” ಪ್ರಸ್ತುತ ಬಜೆಟ್ಟಿನಲ್ಲಿ ಮೀನುಗಾರಿಕಾ ಇಲಾಖೆಗೆ ೨೫೮೪. ೫೦ ಕೋಟಿ ರೂ ಮೀಸಲಾಗಿಟ್ಟಿರುವುದು ಸ್ವಾಗತಾರ್ಹ.
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಆಕ್ವಾಕಲ್ಚರ್ ಉತ್ಪಾದನೆಯನ್ನು ಹೆಚ್ಚಿಸಲು, ರಫ್ತುಗಳನ್ನು ೧ ಲಕ್ಷ ಕೋಟಿಗೆ ದ್ವಿಗುಣಗೊಳಿಸಲು ಮತ್ತು ೫೫ ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮಾಡಿರುವ ಪ್ರಯತ್ನ , ಹವಾಮಾನ ಸ್ಥಿತಿಸ್ಥಾಪಕ ಚಟುವಟಿಕೆಗಳನ್ನು ಉತ್ತೇಜಿಸಲು ನೀಲಿ ಆರ್ಥಿಕತೆ ೨.0 ಆರಂಭಿಸುವ ಯೋಜನೆ, ಸಮಗ್ರ ಮತ್ತು ಬಹುವಲಯ ವಿಧಾನದೊಂದಿಗೆ ಕರಾವಳಿ ಜಲಕೃಷಿ ಮತ್ತು ಮಾರಿಕಲ್ಚರ್ ಅಭಿವೃದ್ಧಿ ಮಾಡುವ ಯೋಜನೆಗಳು ಶ್ಲಾಘನೀಯ.
ಮತ್ತೊಮ್ಮೆ ಮೀನುಗಾರರ ಆರೋಗ್ಯ ವಿಮೆ ಮತ್ತು ಮೀನುಗಾರಿಕೆಯ ಸಂಧರ್ಭದಲ್ಲಿ ಆಗುವ ಅವಘಡ ಅಪಘಾತಗಳಿಗೆ ಪರಿಹಾರ ಪ್ರಸ್ತಾಪಿಸದೆ ಇರುವುದು ಬೇಸರ ತಂದಿದೆ.”
ಡಾ.ಗೌತಮ್ ಆರ್ ಚೌಧರಿ
ರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ಸಂಘ

