ದೇವರಹಿಪ್ಪರಗಿ: ಪಟ್ಟಣದ ಎರೆಜಮೀನುಗಳಿಗೆ ಸಂಪರ್ಕ ಕಲ್ಪಿಸುವ ತಾಂಡಾ ಮೂಲಕ ಹಾದು ಹೋಗುವ ಬಮ್ಮನಳ್ಳಿ ರಸ್ತೆಯನ್ನು ಜಾಲಿಗಿಡಗಂಟಿಗಳಿಂದ ಮುಕ್ತಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ರೈತರು ಆಗ್ರಹಿಸಿದ್ದಾರೆ.
ಪಟ್ಟಣದ ತಾಂಡಾ ಮೂಲಕ ಬಮನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೇರಿದ ರೈತರು ಮುಳ್ಳಿನ ಗಿಡಗಂಟಿಗಳ ತೆರವುಗೊಳಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಉಪಾಧ್ಯಕ್ಷ ಸಂಪತ್ ಜಮಾದಾರ ಮಾತನಾಡಿ, ಪಟ್ಟಣ ಹಾಗೂ ತಾಂಡಾ ರೈತರ ಎರೆ ಜಮೀನುಗಳಿಗೆ ತೆರಳುವ ಡಾಂಬರ್ ರಸ್ತೆ ಉತ್ತಮವಾಗಿದ್ದು, ಆದರೆ ರಸ್ತೆಯ ಎಡ ಬಲಗಳಲ್ಲಿ ಜಾಲಿಗಿಡಗಳು ಬೃಹದಾಕಾರವಾಗಿ ಬೆಳೆದ ರಸ್ತೆಯನ್ನು ಕಿರಿದಾಗಿಸಿವೆ.
ರಸ್ತೆಯ ಮೂಲಕ ಚಕ್ಕಡಿ ಹಾಗೂ ಬೈಕ್‌ಗಳಲ್ಲಿ ತೆರಳಬೇಕೆಂದರು ಪ್ರಯಾಣದಲ್ಲಿ ಮುಳ್ಳು ಚುಚ್ಚಿ ಗಾಯಗಳಾಗುತ್ತಿವೆ. ಇನ್ನೂ ಜಾಲಿಗಿಡಗಳ ಟೊಂಗೆಗಳು ಉದ್ದಾಗಿ ಬೆಳೆದು ರಸ್ತೆಯನ್ನು ಅತೀಕ್ರಮಿಸಿ ಅಪಘಾತಗಳಿಗೆ ಕಾರಣವಾಗುತ್ತಿವೆ. ಕೆಲವು ದಿನಗಳ ಹಿಂದೆ ಮುಳ್ಳು ಗಿಡದ ಕಾರಣವಾಗಿ ರೈತರು ಬೈಕ್ ಅಪಘಾತದಿಂದ ಗಾಯಗೊಂಡಿದ್ದಾರೆ. ಆದ್ದರಿಂದ ರಸ್ತೆಯ ಎಡಬಲಗಳಲ್ಲಿಯ ಮುಳ್ಳಿನ ಗಿಡಗಳನ್ನು ತೆಗೆದು ರೈತ ಸಮುದಾಯಕ್ಕೆ ಅನುಕೂಲ ಕಲ್ಪಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತಹಶೀಲ್ದಾರ, ಪಟ್ಟಣ ಪಂಚಾಯಿತಿ ಹಾಗೂ ಕ್ಷೇತ್ರದ ಶಾಸಕರಾಗಲಿ ಕೂಡಲೇ ಕ್ರಮ ಕೈಗೊಂಡು ರೈತರಿಗೆ ಸ್ಪಂದಿಸುವಂತೆ ಆಗ್ರಹಿಸಿದರು.
ಈರಣ್ಣ ಬೆಟಗೇರಿ, ಗುರು ಕುಳಗೇರಿ, ಅನೀಲಗೌಡ ಪಾಟೀಲ, ಮಡಿವಾಳಪ್ಪ ಬಿರಾದಾರ, ಶ್ರೀಶೈಲ ಇಂಚಗೇರಿ, ಮುತ್ತು ಸಾಲವಾಡಗಿ, ಸಿದ್ಧನಗೌಡ ಬಿರಾದಾರ, ಶ್ರೀಕಾಂತ ಸೌದಿ, ಮುದು ವಗ್ಗರ, ಮಡು ಯಾಳಗಿ, ಮಾಂತು ಜಮಾದಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

