನುವಾರ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಡಿಯಲ್ಲಿ ಆಚರಿಸಲಾದ ಅಪ್ಪಣ್ಣ ಜಯಂತಿಯ ಸಾನಿಧ್ಯ ವಹಿಸಿ ಮಾತನಾಡಿದರು.ಬಸವಣ್ಣನವರ ನೇತೃತ್ವದಲ್ಲಿ ೧೨ ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯಲ್ಲಿ ಅಪ್ಪಣ್ಣ ಪ್ರಮುಖ ಪಾತ್ರ ವಹಿಸಿದ್ದರು. ಅವರ ತತ್ವ ಆದರ್ಶಗಳು ಇಂದಿಗೂ ಜನಮಾನಸದಲ್ಲಿವೆ ಎಂದರು.ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಬಿ.ಎಲ್(ಚಬನೂರ) ಮಾತನಾಡಿ, ಅಪ್ಪಣ್ಣನವರ ಜೀವನ, ತತ್ವ, ಸಿದ್ಧಾಂತಗಳನ್ನು ಎಲ್ಲರಿಗೂ ತಿಳಿಸಲು ಇಂದು ನಾಡಿನಾದ್ಯಂತ ಎಲ್ಲೆಡೆ ಜಯಂತಿಯನ್ನು ಆಚರಿಸಲಾಗುತ್ತಿದೆ. ಶರಣರ ವಚನಗಳನ್ನು ಆದರ್ಶವಾಗಿಟ್ಟುಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದರು.ಬಸವಶರಣ ಸೇವಾ ಸಮೀತಿ ಅಧ್ಯಕ್ಷ ಸಂಗಪ್ಪ ತಡವಲ್ ಮಾತನಾಡಿ, ಅಪ್ಪಣ್ಣನವರ ಜೀವನ, ಸಾಧನೆ, ಕಾಯಕನಿಷ್ಠೆ, ಅವರ ರಚನೆಯ ೨೫೦ ವಚನಗಳ ಸಾರ, ಮಹತ್ವ ಕುರಿತು ಸವಿಸ್ತಾರವಾಗಿ ಮಾತನಾಡಿದರು.ದಲಿತ ಸಂಘರ್ಷ ಸಮಿತಿ ಬೆಳಗಾವಿ ವಿಭಾಗೀಯ ಸಂಚಾಲಕ ರಾವುತ ತಳಕೇರಿ, ಶಿರಸ್ತೇದಾರ ಸುರೇಶ ಮ್ಯಾಗೇರಿ ಮಾತನಾಡಿ, ಅಪ್ಪಣ್ಣನವರು ಒಬ್ಬ…

Read More

ಬಬಲೇಶ್ವರ: ಭೂಮಿಯ ಮೇಲೆ ಜೀವಿಸುವ ಪ್ರತಿ ಜೀವಿಗೂ ನೀರು ಅವಶ್ಯಕವಾಗಿ ಬೇಕು. ಶಾಲೆ ಹಾಗೂ ಮನೆಗಳಲ್ಲಿ ನೀರು ಪೋಲಾಗದಂತೆ ಕ್ರಮ ವಹಿಸಿ ಜಲ ಸಂರಕ್ಷಣೆ ಮಾಡುವದು ನಮ್ಮೆಲ್ಲರ ಮಹತ್ವದ ಜವಾಬ್ದಾರಿಯಾಗಿದೆ ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಹೇಳಿದರು.ತಾಲ್ಲೂಕಿನ ಮಮದಾಪೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಜಲ ಸಂರಕ್ಷಣೆಯ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಏರ್ಪಡಿಸಿದ ಜಲದೂತ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ವಿಷಯ ಪರಿವೀಕ್ಷಕ ಸಿ.ಎಚ್. ಬಿರಾದಾರ ಮಾತನಾಡಿ, ಈ ಜಲಧೂತ ಕಾರ್ಯಕ್ರಮ ಇಲಾಖಾ ಕಾರ್ಯಕ್ರಮವಾಗದೇ ಜವಾಬ್ದಾರಿಯುತ ಕಾರ್ಯಕ್ರಮವಾಗಬೇಕು. ಭೂಮಿಯ ಮೇಲೆ ಸಾಕಷ್ಟು ನೀರು ಇದ್ದರೂ ಅದರಲ್ಲಿ ಶೆ. 2% ರಷ್ಟು ಮಾತ್ರ ಜೀವಿಗಳ ಉಪಯೋಗಕ್ಕೆ ಬರುತ್ತದೆ ಆದ್ದರಿಂದ ನೀರನ್ನು ಅನವಶ್ಯಕವಾಗಿ ಪೋಲು ಮಾಡದೇ ಪ್ರತಿ ಮನೆಯಲ್ಲಿ ಮಳೆ ನೀರು ಕೋಯ್ಲು ಮಾಡಬೇಕು ಎಂದರು.ವಿಜ್ಞಾನ ಶಿಕ್ಷಕಿ ಎಸ್.ವಿ.ವೈದ್ಯ ಮಾತನಾಡಿ ಮನೆಯ ಮೇಲ್ಚಾವಣೆಯ ನೀರಿನ ಸಂಗ್ರಹಣ ವಿಧಾನ, ಮನೆಗೊಂದು ಇಂಗು ಗುಂಡಿಗಳನ್ನು ನಿರ್ಮಿಸಿ ಮಳೆ ನೀರನ್ನು…

Read More

ದೇವರಹಿಪ್ಪರಗಿ: ಪಟ್ಟಣದ ಎರೆಜಮೀನುಗಳಿಗೆ ಸಂಪರ್ಕ ಕಲ್ಪಿಸುವ ತಾಂಡಾ ಮೂಲಕ ಹಾದು ಹೋಗುವ ಬಮ್ಮನಳ್ಳಿ ರಸ್ತೆಯನ್ನು ಜಾಲಿಗಿಡಗಂಟಿಗಳಿಂದ ಮುಕ್ತಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ರೈತರು ಆಗ್ರಹಿಸಿದ್ದಾರೆ.ಪಟ್ಟಣದ ತಾಂಡಾ ಮೂಲಕ ಬಮನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೇರಿದ ರೈತರು ಮುಳ್ಳಿನ ಗಿಡಗಂಟಿಗಳ ತೆರವುಗೊಳಿಸಲು ಆಗ್ರಹಿಸಿದರು.ಈ ಸಂದರ್ಭದಲ್ಲಿ ರೈತಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಉಪಾಧ್ಯಕ್ಷ ಸಂಪತ್ ಜಮಾದಾರ ಮಾತನಾಡಿ, ಪಟ್ಟಣ ಹಾಗೂ ತಾಂಡಾ ರೈತರ ಎರೆ ಜಮೀನುಗಳಿಗೆ ತೆರಳುವ ಡಾಂಬರ್ ರಸ್ತೆ ಉತ್ತಮವಾಗಿದ್ದು, ಆದರೆ ರಸ್ತೆಯ ಎಡ ಬಲಗಳಲ್ಲಿ ಜಾಲಿಗಿಡಗಳು ಬೃಹದಾಕಾರವಾಗಿ ಬೆಳೆದ ರಸ್ತೆಯನ್ನು ಕಿರಿದಾಗಿಸಿವೆ.ರಸ್ತೆಯ ಮೂಲಕ ಚಕ್ಕಡಿ ಹಾಗೂ ಬೈಕ್‌ಗಳಲ್ಲಿ ತೆರಳಬೇಕೆಂದರು ಪ್ರಯಾಣದಲ್ಲಿ ಮುಳ್ಳು ಚುಚ್ಚಿ ಗಾಯಗಳಾಗುತ್ತಿವೆ. ಇನ್ನೂ ಜಾಲಿಗಿಡಗಳ ಟೊಂಗೆಗಳು ಉದ್ದಾಗಿ ಬೆಳೆದು ರಸ್ತೆಯನ್ನು ಅತೀಕ್ರಮಿಸಿ ಅಪಘಾತಗಳಿಗೆ ಕಾರಣವಾಗುತ್ತಿವೆ. ಕೆಲವು ದಿನಗಳ ಹಿಂದೆ ಮುಳ್ಳು ಗಿಡದ ಕಾರಣವಾಗಿ ರೈತರು ಬೈಕ್ ಅಪಘಾತದಿಂದ ಗಾಯಗೊಂಡಿದ್ದಾರೆ. ಆದ್ದರಿಂದ ರಸ್ತೆಯ ಎಡಬಲಗಳಲ್ಲಿಯ ಮುಳ್ಳಿನ ಗಿಡಗಳನ್ನು ತೆಗೆದು ರೈತ ಸಮುದಾಯಕ್ಕೆ ಅನುಕೂಲ ಕಲ್ಪಿಸುವುದು ಅಗತ್ಯವಾಗಿದೆ. ಈ…

Read More

ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ತತ್ವಪದ ಹಾಗೂ ಜಾನಪದ ಹಾಡುಗಾರ್ತಿ ಇಮಾಂಬಿ ದೊಡಮನಿ ಅವರನ್ನು ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು,(ರಿ) ಮೈಸೂರು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಯಾದಗಿರಿ ಇವರ ಸಹಯೋಗದಲ್ಲಿ ಯಾದಗಿರಿ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಜು.೨೪ರಂದು ಬುಧವಾರ ಬೆಳಿಗ್ಗೆ ೧೧:೩೦ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳಾದ ಗೊ.ರು.ಚನ್ನಬಸಪ್ಪ ಅವರು ಪ್ರದಾನ ಮಾಡಲಿದ್ದಾರೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, (ರಿ) ಮೈಸೂರು ಪ್ರಕಟಣೆಯಲ್ಲಿ ತಿಳಿಸಿದೆ.

Read More