ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ ಬಣ) ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ದೇಶದ ಇನ್ನಿತರ ಪರೀಕ್ಷೆಗಳ ಅವ್ಯವಸ್ಥೆಯನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಆನಂದ ಅವರ ಮುಖಾಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣನವರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳು ವ್ಯವಸ್ಥೆಯನ್ನು ಸುಧಾರಿಸುವ ಅವಕಾಶಗಳು ಆಗಿರುತವೆ. ಸರಕಾರಗಳು ಜನರ ಅಸಮಾಧನವನ್ನು ಅಲಿಸುವ ಸಾಮರ್ಥ್ಯ ಹೊಂದಿದಾಗ ಮಾತ್ರ ಅವು ಬಲಿಷ್ಠವಾಗುತ್ತದೆ. ದೇಶದ ಯುವ ಜನತೆ ಭವಿಷ್ಯಕ್ಕೆ ಧಕ್ಕೆ ತರುತ್ತಿರುವ ದೇಶದ ಪರೀಕ್ಷೆಗಳ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಜೀವ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ಕೂಡಲೇ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ರಮೇಶ ದರಣಾಕರ, ಮಹಾಂತೇಶ ಸಾಸಬಾಳ, ವಿಶ್ವನಾಥ ದೊಡಮನಿ, ದೊಂಡಪ್ಪ ನಾಟೀಕಾರ, ಶಂಕರ ಚಲವಾದಿ, ರಾಜು ಕಟ್ಟಿಮನಿ, ಚೈತನ ಸಿಂದಗಿ, ಆಸೀಫ್ ಪಟೇಲ, ಪ್ರೇಮ ಚಲವಾದಿ, ವಿಜು ಕವಲಗಿ, ಆಕಾಶ್ ಹಿಪ್ಪರಗಿ, ಶುಭಾಷ ಚಂದ್ರಶೇಖರ ಮಲ್ಕಣವರ ಮತ್ತಿತರರು ಉಪಸ್ಥಿತರಿದ್ದರು.

