ಬಬಲೇಶ್ವರ: ಭೂಮಿಯ ಮೇಲೆ ಜೀವಿಸುವ ಪ್ರತಿ ಜೀವಿಗೂ ನೀರು ಅವಶ್ಯಕವಾಗಿ ಬೇಕು. ಶಾಲೆ ಹಾಗೂ ಮನೆಗಳಲ್ಲಿ ನೀರು ಪೋಲಾಗದಂತೆ ಕ್ರಮ ವಹಿಸಿ ಜಲ ಸಂರಕ್ಷಣೆ ಮಾಡುವದು ನಮ್ಮೆಲ್ಲರ ಮಹತ್ವದ ಜವಾಬ್ದಾರಿಯಾಗಿದೆ ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಹೇಳಿದರು.
ತಾಲ್ಲೂಕಿನ ಮಮದಾಪೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಜಲ ಸಂರಕ್ಷಣೆಯ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಏರ್ಪಡಿಸಿದ ಜಲದೂತ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಷಯ ಪರಿವೀಕ್ಷಕ ಸಿ.ಎಚ್. ಬಿರಾದಾರ ಮಾತನಾಡಿ, ಈ ಜಲಧೂತ ಕಾರ್ಯಕ್ರಮ ಇಲಾಖಾ ಕಾರ್ಯಕ್ರಮವಾಗದೇ ಜವಾಬ್ದಾರಿಯುತ ಕಾರ್ಯಕ್ರಮವಾಗಬೇಕು. ಭೂಮಿಯ ಮೇಲೆ ಸಾಕಷ್ಟು ನೀರು ಇದ್ದರೂ ಅದರಲ್ಲಿ ಶೆ. 2% ರಷ್ಟು ಮಾತ್ರ ಜೀವಿಗಳ ಉಪಯೋಗಕ್ಕೆ ಬರುತ್ತದೆ ಆದ್ದರಿಂದ ನೀರನ್ನು ಅನವಶ್ಯಕವಾಗಿ ಪೋಲು ಮಾಡದೇ ಪ್ರತಿ ಮನೆಯಲ್ಲಿ ಮಳೆ ನೀರು ಕೋಯ್ಲು ಮಾಡಬೇಕು ಎಂದರು.
ವಿಜ್ಞಾನ ಶಿಕ್ಷಕಿ ಎಸ್.ವಿ.ವೈದ್ಯ ಮಾತನಾಡಿ ಮನೆಯ ಮೇಲ್ಚಾವಣೆಯ ನೀರಿನ ಸಂಗ್ರಹಣ ವಿಧಾನ, ಮನೆಗೊಂದು ಇಂಗು ಗುಂಡಿಗಳನ್ನು ನಿರ್ಮಿಸಿ ಮಳೆ ನೀರನ್ನು ಹೆಚ್ಚು ಹೆಚ್ಚು ಬಳಸಬೇಕು ಎಂದರು.
ಗ್ರಾಮದಲ್ಲಿ ಮಕ್ಕಳಿಂದ ಪ್ರಭಾತಪೇರಿ ಮಾಡುತ್ತಾ ಮಳೆ ನೀರು ಕೊಯ್ಲು ಬೀದಿ ನಾಟಕ ಹಾಗೂ ರೂಪಕ ಪ್ರದರ್ಶನ ನೀಡಿ ಜಲ ಸಂರಕ್ಷಣೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಉಪಪ್ರಾಚಾರ್ಯ ರಾಘವೇಂದ್ರ ಪುರೋಹಿತ, , ಶಿಕ್ಷಣ ಸಂಯೋಜಕ ಸುರೇಶ ರಾಠೋಡ, ಸಿಆರ್ಪಿ ಎಸ್.ಎಸ್.ಕಾಂಬಳೆ, ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಿಕಾರ್ಜುನ ಗಂಗೂರ, ಎಂ.ಜಿ.ಕುರಿ ಸದಸ್ಯರು, ಎಸ್ಡಿಎಂಸಿ ಸದಸ್ಯರು, ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

