” ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಸಂಪೂರ್ಣ ಜನವಿರೋಧಿಯಾಗಿದ್ದು, ಯಾವುದೇ ಅಭಿವೃದ್ಧಿ ಯೋಜನೆಗೆ ಮಹತ್ವ ನೀಡಿಲ್ಲ. ಕಳೆದ ಹತ್ತು ವರ್ಷಗಳಿಂದ ಕೇವಲ ಬಜೆಟ್ ಮಂಡನೆಯಾಗುತ್ತಿದೆ ಅಷ್ಟೇ, ಅದರ ಅನುಷ್ಠಾನವಾಗುತ್ತಿಲ್ಲ. ಜನರಿಗೆ ಕೇವಲ ಮಾತಿನಿಂದಲೇ ಮರಳು ಮಾಡುತ್ತ ಮೋಡಿ ಮಾಡುತ್ತಿದ್ದಾರೆ. ಮದ್ಯಮ ಕೆಳವರ್ಗದ ಸಂಪೂರ್ಣ ವಿರೋಧಿ ಬಜೆಟ್ ಆಗಿದ್ದು, ಶ್ರೀಮಂತರ ಪರವಾಗಿದೆ. ಇವರ ಒಂದು ಯೋಜನೆಗಳು ಪೂರ್ಣಗೊಂಡಿಲ್ಲ. ಇರುವ ಯೋಜನೆಗಳೆಲ್ಲ ಕಳಪೆ ಮಟ್ಟದ್ದಾಗಿದ್ದು, ಇದ್ದ ವಸ್ತುಗಳಿಗೆಲ್ಲ ಜಿಎಸ್‌ಟಿ ಮೂಲಕ ಬೆಲೆ ಹೆಚ್ಚಳ ಮಾಡಿದ್ದು, ಜನಸಮಾನ್ಯರಿಗೆ ಹೊರೆಯಾಗಿದೆ. ವಿಶೇಷವಾಗಿ ನಮ್ಮ ಕರ್ನಾಟಕಕ್ಕೆ ಯಾವುದೇ ಹೇಳಿಕೊಳ್ಳುವಂತ ಯೋಜನೆಗಳನ್ನು ನೀಡದೆ ಮಲತಾಯಿ ಧೋರಣೆ ಮುಂದುವರೆಸಿದ್ದಾರೆ.”
– ಅಬ್ದುಲ್‌ಹಮೀದ ಮುಶ್ರೀಫ್
ಕಾಂಗ್ರೆಸ್ ಮುಖಂಡರು, ವಿಜಯಪುರ

